Breaking News

Yearly Archives: 2021

ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯಗಳನ್ನು ತಿಳಿಸಿದ್ದಾರೆ.

ನವದೆಹಲಿ : ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯಗಳನ್ನು ತಿಳಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಶುಭಾಶಯ ಕೋರಿದ್ದು, ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು, ಮುಂಬರುವ ವರ್ಷ ಅದ್ಭುತಬವಾಗಲಿ, ನೀವೆಲ್ಲರೂ ಆರೋಗ್ಯ ಹಾಗೂ ಸಂತಸದಿಂದಿರಿ, ಎಲ್ಲೆಡೆ ಸಮೃದ್ಧಿ ಹಾಗೂ ಸಂತೋಷ ಪಸರಿಸಲಿ ಎಂದು ಶುಭಕೋರಿದ್ದಾರೆ. ದೇಶಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ. ಕೊರೊನಾ ನಡುವೆಯೂ ನಿಯಮಗಳನ್ನು ಪಾಲಿಸುವ ಮೂಲಕ …

Read More »

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ: ಈಶ್ವರಪ್ಪ

ಧಾರವಾಡ: ನೋಟು ಕೌಂಟಿಂಗ್ ಮಷಿನ್ ಇಟ್ಟುಕೊಳ್ಳುವದರಲ್ಲಿ ತಪ್ಪಿಲ್ಲ, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಹುಚ್ಚರ ರೀತಿಯಲ್ಲಿ ಮಾತನಾಡುವುದು ಶೋಭೆ ತರಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ವ್ಯಾಪಾರ ಮಾಡುವವರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇರುತ್ತದೆ. ಇದನ್ನು ಹೊರತು ನೋಟು ಪ್ರಿಂಟ್ ಮಷಿನ್ ಇಲ್ಲವಲ್ಲಾ ಎಂದರು. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಬಂದವರು. ಹೀಗಾಗಿ ಏನೇನೂ ಮಾತನಾಡುತ್ತಾರೆ. …

Read More »

ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

ರಾಯಚೂರು: ಮಸ್ಕಿ ಉಪ ಚುನಾವಣಾ ಸಮರ ದಿನೇ ದಿನೇ ರಂಗೇರುತ್ತಿದೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಮತ ನೀಡುವಂತೆ ಬಿಜೆಪಿ ಮಾಜಿ ಶಾಸಕ ಎನ್.ಎಸ್. ನಂದೀಶ್ ಹಣ ಹಂಚಿಕೆ ಮಾಡಿದ್ದಾರೆ. ಹಣ ಹಂಚಿಕೆ ಮಾಡಿದವರ ಹಾಗೂ ಹಣ ಪಡೆದವರ ವಿರುದ್ಧ ಮಸ್ಕಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಅಮಿತ್, ಚಿಟ್ಟಿಬಾಬು, ಹಣ ಪಡೆದ ವೃದ್ದೆ ತಾಯಮ್ಮ ಮೂವರನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. …

Read More »

ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರ ಮತಬೇಟೆ

ಬೆಳಗಾವಿ: ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಮತಬೇಟೆಗೆ ಅಖಾಡಕ್ಕೆ ಇಳಿದಿದ್ದು, ರಕ್ಷಾ ರಾಮಯ್ಯ ನೇತೃತ್ವದಲ್ಲಿ ಮೊದಗಾ ಗ್ರಾಮದಲ್ಲಿ ಬೈಕ್ ರ್ಯಾಲಿ ಕೈಗೊಳ್ಳುವ ಮುಖೇನ ಸತೀಶ್ ಜಾರಕಿಹೊಳಿ ಪರ ಮತ ಪ್ರಚಾರ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯನವರು ಯುವ ಕಾಂಗ್ರೆಸ್ ಶಕ್ತಿಯಿಂದಾಗಿಯೇ ಭಾರತವು ಇಂದು …

Read More »

ಬಾಲಚಂದ್ರ ಜಾರಕಿಹೊಳಿ ಉಪಚುನಾವಣಾ ಅಖಾಡಕ್ಕೆ ,ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ಇರುವುದರಿಂದ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್

ಬೆಳಗಾವಿ: ಕೆಲಸದ ಒತ್ತಡಗಳಿಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ಉಪಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಮಂಗಳಾ ಅಂಗಡಿ ಪರ ಪ್ರಚಾರ ನಡೆಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ಇರುವುದರಿಂದ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇಂದು ವರದಿಯಲ್ಲಿ ಏನು ಬರಲಿದೆ ಎಂಬುದನ್ನು ನೋಡಿಕೊಂಡು ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸುತ್ತಾರೆ. ಬೆಳಗಾವಿ ಕ್ಷೇತ್ರದಿಂದ ಮಂಗಲಾ ಅಂಗಡಿಯವರನ್ನು ಗೆಲ್ಲಿಸಿ ಸಂಸತ್ …

Read More »

ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಬೆಳಗಾವಿಗೆ ಮತ್ತೆ ಸಿಎಂ B.S.Y.

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಭಾರತೀಯ ಜನತಾ ಪಾರ್ಟಿ ಈಗ ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.                       ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಮತಗಳು ಹೆಚ್ಚಿದ್ದು, ಆ ಮತಗಳು ಸತೀಶ್ ಜಾರಕಿಹೊಳಿಗೆ ಹೋದಲ್ಲಿ ಬಿಜೆಪಿ ಬೆಳಗಾವಿ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕ ಉಂಟಾಗಿದೆ. ರಮೇಶ …

Read More »

ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಲೇಡಿ ಹೇಳಿಕೆ ಯುಟರ್ನ್, ಏನಿದರ ಸತ್ಯಾಸತ್ಯತೆ?

