ಬೆಳಗಾವಿ : ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಡಿಸ್ಚಾರ್ಜ್, ಇನ್ನು ಕೆಲ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏಪ್ರಿಲ್ 4ರಂದು ರಾತ್ರಿ 10.30ರ ಸುಮಾರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಬಿಪಿ, ಶುಗರ್ …
Read More »Yearly Archives: 2021
ಸಂಸದ ಅನಂತ ಕುಮಾರ ಹೆಗೆಡೆಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ, ಪ್ರಕರಣ ದಾಖಲು
ಶಿರಸಿ: ಇತ್ತೀಚಿಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಮಂಗಳವಾರದಂದು ಬೆದರಿಕೆ ಕರೆ ಬಂದ ನಂತರ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಗೋವಿಂದ ಶೆಟ್ಟಿ ಅವರಿಂದ ಹೊಸ ಮಾರುಕಟ್ಟೆ ಠಾಣೆಯಲ್ಲಿ ಜೀವ ಬೆದರಿಕೆಯ ದೂರು ದಾಖಲಾಗಿದೆ. ಶಿರಸಿಯಲ್ಲಿರುವ ಸಂಸದರ ಮನೆಗೆ ಕರೆಮಾಡಿದ ವ್ಯಕ್ತಿಯು, ‘ನೀನು ಅನಂತ ಕುಮಾರ ಹೆಗಡೆ, ಬಿಜೆಪಿ ಪಕ್ಷದ ಸಂಸದ….. ಹೌದು ತಾನೆ? ನಾನು ಹಿಂದಿನ ಬಾರಿ ಕರೆ ಮಾಡಿದ್ದಾಗ ಪೊಲೀಸ್ ಠಾಣೆಗೆ …
Read More »ಅಧಿಕಾರದ ಅವಧಿ ಪೂರೈಸುತ್ತೀರಿ: ಯಡಿಯೂರಪ್ಪ ಅವರಿಗೆ ಜೈನ ಮುನಿ ಆಶೀರ್ವಾದ
ಬೆಳಗಾವಿ: ‘ನೀವು ಅಧಿಕಾರದ ಅವಧಿ ಪೂರೈಸುತ್ತೀರಿ. ಚಿಂತೆ ಬಿಡಿ. ಬಳಿಕ ರಾಜ್ಯಪಾಲ, ಉಪ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಆಗುತ್ತೀರಿ’ ಎಂದು ತಾಲ್ಲೂಕಿನ ಹಲಗಾದ ಸಿದ್ಧಸೇನಾ ಮುನಿ ಅವರು ತಮ್ಮ ಬಳಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳವಾರ ಆಶೀರ್ವಾದ ಮಾಡಿದರು. ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಹೇಳಿ’ ಎಂದು ಯಡಿಯೂರಪ್ಪ ಕೇಳಿದಾಗ ಪ್ರತಿಕ್ರಿಯಿಸಿದ ಮುನಿ, ’40 ಸಾವಿರ ಮತಗಳ ಅಂತರದಿಂದ ಮಂಗಲಾ ಅಂಗಡಿ ಗೆಲ್ಲುತ್ತಾರೆ’ …
Read More »ಸಿಡಿ ಬಂದ ವೇಗದಲ್ಲೇ ಮರಳಿ ಹೋಗುತ್ತದೆ : ಸಚಿವ ಆರ್. ಶಂಕರ್
ಬಾಗಲಕೋಟೆ : ಮಾಜಿ ಸಚಿವ ರಮೇಶ ಜಾರಕಿಹೋಳಿ ಕುರಿತು ಬಿಡುಗಡೆಯಾಗಿರುವ ಸಿಡಿ, ಎಷ್ಟು ವೇಗವಾಗಿ ಬಂತೋ ಅಷ್ಟೇ ವೇಗದಲ್ಲಿ ಮರಳಿ ಹೋಗುತ್ತದೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್. ಶಂಕರ ಹೇಳಿದರು. ತೋಟಗಾರಿಕೆ ವಿವಿಯ 10ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೂರಕ್ಕೆ ನೂರರಷ್ಟು ಸಿಡಿ ಮರಳಿ ಹೋಗುತ್ತದೆ. ಜನರು ಸಿಡಿ-ಪಿಡಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರು ಉಪ ಚುನಾವಣೆಯಲ್ಲೂ …
Read More »14 ಚಿನ್ನದ ಪದಕಕ್ಕೆ ಕೊರಳೊಡ್ಡಿದ ರೈತನ ಮಗ
ಬಾಗಲಕೋಟೆ : ಪುಟ್ಟ ಹಳ್ಳಿಯಲ್ಲಿ ಅಪ್ಪ ಹೊಲದಲ್ಲಿ ಹಸು ನೋಡಿಕೊಳ್ಳುತ್ತ ಕೃಷಿಯಲ್ಲಿ ತೊಡಗಿದ್ದರೆ, ಇತ್ತ ಮಗ ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡುತ್ತಿದ್ದ. ಈ ಅದ್ಭುತ ಘಳಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ತಾಯಿ-ಅಜ್ಜ ಆನಂದಬಾಷ್ಪ ಸುರಿಸಿದರು. ಹೌದು, ಇಂತಹ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕುನೂರ ಎಂಬ ಪುಟ್ಟ ಹಳ್ಳಿಯ ರೈತ ವೆಂಕಟೇಶ ಮತ್ತು …
