ಕನ್ನಡ ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಎಲ್ಲ ಮನರಂಜನಾ ವಾಹಿನಿಗಳು ಧಾರಾವಾಹಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಟಿಆರ್ಪಿಯಲ್ಲಿ ನಂ.1 ಸ್ಥಾನ ಪಡೆದುಕೊಳ್ಳಬೇಕು ಎಂದು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಅಂಥ ಸಾಧನೆ ಸಾಧ್ಯವಾಗುವುದು ಕೆಲವೇ ಸೀರಿಯಲ್ಗಳಿಗೆ ಮಾತ್ರ. ಟಿಆರ್ಪಿ ರೇಸ್ನಲ್ಲಿ ಹಲವು ವಾರಗಳ ಕಾಲ ನಂ.1 ಪಟ್ಟ ಕಾಪಾಡಿಕೊಂಡ ಸತ್ಯ ಸೀರಿಯಲ್ ಈಗ ಇನ್ನೊಂದು ಮೈಲಿಗಲ್ಲು ತಲುಪಿದೆ. ಕಳೆದ ವರ್ಷ ಲಾಕ್‍ಡೌನ್ ಸಡಿಲಿಕೆ ಆದ ಬಳಿಕ ಜೀ …
Read More »Yearly Archives: 2021
ದಪ್ಪಗಿದ್ದ ನಟಿ ಸೋನಾಕ್ಷಿ ಸಿನ್ಹಾ ಈಗ ಹೇಗಾಗಿದ್ದಾರೆ ನೋಡಿ
ಬಾಡಿ ಶೇಮಿಂಗ್ ವಿಚಾರವಾಗಿ ಯಾವಾಗಲು ಟ್ರೋಲ್ ಆಗುತ್ತಿದ್ದ ನಟಿ ಸೋನಾಕ್ಷಿ ಸಿನ್ಹಾ. ದಪ್ಪಗೆ ಗುಂಡಗಿದ್ದ ಸೋನಾಕ್ಷಿ ತೂಕದ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಿದ್ದರು. ನಟಿಯಮಣಿಯರು ಸ್ಲಿಮ್ ಅಂಡ್ ಫಿಟ್ ಆಗಿ ಇರುತ್ತಾರೆ. ಸದಾ ವರ್ಕೌಟ್ ಡಯಟ್ ಅಂತ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಆದರೆ ಸೋನಾಕ್ಷಿ ದಪ್ಪಗೆ ಇದ್ದರು. ಆದರೀಗ ಅಚ್ಚರಿಯ ರೀತಿಯಲ್ಲಿ ಸೋನಾಕ್ಷಿ ಬದಲಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಸೋನಾಕ್ಷಿ ಈಗ ಬಳಕುವ ಬಳ್ಳಿಯಂತೆ ಆಗಿದ್ದಾರೆ. ಕೊರೊನಾದಿಂದ ಎಲ್ಲರೂ …
Read More »ಕೊನೆಗೂ ಫಲಿಸಿತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ; ಸೋನು ಸೂದ್ಗೆ ಕೊರೊನಾ ನೆಗೆಟಿವ್
ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಡವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ಸೋನು ಸೂದ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಈಗ ಈ ಪ್ರಾರ್ಥನೆಗೆ ಫಲ ಸಿಕ್ಕಿದೆ. ಸೋನು ಸೂದ್ಗೆ ಕೊರೊನಾ ನೆಗೆಟಿವ್ ಬಂದಿದೆ. ‘ಕೊವಿಡ್ ಪಾಸಿಟಿವ್ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್ ಪಾಸಿಟಿವ್ ಆಗಿದೆ. ಎಲ್ಲರಿಗೂ …
Read More »ಕುಂಟು ನೆಪ ಒಡ್ಡಿ ಮನೆಯಿಂದ ಹೊರಬಂದರೆ ಬಂಧಿಸುತ್ತೇವೆ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು: ಇಂದು ರಾತ್ರಿಯಿಂದ ಕರ್ಫ್ಯೂ ಇರುವ ಕಾರಣ ಕುಂಟು ನೆಪ ಹೇಳಿಕೊಂಡು ಹೊರಬಂದರೆ ಬಂಧಿಸುತ್ತೇವೆ. ಅನಗತ್ಯವಾಗಿ ವಾಹನ ರಸ್ತೆಗಿಳಿಸಿದರೆ ಪ್ರಕರಣ ದಾಖಲಿಸುತ್ತೇವೆ. ವಾರಾಂತ್ಯದ ಕರ್ಫ್ಯೂಗೆ ಬೆಂಗಳೂರಿನ ಜನತೆ ಸಹಕರಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮನವಿಪೂರ್ವಕ ಎಚ್ಚರಿಕೆ ನೀಡಿದ್ದಾರೆ. ರಾತ್ರಿ 9ರಿಂದ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಸ್ವಿಗ್ಗಿ, ಜೊಮ್ಯಾಟೊ ಟಿ ಶರ್ಟ್ಗಳು ದುರ್ಬಳಕೆಯಾಗುತ್ತಿವೆ. ಸ್ವಿಗ್ಗಿ, ಜೊಮ್ಯಾಟೊಗೆ ಸಂಬಂಧಿಸದವರು ಟಿ ಶರ್ಟ್ ಬಳಸಿ ಹೊರಗೆ ಬಂದರೆ ಕೂಡಲೇ …
Read More »ಮಾಜಿ ಸಚಿವ ಆರ್.ವಿ. ದೇಶಪಾಂಡೆಗೆ ಕೊರೊನಾ ಸೋಂಕು ದೃಢ
ಕಾರವಾರ: ಮಾಜಿ ಸಚಿವ ಆರ್.ವಿ. ದೇಶಪಾಂಡೆಗೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ದೇಶಪಾಂಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮಗೆ ಕೊರೊನಾ ಸೋಂಕು ಬಂದಿರುವ ಬಗ್ಗೆ ಪ್ರಕಟಿಸಿರುವ ದೇಶಪಾಂಡೆ ಅವರು ತನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಕೊರೊನಾ ತಗುಲಿದ್ದು ಇಂದು …
