Breaking News

Yearly Archives: 2021

ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ

ದಾವಣಗೆರೆ: ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ ವರದಿಯಾಗಿದೆ. ಒಟ್ಟಾರೆ ಏಳು ಬಾರಿ ವಿವಿಧ ಟೋಲ್‌ಗ‌ಳಲ್ಲಿ ಶುಲ್ಕ ಕಡಿತಗೊಂಡಿದೆ. ಹಾಗಾಗಿ ಕಾರಿನ ಮಾಲಕರು ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ದಾವಣಗೆರೆ ಸಮೀಪದ ಆವರಗೆರೆ ನಿವಾಸಿ, ನ್ಯಾಯವಾದಿ ಎಸ್‌. ಪರಮೇಶ್‌ ಎಂಬವರ ಇನ್ನೋವಾ ಕಾರು (ಕೆಎ-17, ಎನ್‌-6828) ಮನೆಯ ಮುಂದೆಯೇ ನಿಂತಿತ್ತು. ಆದರೂ ಮಾ.31ರ ರಾತ್ರಿ …

Read More »

ಸತೀಶ ಅಣ್ಣನವರಿಗೆ ನರೇಗಾ ಕಾಯಕ ಬಂಧುಗಳ ಬೆಂಬಲ “: ಲಕ್ಷ್ಮೀ ಆರ್ ಹೆಬ್ಬಾಳಕರ್

ನರೇಗಾ ಯೋಜನೆಯಡಿ ಕೆಲಸ ಮಾಡುವ ನೂರಕ್ಕೂ ಹೆಚ್ಚಿನ ಕಾಯಕ ಬಂಧುಗಳ ಸಭೆಯನ್ನು ಆಯೋಜಿಸಿ, ಶ್ರೀ ಸತೀಶಣ್ಣಾ ಜಾರಕಿಹೊಳಿಯವರನ್ನು ಬೆಂಬಲಿಸುವ ಮೂಲಕ ಲೋಕಸಭೆಗೆ ಆಯ್ಕೆ ಮಾಡೋಣವೆಂದು ನರೇಗಾದ ಕಾಯಕ ಬಂಧುಗಳಲ್ಲಿ ಮನವಿಯನ್ನು ಮಾಡಿಕೊಂಡೆ. ನಾವೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುವುದರೊಂದಿಗೆ ಸತೀಶಣ್ಣನವರ ಕೈಗಳನ್ನು ಬಲ ಪಡಿಸೋಣ, ಅವರನ್ನು ಪ್ರಚಂಡ ಬಹುಮತಗಳಿಂದ ಆರಿಸಿ ತಂದು ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕೆಲಸಗಳಿಗೆ ಕಾರಣರಾಗೋಣ ಸತೀಶಣ್ಣನವರು ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಅನೇಕ …

Read More »

ಕೊರೊನಾ ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವರು ..!

ಸರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ covid-19 ಎರಡನೆಯ ಅಲೆಯಾಗಿ ಪ್ರಾರಂಭವಾಗಿದ್ದು ಎಲ್ಲರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜನದಟ್ಟಣೆಯಿಂದ ದೂರ ಇರಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು     ಕರ್ನಾಟಕ ರಾಜ್ಯ ಸರ್ಕಾರ ಆದೇಶ ಏನೆಂದರೆ ಯಾವುದೇ ಹಬ್ಬಹರಿದಿನಗಳ ಆಚರಣೆಯನ್ನು ನಿಬಂಧನೆ ಮಾಡಲಾಗಿದೆ ಸಾರ್ವಜನಿಕರು ಜಾತ್ರೆಗಳಿಂದ, ಮತ್ತು ಸಭೆ ಸಮಾರಂಭಗಳಿಂದ ದೂರವಿರುವುದು ಉತ್ತಮ ಉದ್ಯಾನವನಗಳಲ್ಲಿ, (ಸೇರುವುದು) ಮದುವೆ, ಜಾತ್ರೆಯಲ್ಲಿ, ಸೇರುವುದು ನಿಷೇಧಿಸಲಾಗಿದೆ. ಎಂದು ಪಿ ಎಸ್ ಐ ವಾಲಿಕರ್ …

Read More »

ಮಸ್ಕಿಯಲ್ಲಿ ಹಾರದ ಹೆಲಿಕಾಪ್ಟರ್‌ ಧೂಳು!