Read More »ಮುತ್ತಪ್ಪ ರೈ ಆಸ್ತಿ ಪರಭಾರೆಗೆ ಸಿವಿಲ್ ಕೋರ್ಟ್ ಬ್ರೇಕ್
ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ತಿ ವಿಭಾಗ ಸಂಬಂಧ ಪತ್ನಿ ಅನುರಾಧಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್ ಸದ್ಯ ಆಸ್ತಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ನೀಡಿದೆ. ಮುತ್ತಪ್ಪ ರೈ ಅವರು ನಿಧನರಾದ ಬಳಿಕ ಎರಡನೇ ಪತ್ನಿ ಅನುರಾಧಾ ಅವರು ಪತಿಯ ಆಸ್ತಿಯನ್ನು ಪರಭಾರೆ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುತ್ತಪ್ಪ ರೈ ಪುತ್ರ ರಾಕಿ, …
Read More »7 ಜಿಲ್ಲೆಗಳಲ್ಲಿ ಶತಕ ದಾಟಿದ ಕೊರೊನಾ ಅಬ್ಬರ
ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಶತಕ ದಾಟಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ದಿನೇದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 4266 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಎಂದಿನಂತೆ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಕಲಬುರಗಿಯಲ್ಲಿ 261, ಮೈಸೂರಿನಲ್ಲಿ 237, ತುಮಕೂರು 157, ಮಂಡ್ಯ 102, ಹಾಸನ 110 ಮತ್ತು ಬೀದರ್ ನಲ್ಲಿ 167 ಪ್ರಕರಣಗಳು …
Read More »ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಪರೀಕ್ಷೆ ಬಗ್ಗೆ ಇಲ್ಲಿದೆ ವಿವರ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ 24 ರಿಂದ ಜೂನ್ 16 ರ ವರೆಗೆ ಪರೀಕ್ಷೆಗಳು ನಡೆಯಲಿವೆ. 6,72,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ವೇಳಾಪಟ್ಟಿ ಮೇ 24 ರಂದು ಇತಿಹಾಸ ಮೇ 25 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ಮೇ 26 ಭೂಗೋಳಶಾಸ್ತ್ರ ಮೇ 27 ಮನಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಮೇ 28 ತರ್ಕಶಾಸ್ತ್ರ …
Read More »ಬಾಗಲಕೋಟೆ : ಮಂಗಳವಾರ ರಾತ್ರಿಯೇ ತಟ್ಟಿದ ಮುಷ್ಕರ ಬಿಸಿ
ಬಾಗಲಕೋಟೆ : ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಬಾಗಲಕೋಟೆಯಲ್ಲಿ ಮುಷ್ಕರದ ಬಿಸಿ ಮಂಗಳವಾರ ರಾತ್ರಿಯೇ ತಟ್ಟಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ವ್ಯಾಪ್ತಿಯಿಂದ ನಿತ್ಯ 443 ಬಸ್‌ಗಳು ಪ್ರಯಾಣಿಸುತ್ತವೆ. ನಿತ್ಯವೂ ಈ ಬಸ್‌ಗಳು ಜಿಲ್ಲೆಯಾದ್ಯಂತ ಓಡಾಡುತ್ತಿದ್ದವು. ಆದರೆ, ಮಂಗಳವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಈ ಬಸ್‌ಗಳು ಓಡಾಡಿದ್ದು, ರಾತ್ರಿ ಗ್ರಾಮೀಣ ಭಾಗಕ್ಕೆ ವಾಸ್ತವ್ಯ (ವಸತಿ …
Read More »ಜನತೆಗೆ ತಟ್ಟಿದ ಸಾರಿಗೆ ಮುಷ್ಕರ ಬಿಸಿ, ಖಾಸಗಿ ವಾಹನಗಳಿಂದ ಸುಲಿಗೆ -ಪ್ರಯಾಣಿಕರ ಪರದಾಟ
ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಗೊಂಡಿದ್ದು, ರಾಜ್ಯದ ಜನತೆಗೆ ಮುಷ್ಕರದ ಬಿಸಿ ತಟ್ಟಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಮುಷ್ಕರ ಆರಂಭವಾಗುತ್ತಿದ್ದಂತೆ ಡೀಸೆಲ್ ದರ 80 ರ ರೂಪಾಯಿ ಇದೆ ಎಂದು ಹೇಳುತ್ತಿರುವ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಬದಲಿ …
Read More »