Breaking News

Yearly Archives: 2021

ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್

ನವದೆಹಲಿ:ಕೋವಿಡ್ ಸೋಂಕಿನಿಂದ ದುಡಿಯುತ್ತಿದ್ದ ಕುಟುಂಬದ ವ್ಯಕ್ತಿಯನ್ನು ಕಳೆದುಕೊಂಡಿದ್ದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದನ್ನು ವಿಸ್ತರಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ(ಮೇ 14) ಘೋಷಿಸಿದ್ದಾರೆ. ವರ್ಚುವಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ದೆಹಲಿ ಸರ್ಕಾರ ಭರಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ 8,500 ಕೋವಿಡ್ …

Read More »

ರಾಧೆ’ ಸಿನಿಮಾ, ಬಿಡುಗಡೆ ಆದ ದಿನವೇ ಲೀಕ್!

ಮುಂಬೈ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಕೊರೊನಾ ಹಾವಳಿಯ ನಡುವೆಯೂ ಅಭಿಮಾನಿಗಳನ್ನು ರಂಜಿಸಲು ಸಲ್ಲು ರಾಧೆ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ರಾಧೆ ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಆದರಂತೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದಂತೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸಿದ್ದಾರೆ. ಚಿತ್ರಕ್ಕೆ ಮೊದಲ ದಿನ ಮಿಶ್ರ …

Read More »

ಕೊರೋನಾ ಸಂಬಂಧಿತ ಲಸಿಕೆ ಪಡೆದಲ್ಲಿ ಮಾಸ್ಕ್ ಹಾಕುವುದು ಅಗತ್ಯವಿಲ್ಲ ಎಂದು ಅಮೇರಿಕಾ

ನ್ಯೂಯಾರ್ಕ್ – ಕೊರೋನಾ ಸಂಬಂಧಿತ ಲಸಿಕೆ ಪಡೆದಲ್ಲಿ ಮಾಸ್ಕ್ ಹಾಕುವುದು ಅಗತ್ಯವಿಲ್ಲ ಎಂದು ಅಮೇರಿಕಾದ ರೋಗ ನಿಯಂತ್ರಣ ಮಂಡಳಿ ತಿಳಿಸಿದೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಿಲ್ಲ ಎಂದು ಮಂಡಳಿ ತಿಳಿಸಿದೆ. ಅಮೇರಿಕಾ ಅಧ್ಯಕ್ಷ ಜೊ ಬೈಡನ್ ಕೂಡಾ ಈ ಹೇಳಿಕೆಯನ್ನು ಶೇರ್ ಮಾಡಿದ್ದಾರೆ. ಇದರಿಂದಾಗಿ ಅಮೇರಿಕಾದಲ್ಲಿ ಲಸಿಕೆ ಪಡೆಯಲು ಇನ್ನಷ್ಟು ಜನರು ಮುಂದೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದರೆ ಭಾರತದಲ್ಲಿ …

Read More »

ಬೆಳಗಾವಿ ನಗರದಲ್ಲಿ  ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ

ಬೆಳಗಾವಿ – ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಗುರುವಾರ (ಮೇ 13) ಬೆಳಗಾವಿ ನಗರದಲ್ಲಿ   ಪತ್ರಿಕಾಗೋಷ್ಠಿ ನಡೆಸಿದರು. ಅದರ ಪ್ರಮುಖಾಂಶಗಳು ಇಲ್ಲಿವೆ- * ನಗರ ಮತ್ತು ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಲು ತಕ್ಷಣವೇ ಕ್ರಮ‌ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ. ತಹಶೀಲ್ದಾರರ ಮೂಲಕ ತ್ವರಿತ ಕ್ರಮಕ್ಕೆ ನಿರ್ದೇಶನ. * ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾಕರಣ ಆರಂಭಿಸಲು ಡಿ.ಎಚ್.ಓ. ಅವರಿಗೆ ಸೂಚನೆ. * ಜನಪ್ರತಿನಿಧಿಗಳ …

Read More »

ಬೆಳಗಾವಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಧ್ಯ ಲಭ್ಯವಿರುವ ಬೆಡ್ ಮಾಹಿತಿ

