Breaking News

Yearly Archives: 2021

ಕಳೆದ 24 ಗಂಟೆಗಳಲ್ಲಿ 3 ಬಾರಿ ಆಮ್ಲಜನಕ ಪೂರೈಕೆಗೆ ಸರ್ಕಾರದಿಂದ ಆರ್ಡರ್

ನವದೆಹಲಿ, : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಮ್ಲಜನಕ ಪೂರೈಸಲು ಕೇಂದ್ರ ಸರ್ಕಾರವು ಕಳೆದ 24 ಗಂಟೆಗಳಲ್ಲಿ 3 ಬಾರಿ ಆರ್ಡರ್ ಮಾಡಿದೆ. ಕಳೆದ 10 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗುತ್ತಿದ್ದು, ಆಕ್ಸಿಜನ್ ಪೂರೈಕೆಯಿಲ್ಲದೆ ರೋಗಿಗಳು ಮೃತಪಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಸರ್ಕಾರವು ಆಕ್ಸಿಜನ್ ಸಿಲಿಂಡರ್‌ಗಾಗಿ ಒಂದೇ ದಿನದಲ್ಲಿ ಮೂರು ಬಾರಿ ಆರ್ಡರ್ ಮಾಡಿದೆ. ದೇಶಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ …

Read More »

ಬಸವಕಲ್ಯಾಣ ಉಪಚುನಾವಣೆ: ಹಣ ಹಂಚಲು ಬಂದವರಿಗೆ ಗ್ರಾಮಸ್ಥರಿಂದ ಚಪ್ಪಲಿ ಏಟು

ಬಸವಕಲ್ಯಾಣ : ತಾಲ್ಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ಮತದಾರರಿಗೆ ಹಣ ಹಂಚಲು ಬಂದಾಗ ಗ್ರಾಮಸ್ಥರು ಚಪ್ಪಲಿಯಿಂದ ಹೊಡೆದಿದ್ದಾರೆ.’ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೆ? ನಿಮ್ಮ ಹಣ ನಮಗೆ ಏಕೆ ಕೊಡುತ್ತಿದ್ದೀರಿ’ ಎನ್ನುತ್ತ ವ್ಯಕ್ತಿಯ ಕೈಯಲ್ಲಿದ್ದ ನೋಟುಗಳನ್ನು ಕಿತ್ತುಕೊಂಡ ಗ್ರಾಮಸ್ಥರು ಅವುಗಳನ್ನು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಫ್ಲೈಯಿಂಗ್‌ ಸ್ಕ್ವಾಡ್‌, ಪೊಲೀಸರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು …

Read More »

ಬೆಂಗಳೂರಿಗರೇ 15 ದಿನಗಳ ಅಜ್ಞಾತವಾಸಕ್ಕೆ ಸಿದ್ಧರಾಗಿ..?!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಹೀಗೆ ಮುಂದುವರಿದ್ರೆ ಬೆಂಗಳೂರು ಕೊರೊನಾ ಕೂಪವಾಗುವುದರಲ್ಲಿ ಸಂಶಯವೇ ಇಲ್ಲ. ಈ ಮಧ್ಯೆ ತಜ್ಞರು ಕೂಡ ಕೊರೊನಾಗೆ ಬ್ರೇಕ್ ಹಾಕಲು ಬೆಂಗಳೂರಲ್ಲಿ ಕನಿಷ್ಠ 10 ದಿನ ಲಾಕ್ ಡೌನ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 20 ರ ನಂತರ ಮತ್ತೊಮ್ಮೆ ಸಭೆ …

Read More »

ಪಟ್ಟಭದ್ರ ಹಿತಾಸಕ್ತಿಗಳಿಂದ ನೌಕರರ ಮಾತುಕತೆ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ; ಮುಷ್ಕರ ಅಂತ್ಯಗೊಳಿಸುವಂತೆ ಸವದಿ ಮನವಿ

ಬೆಂಗಳೂರು : ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕನ ಮೇಲೆ ಹಲ್ಲೆಯಿಂದಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಮುಷ್ಕರ ನಿರತರು ತಾವೂ ಕೆಲಸ ಮಾಡುವುದಿಲ್ಲ, ಇತರ ನಿಷ್ಠಾವಂತರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಘಟನೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಷ್ಠಾವಂತ ಚಾಲಕರಾದ ಅವಟಿ ಎಂಬವರು ಜಮಖಂಡಿಯ ಸಮೀಪದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ …

Read More »

ಉಪ ಚುನಾವಣೆ: ಬೆಳಗಾವಿಯಲ್ಲಿಶೇ.12.29, ಮಸ್ಕಿಯಲ್ಲಿ ಶೇ.19.30, ಬಸವಕಲ್ಯಾಣದಲ್ಲಿ ಶೇ.19.40ರಷ್ಟು ಮತದಾನ

ಬಸವಕಲ್ಯಾಣ/ಬೆಳಗಾವಿ/ಮಸ್ಕಿ: ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಮತದಾನ ಮುಂದುವರಿದಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇಕಡಾ 19.40ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಇಲ್ಲಿಯವರೆಗೆ ಮತದಾರರ ಪ್ರತಿಕ್ರಿಯೆ ನೀರಸವಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇಕಡಾ 12.29ರಷ್ಟು ಮಾತ್ರ ಮತದಾನ ನಡೆದಿದೆ. ಬೆಳಗಾವಿ, ರಾಮದುರ್ಗ, ಸೌಂದತ್ತಿಯಲ್ಲಿ ಮತದಾರರ ನೀರಸ ಪ್ರತಿಕ್ರಿಯೆಯಿದ್ದರೆ, ಸೂಕ್ಷ್ಮ …

Read More »