Read More »ವಲಸೆ ಕಾರ್ಮಿಕರು ಮರಳಿ ಹೋಗದಂತೆ ಸರ್ಕಾರ ಮನವಿ
ಬೆಂಗಳೂರು,ಏ.23- ಕೋವಿಡ್ ನಿಯಂತ್ರಣಕ್ಕಾಗಿ ದೇಶಾದ್ಯಂತ್ ಲಾಕ್‍ಡೌನ್ ಜಾರಿಗೊಳಿಸುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲದೇ ಇರುವುದರಿಂದ ಕಾರ್ಮಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಮಿಕ ಇಲಾಖೆ ಮನವಿ ಮಾಡಿದೆ. ಒಂದೆಡೆ ಪೊಲೀಸರು ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಅಂಗಡಿಗಳನ್ನು ಮುಚ್ಚಿಸಿಕೊಂಡು ಬರುತ್ತಿದ್ದಾರೆ. ಮಾಲೀಕರು ವ್ಯವಹಾರ ನಡೆಸದೇ ಇರುವುದರಿಂದ ಕಾರ್ಮಿಕರಿಗೆ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್ ಹಾಗೂ ನೀರಿನ ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲು ಪರದಾಡುವ ಸ್ಥಿತಿಯಲ್ಲಿದೆ. ವಾಸ್ತವತೆ ಕಣ್ಣೆದುರಿಗೇ …
Read More »ಮತ್ತೆ ಲಾಕ್‍ಡೌನ್ ಮಾಡಿದ್ರೆ ದುರಂತ ಆಗತ್ತೆ; ದುಡ್ಡಿಲ್ಲದೇ ನೋವು ತೋಡಿಕೊಂಡ ಹಿರಿಯ ನಟ
ಕೊರೊನಾ ವೈರಸ್ ಎರಡನೇ ಅಲೆಗೆ ಭಾರತದಲ್ಲಿ ಹೆಣಗಳು ಉರುಳುತ್ತಿವೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿಯಂತೂ ಕೈ ಮೀರಿ ಹೋಗುತ್ತಿದೆ. ಹಾಗಾಗಿ ಅಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಏ.14ರಿಂದ 15 ದಿನಗಳ ಲಾಕ್‍ಡೌನ್ ಜಾರಿಯಲ್ಲಿದೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅನೇಕ ಕಲಾವಿದರ ಜೀವನಕ್ಕೆ ತೊಂದರೆ ಆಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತುಂಬ ಕಷ್ಟದ ದಿನಗಳು ಬರಲಿವೆ ಎಂದು ಹಿರಿಯ ನಟ ಆಯುಬ್ ಖಾನ್ ಹೇಳಿದ್ದಾರೆ. ಸಿನಿಮಾ …
Read More »ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ
ಶಿವಮೊಗ್ಗ: “ಸಾಯಬೇಕೋ, ವ್ಯಾಪಾರ ಮಾಡಬೇಕೋ ವ್ಯಾಪಾರಸ್ಥರೇ ತೀರ್ಮಾನ ಮಾಡಬೇಕು. ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ವ್ಯಕ್ತಿ ತಾನು ಬದುಕಿದ್ದರೆ ತಾನೆ ನಾಳೆ ವ್ಯಾಪಾರ ಮಾಡಬಹುದು. ಕೋವಿಡ್ ಬಂದು ಆಸ್ಪತ್ರೆಗೆ ಹೋಗಿ ಏನು ಚಿಕಿತ್ಸೆ ಸಿಗದೆ ಸತ್ತರೆ ಅದು ಒಳ್ಳೆಯದಾ? ವ್ಯಾಪಾರ ನಿಲ್ಲಿಸಿ ಹೆಂಡತಿ ಮಕ್ಕಳೊಂದಿಗೆ ಮೂರ್ನಾಲ್ಕು ದಿನ ಸಂತೋಷವಾಗಿ ಇರುವುದು ಒಳ್ಳೆಯದಾ ಯೋಚನೆ ಮಾಡಿ” ಇದು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವ್ಯಾಪಾರಸ್ಥರಿಗೆ ನೀಡಿದ ಸಲಹೆಗಳು. ಶಿವಮೊಗ್ಗದಲ್ಲಿ …
Read More »ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ
ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ನಿರ್ವಹಣೆಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಿದರು. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿದರು. ಆರೋಗ್ಯ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ …
Read More »ಯುವಕರ ಜೊತೆ ಪ್ರೇಯಸಿಯ ಚಾಟಿಂಗ್ ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ..?
ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್ಗಳನ್ನು ತನ್ನ …
Read More »
Laxmi News 24×7