ಬೆಳಗಾವಿ – ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಗಾಗಿ ಆಸ್ಪತ್ರೆಗಳಿಗೆ ತಡಕಾಟ ಹೆಚ್ಚುತ್ತಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದರೆ ಸೋಂಕಿತರ ಸ್ಥಿತಿ ಗಂಭೀರವಾಗಲಿದೆ. ಹಾಗಾಗಿ ಯಾವ ಆಸ್ಪತ್ರೆಗೆ ಹೋದರೆ ಬೆಡ್ ಲಭ್ಯವಿದೆ ಎನ್ನುವ ಮಾಹಿತಿ ಪಡೆದು ಹೋಗುವುದು ಉತ್ತಮ. ಸಧ್ಯ ಬೆಳಗಾವಿ ಜಿಲ್ಲೆಯ ಯಾವ ಆಸ್ಪತ್ರೆಯಲ್ಲಿ ಯಾವ ಬೆಡ್ ಲಭ್ಯವಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿಯಂತೆ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಲ್ಲಿ ಜಿಲ್ಲಾಡಳಿತ ಇಲ್ಲವೆ …

Read More »

ಪ್ರಧಾನಿ ಮೋದಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ : ಸಿದ್ದರಾಮಯ್ಯ ಲೇವಡಿ

ಬೆಂಗಳೂರು : ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೋರಾಟ ವಿಫಲವಾಗಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಶುಕ್ರವಾರ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ಕೊಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೇಂದ್ರಕ್ಕೆ ಛೀಮಾರಿ ಹಾಕಿದರೂ ರಾಜ್ಯಕ್ಕೆ ವ್ಯಾಕ್ಸಿನ್ ನೀಡಿಲ್ಲ. ಇಂತಹ ಬೇಜವಬ್ದಾರಿ ಸರ್ಕಾರವನ್ನು ನಾನು …

Read More »

ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್

ಬೆಂಗಳೂರು, : ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ಮಂಜೂರು ಮಾಡುವ ಪ್ರದೇಶಾಭಿವೃದ್ಧಿ ನಿಧಿಯಿಂದ ನೂರು ಕೋಟಿ ರೂ.ಗಳನ್ನು ಕೊರೊನಾ ಲಸಿಕೆಗಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಘೋಷಿಸಿದೆ.ಶುಕ್ರವಾರ ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ‌ಶಿವಕುಮಾರ್ ಅವರು ಈ ಘೋಷಣೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಲು 100 ಕೋಟಿ …

Read More »

ಕರ್ತವ್ಯನಿರತ ಪೊಲೀಸರ ಮೇಲೆ ಹರಿದ ಲಾರಿ; ಇಬ್ಬರು ಸಾವು

ವಿಜಯವಾಡ: ಲಾರಿ ಹರಿದು ಕರ್ತವ್ಯನಿರತ ಪೊಲೀಸರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ಮುಖ್ಯ ಪೊಲೀಸ್​ ಪೇದೆ ಸತ್ಯನಾರಾಯಣ ಮತ್ತು ಹೋಮ್​ ಗಾರ್ಡ್​ ಎನ್​. ಎಸ್​. ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಾಕಿನಾಡದ ತಿಮ್ಮಾಪುರಂ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಜಯವಾಡದಿಂದ ಬರುತ್ತಿದ್ದ ಲಸಿಕಾ ವಾಹನದ ಬೆಂಗಾವಲು ಸೇವೆಯಲ್ಲಿದ್ದರು. ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಇಬ್ಬರ ಮೇಲೆ ಹರಿದಿದ್ದು, ಸ್ಥಳದಲ್ಲೇ ಲಾರಿ ನಿಲ್ಲಿಸಿ ಚಾಲಕ ಮತ್ತು ಕ್ಲೀನರ್​ …

Read More »

ಪತಿ – ಮಗನಿಗೆ ಕೋವಿಡ್ ಪಾಸಿಟಿವ್ : ಮನನೊಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಕಲಬುರಗಿ: ಪತಿ ಹಾಗೂ ಮಗನಿಗೆ ಕೊರೊನಾ ಸೊಂಕು ತಗುಲಿದ್ದನ್ನು ನೊಂದುಕೊಂಡ‌ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ವೃತ್ತದ ಬಳಿಯಿರೋ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದುಮತಿ (56 ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಹಾಗೂ ಮಗನಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ಮಹಿಳೆ ನೊಂದುಕೊಂಡಿದ್ದಳು. ಇಂದುಮತಿ, ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನಿವಾಸಿಯಾಗಿದ್ದು, ಪತಿ ಮತ್ತು ಮಗನಿಗೆ ಸೋಂಕು ದೃಢವಾಗಿದ್ದರಿಂದ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆತಂದಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸಲು ಮೇ 9 ರಂದು ಹೊರಡಿಸಿದ ಪರಿಷ್ಕೃತ ಮಾರ್ಗ ಸೂಚಿಗಳು ಮೇ 10 ರ ಬೆಳಗ್ಗೆ 6 ರಿಂದ ಮೇ 24 ರ ಬೆಳಗ್ಗೆ 6 ಗಂಟೆ ತನಕ ಕಟ್ಟು ನಿಟ್ಟಾಗಿ …

Read More »