ಬಸವಕಲ್ಯಾಣ : ಶೇ. 19.48ರಷ್ಟು ಮತದಾನ

ಬೀದರ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಶನಿವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದ್ದು, ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಶೇ.19.48 ರಷ್ಟು ಮತದಾನ ದಾಖಲಾಗಿದೆ. ಹೆಚ್ಚುವರಿ 62 ಮತಗಟ್ಟೆಗಳು ಸೇರಿದಂತೆ ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 231 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಮತ್ತು ಇತರೇ …

Read More »

ಬೆಳಗಾವಿ ಉಪಚುನಾವಣೆ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಶಾಂತಿಯುತವಾಗಿ ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆಯವರೆಗೆ ಶೇ 5.47 ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಶಾಂತಿಯುತ ಮತದಾನವಾಗುತ್ತಿರುವ ಮಧ್ಯೆ ತಮ್ಮ ಹಳ್ಳಿಯ ಸ್ಥಳಾಂತರಕ್ಕೆ ಒತ್ತಾಯಿಸಿ ರಾಮದುರ್ಗ‌ ತಾಲೂಕಿನ ಪ್ರವಾಹ ಪೀಡಿತ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.‌ ಗ್ರಾಮದ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳ …

Read More »

ರಾಯಚೂರು: ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಕಿಡಿ

ರಾಯಚೂರು: ಮಸ್ಕಿ ಕ್ಷೇತ್ರದ ಕುರುಕುಂದಾ ಗ್ರಾಮದಲ್ಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಮತಗಟ್ಟೆಯ ನೂರು ಮೀಟರ್ ಒಳಗೆ ಇರಬಾರದು ಎಂಬ ನೀತಿ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅನುಸರಿಲಾಗುತ್ತಿದೆ. ಬಿಜೆಪಿಯವರು ನಿಂತಿದ್ದರು ಕ್ಯಾರೆ ಎನ್ನದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಕಾಲರ್ ಹಿಡಿದು ಆಚೆ ಕಳುಹಿಸುತ್ತಿದ್ದಾರೆ. ಪೊಲೀಸರ ಬಿಜೆಪಿಯವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತೆ ಪದ್ಮಾವತಿ ದೂರಿದರು. ಪೊಲೀಸರು ಹಾಗೂ …

Read More »

ಕೊವಿಡ್-19 ನಿಯಂತ್ರಣಕ್ಕೆ ಹೊಸ ಅಸ್ತ್ರ; ಲಾಕ್​ಡೌನ್​ ಮಾಡುವ ಬದಲು ಈ ಯೋಜನೆಗೆ ಸಿದ್ಧವಾಗ್ತಿದೆಯಾ ಸರ್ಕಾರ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೊಮ್ಮೆ ಲಾಕ್​ಡೌನ್​ ಹೇರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆಯಾಗಿದ್ದು, ಏಪ್ರಿಲ್​ 20ರವರೆಗೆ ನೈಟ್​ ಕರ್ಫ್ಯೂ ಮುಂದುವರಿಯಲಿದೆ. ಮಂಗಳವಾರ ಇನ್ನೊಂದು ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ನಿನ್ನೆ ತಿಳಿಸಿದ್ದಾರೆ. ಆದರೆ ಸರ್ಕಾರ ಕೊರೊನಾವನ್ನು ಮಣಿಸಲು ಇನ್ನೊಂದು ಹೊಸ ಪ್ಲ್ಯಾನ್​ ಮಾಡಿದೆ ಎನ್ನಲಾಗಿದೆ. ನೈಟ್​ ಕರ್ಫ್ಯೂ ಸಮಯ ಬದಲಿಸಲು ಮುಂದಾಗಿದೆ. ಬಹುತೇಕ …

Read More »

ದಾರಿ ತಪ್ಪಿ ದೆಹಲಿ ತಲುಪಿದ ವೃದ್ಧೆ;ಕರಳು ಬಳ್ಳಿಗೆ ಸೇರಿಸಿದ ಯೋಧ

ಬಾಗಲಕೋಟೆ: ಮೊಮ್ಮಗನ ಜತೆಗೆ ತಿರುಪತಿ ದರ್ಶನಕ್ಕೆ ಹೋಗಿದ್ದ ಜಿಲ್ಲೆಯ ವೃದ್ಧೆಯೊಬ್ಬರು ರೈಲು ಹತ್ತುವಾಗ ತಪ್ಪಿ ಬೇರೊಂದು ರೈಲು ಏರಿದ್ದರಿಂದ ದೆಹಲಿ ತಲುಪಿದ್ದು, ಆ ವೃದ್ಧೆಯನ್ನು ಸೈನಿಕರೊಬ್ಬರು ಕರಳು ಬಳ್ಳಿಗೆ ಕೂಡಿಸಲು ನೆರವಾಗಿದ್ದಾರೆ. ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ಶಿವಮ್ಮ ಪಾಟೀಲ ಎಂಬ ವೃದ್ಧೆ, ಕಳೆದ ಶನಿವಾರ ತಿರುಪತಿಗೆ ಹೋಗಿದ್ದರು. ತಿರುಪತಿ ದರ್ಶನ ಮುಗಿದ ಬಳಿಕ ರೈಲ್ವೆ ನಿಲ್ದಾಣದಲ್ಲಿ ಮೊಮ್ಮಗನೊಂದಿಗೆ ಇದ್ದ ವೃದ್ಧೆ ಗದ್ದಲದಲ್ಲಿ ಪ್ರತ್ಯೇಕಗೊಂಡಿದ್ದರು. ಮೊಮ್ಮಗ ರೈಲು ನಿಲ್ದಾಣದಲ್ಲಿ ವೃದ್ಧೆಗಾಗಿ …

Read More »