ಬೆಂಗಳೂರು, ಏಪ್ರಿಲ್ 12: ಕೊರೋನಾ ಎರಡನೇ ಅಲೆ ಹಾಗೂ ಸಾರಿಗೆ ನೌಕರರ ಮುಷ್ಕರದ ಗದ್ದಲದೊಳಗೆ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೋಮವಾರ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಸಿಡಿ ಸಂತ್ರಸ್ತ ಯುವತಿ “ಸಿಡಿ ಪ್ರಕರಣದ ವಾಸ್ತವವನ್ನು ಎಸ್‌ಐಟಿ ಅಧಿಕಾರಿಗಳ ಮುಂದೆ ಬಿಚ್ಚಿಡಲು ಕೇಳಿಕೊಂಡಿದ್ದಾಳೆ ಎಂಬ ವಿಷಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ಸಿಡಿ ಲೇಡಿ ನಿಜವಾಗಿಯೂ ಉಲ್ಟಾ ಹೊಡೆದಿದ್ದಾಳಾ ? ಅಥವಾ ಮುಂದೆ ಯು ಟರ್ನ್ ಹೊಡೆಯಲಿದ್ದಾಳಾ ? ಒಂದು …

Read More »

ಕೊರೊನಾ ಕೂಪವಾಯ್ತು ಬೆಂಗಳೂರು : ಇಂದು ಮತ್ತೆ ಕೊರೊನಾ ಬ್ಲಾಸ್ಟ್ Corona

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿದೆ. ನಗರದ ಗಲ್ಲಿ ಗಲ್ಲಿಯಲ್ಲೂ ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಮೆಟ್ರೋ ಮಂದಿಗೆ ಆಘಾತ ನೀಡಿದ್ದರೇ ಇಂದು ಮತ್ತೆ ಕೊರೊನಾ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಇಂದು 6574 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಖ್ಯವಾಗಿ ಬೆಂಗಳೂರು ದಕ್ಷಿಣ ವಿಭಾಗದಲ್ಲೇ ಅತಿ ಹೆಚ್ಚು …

Read More »

ಹಬ್ಬಕ್ಕೆ ಬರಲು ಆಗುತ್ತಿಲ್ಲ: ಪೂನಾದಲ್ಲಿ ಸಿಲುಕಿದ ಕಾರ್ಮಿಕರಿಂದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ

ಯಾದಗಿರಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಆತಂಕ ತಲೆದೋರಿದ್ದು ದಿನೇ ದಿನೇ ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಕಾರ್ಮಿಕರು ವಾಪಸ್ ಬರುತ್ತಿದ್ದಾರೆ. ರಾಜ್ಯದ ಸಾರಿಗೆ ನೌಕರರ ಮುಷ್ಕರದ ಬಿಸಿ ಈಗ ಮಹಾರಾಷ್ಟ್ರದಲ್ಲಿ ನೆಲೆಸಿರುವ ರಾಜ್ಯದ ಕಾರ್ಮಿಕರಿಗೆ ತಟ್ಟಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿರುವ ಕೊರೋನಾ ಆತಂಕ ಹಾಗೂ ಯುಗಾದಿ ಹಬ್ಬಕ್ಕೆ ವಾಪಸ್ ಊರಿಗೆ ತೆರಬೇಕೆಂದಿರುವ ಜನರಿಗೆ ಈಗ ರಾಜ್ಯದ ಸಾರಿಗೆ ಮುಷ್ಕರ ಸಂಕಷ್ಟ ತಂದಿದ. ಊರಿಗೆ ಬರಲು ಕಾರ್ಮಿಕರು ಪರದಾಡುವಂತಾಗಿದೆ. ಮಹಾರಾಷ್ಟ್ರದ ಪೂನಾ, ಮುಂಬೈ …

Read More »

ಮಾಸ್ಕ್, ಸಾಮಾಜಿಕ ಅಂತರ ಇಲ್ಲದ ಮೇಕೆ ಸಂತೆ

ಕೊರಟಗೆರೆ: ಯುಗಾದಿ ಹಬ್ಬದ ವರ್ಷದ ತೊಡಕಿಗೆ ಈಗಲೇ ಕುರಿ ಮೇಕೆಗಳನ್ನುಕೊಂಡುಕೊಳ್ಳಲು ಜನರು ಮುಂದಾಗಿದ್ದರಿಂದ, ಮಾರುಕಟ್ಟೆಗಳಲ್ಲಿ ಜನದಟ್ಟನೆ ಕಂಡು ಬಂತು. ಮಂಗಳವಾರ ಯುಗಾದಿ ಹಬ್ಬ. ಹಬ್ಬದ ಮರುದಿನ ವರ್ಷದ ತೊಡಕು. ಮಂಗಳವಾರ ಹಬ್ಬ ಇರುವುದರಿಂದ ಅಂದು ಮೇಕೆ-ಕುರಿ ಮಾರುಕಟ್ಟೆಇರುವುದಿಲ್ಲ. ಹಾಗಾಗಿ ಜನರು ಮೊದಲೇ ಖರೀದಿಗೆ ಮುಂದಾದರು. ಹಬ್ಬದ ಮರುದಿನ ವರ್ಷ ತೊಡಕು ಭರ್ಜರಿಯಾಗಿ ನಡೆಯುತ್ತದೆ. ಬಾಡೂಟದ ಘಮಲು ಮೂಗು, ಮನಸನ್ನು ಸೆಳೆಯುತ್ತದೆ. ಅಕ್ಕಿರಾಂಪುರ ಮೇಕೆ ಕುರಿತಂತೆ ರಾಜ್ಯದಲ್ಲಿಯೇ ಹೆಸರಾಗಿದ್ದು, ನಾನಾ ಮೂಲೆಗಳಿಂದ …

Read More »