ಮಸ್ಕಿ: ಚುನಾವಣೆ ಆಯೋಗದ ಮಿತಿಗೆ ತಕ್ಕಂತೆ ಖರ್ಚು-ವೆಚ್ಚ ಸರಿದೂಗಿಸಲು ರಾಜಕೀಯ ಪಕ್ಷಗಳು ಹೆಣಗುತ್ತಿವೆ. ಇದರ ಮೊದಲ ಭಾಗವಾಗಿಯೇ ಮಸ್ಕಿಯಲ್ಲಿ ಹೆಲಿಪ್ಯಾಡ್‌ ಬದಲು ನೆರೆ-ಹೊರೆಯಲ್ಲಿ ಲೋಹದ ಹಕ್ಕಿಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ! ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷದಿಂದಲೂ ಇಂತಹ ತಂತ್ರ ಅನುಸರಿಸಲಾಗಿದೆ. ಚುನಾವಣೆ ಖರ್ಚು-ವೆಚ್ಚಕ್ಕೆ ಆಯೋಗ ಮಿತಿ ಹೇರಿದೆ. ಪ್ರತಿ ಅಭ್ಯರ್ಥಿಗೆ 27 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ ಇಲ್ಲಿ ಉಪಚುನಾವಣೆ ಕಣದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ, ಮುಖಂಡರ …

Read More »

ಸರ್ಕಾರದ ನಿರ್ಧಾರ ಕೇಳಿ ನನಗೆ ಶಾಕ್ ಆಯ್ತು : ಕಿಚ್ಚ

ಬೆಂಗಳೂರು, ಏ.3- ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ಅತ್ಯಂತ ಶಾಂಕಿಂಗ್ ವಿಷಯ. ಸಿನಿ ರಂಗಕ್ಕೆ ಸಂಕಷ್ಟದ ವಿಷಯ ಕೂಡ ಎಂದು ಚಿತ್ರನಟ ಸುದೀಪ್ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಈ ನಿಯಮ ಒಳ್ಳೆಯ ಉದ್ದೇಶಕ್ಕೆ ಜಾರಿ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದು …

Read More »

ರಾತ್ರಿ ಪಾರ್ಟಿ ಬೆನ್ನಲ್ಲೇ ಮನೆಯಲ್ಲಿ ಬೆಂಕಿ: 5 ವರ್ಷದ ಮಗ-ಸ್ನೇಹಿತ ಸಾವು, ಕೊಲೆ ಶಂಕೆ

ಮೈಸೂರು: ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮಗು ಹಾಗೂ ಓರ್ವ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯಲ್ಲಿ ನಡೆದಿದೆ. ತನ್ವೀತ್​(5) ಹಾಗು ದೀಪಕ್​ ಮೃತ ದುರ್ದೈವಿಗಳು. ಕಳಸ ಮೂಲದ ಪೇಂಟರ್​ ಭರತ್​ ಮೈಸೂರಲ್ಲಿ​ ಬಾಡಿಗೆ ಮನೆ ಮಾಡಿಕೊಂಡು ಪುತ್ರ ತನ್ವಿತ್ ಜೊತೆ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಭರತ್​​ ಎಣ್ಣೆ ಪಾರ್ಟಿ ಆಯೋಜಿಸಿದ್ದರು. ಸ್ನೇಹಿತರೆಲ್ಲ ರಾತ್ರಿ ಪೂರ ವಿಪರೀತ ಮದ್ಯಪಾನ ಮಾಡಿದ್ದರು. ಬಳಿಕ ಭರತ್​ನ ಒಬ್ಬ …

Read More »

ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರಾಟ : ಮೂವರ ಬಂಧನ

ಚಿಂಚಲಿ :  ಕುಡಚಿ ಪಟ್ಟಣದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಧಿಕ ನಬಿಲಾಲ ಮೇವೆಗಾರ (41), ಜಾಫರ ಬಾಬಾಸಾಬ ಮುಲ್ಲಾ(60) , ಪರಶುರಾಮ ಕಾಂಬಳೆ (32) ಬಂಧಿತರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 22.000 ಸಾವಿರ ಮೊತ್ತದ 2025 ಗ್ರಾಮ ಗಾಂಜಾ ಹಾಗೂ 450 ನಗದು, 4 ಮೊಬೈಲ್  ವಶಕ್ಕೆ ಪಡೆದುಕೊಂಡಿದ್ದಾರೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ …

Read More »

ಸತೀಶಣ್ಣನವರನ್ನು ಬೆಂಬಲಿಸಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಹಾಗೂ ನಮ್ಮೆಲ್ಲರ ಕೂಗನ್ನು ದಿಲ್ಲಿಯವರೆಗೆ ಮುಟ್ಟಿಸೋಣ “

ಸತೀಶಣ್ಣನವರನ್ನು ಬೆಂಬಲಿಸಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಹಾಗೂ ನಮ್ಮೆಲ್ಲರ ಕೂಗನ್ನು ದಿಲ್ಲಿಯವರೆಗೆ ಮುಟ್ಟಿಸೋಣ “ ಹಿರೇ ಬಾಗೇವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಬರಲಿರುವ ಲೋಕಸಭಾ ಉಪ ಚುನಾವಣೆಯ ಸಲುವಾಗಿ ಸಭೆಯನ್ನು ನಡೆಸಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತ ಯಾಚಿಸಲಾಯಿತು. ಕಾಂಗ್ರೆಸ್ ಪಕ್ಷವು ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪಕ್ಷವಾಗಿ ಹೊರಹೊಮ್ಮಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದಿದೆ, ನೂರಾರು ವರ್ಷಗಳ ಇತಿಹಾಸವಿರುವ …

Read More »

ಬೆಳಗಾವಿಯ ಸಿಐಡಿ ಪೋಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ

ಬೆಳಗಾವಿ- ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಸಿಐಡಿ ಪೋಲೀಸರು,ತಂದೆ,ಮತ್ತು ಮಗ,ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಕೋಟ್ಯಾಂತರ ರೂ ವಂಚಿಸಿದ ಆರೋಪದ ಮೇಲೆ ಆಝಂ ನಗರದ ನಿವಾಸಿಗಳಾದ ತಂದೆ ಮತ್ತು ಮಗನ ಮೇಲೆ ಪ್ರಕರಣ ದಾಖಲಾಗಿತ್ತು, ಪ್ರಕರಣದ ವಿಚಾರಣೆ ನಡೆಸಿರು ಸಿಐಡಿ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಝಂ ನಗರದ ತಂದೆ ಮಹ್ಮದ ಅಬ್ಬಾಸ್ ಹುಸೇನ್ …

Read More »

7 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಮತ್ತೆ ಅಜ್ಞಾತ ಸ್ಥಳಕ್ಕೆ CD ಯುವತಿ

ಬೆಂಗಳೂರು: CD ಪ್ರಕರಣದ ಸಂತ್ರಸ್ತ ಯುವತಿಯ ಇಂದಿನ ವಿಚಾರಣೆ ಅಂತ್ಯವಾಗಿದೆ. ಸಂತ್ರಸ್ತೆ ಇಂದು ಮಧ್ಯಾಹ್ನ 12.30ರ ವೇಳೆಗೆ ಆಡುಗೋಡಿಯ ಟೆಕ್ನಿಕಲ್​ ಸೆಲ್​ನಲ್ಲಿ ವಿಚಾರಣೆಗೆ ಹಾಜರಾಗಿದ್ದು, ಎಸ್​ಐಟಿಯ ಎಸಿಪಿ ಕವಿತಾ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ನಿನ್ನೆ ಯುವತಿ ಈ ಹಿಂದೆ ವಾಸವಿದ್ದ ಸ್ಥಳ ಹಾಗೂ ಮಂತ್ರಿ ಗ್ರೌಡ್ಸ್​​ ಅಪಾರ್ಟ್​ಮೆಂಟ್​ನಲ್ಲಿ ಸ್ಥಳ ಮಹಜರು ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಇಂದು ಅಧಿಕಾರಿಗಳು ಯುವತಿಯನ್ನು ವಿಚಾರಣೆ …

Read More »