ಗದಗ: ಜಿಲ್ಲೆಯ ವರವಿ ಗ್ರಾಮದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಿಂದ ಸೋಂಕಿತ ವ್ಯಕ್ತಿಯೊಬ್ಬರು ಪರಾರಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಉತ್ತರ ಪ್ರದೇಶ ವಿಷ್ಣುಪುರ ಜಿಲ್ಲೆ ದೊರಿಯಾ ಗ್ರಾಮದ ಆಜಾದ್ ಚವ್ಹಾಣ್ (28 ವ) ಎಂಬಾತನಿಗೆ ಇತ್ತೀಚೆಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಸ್ಥಳೀಯ ರಸ್ತೆ ಕಾಮಗಾರಿಯಲ್ಲಿ ಕಾರ್ಮಿನಾಗಿದ್ದರಿಂದ ಸೂಕ್ತ ವಸತಿ, ಪೌಷ್ಠಿಕ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮೇ 20 ರಂದು ಕೇರ್ ಸೆಂಟರ್‌ಗೆ …
Read More »Yearly Archives: 2021
ಮಂಡ್ಯ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ
ಮಂಡ್ಯ: ಜಿಲ್ಲೆಯಾದ್ಯಂತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ. ಭಾನುವಾರ, ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಎಂದಿನಂತೆ ಅವಕಾಶ ಇರಲಿದೆ. ಉಳಿದಂತೆ ಮಂಗಳವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಂದು ಹೋಟೆಲ್ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಿದ್ದಾರೆ.
Read More »ಕೋವಿಡ್ ಲಸಿಕೆಯ 2ನೇ ಡೋಸ್ ನೀಡಲು ತರ್ಕಬದ್ಧ ನೀತಿ ಜಾರಿಗೊಳಿಸಿ: ಹೈಕೋರ್ಟ್
ಬೆಂಗಳೂರು, ಮೇ 21: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲು ತರ್ಕಬದ್ಧ ನೀತಿಯನ್ನು ಜಾರಿಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಮೇ 25ರಂದು ತರ್ಕಬದ್ಧವಾದ ಲಸಿಕೆ ನೀತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯದಲ್ಲಿ ಕೋವಿಡ್ ಲಸಿಕೆಯ ವ್ಯಾಪಕ ಕೊರತೆಯಿದೆ ಎಂಬ ವಿಚಾರವನ್ನು ಮನಗಂಡ ಮೇಲೆ ನ್ಯಾಯಾಲಯವು …
Read More »ಸಾಲಗಾರರ ಪರವಾಗಿ ಜಾಮೀನು ನೀಡಿದವರು ಸಾಲಕ್ಕೆ ಹೊಣೆಗಾರರು: ಸುಪ್ರೀಂಕೋರ್ಟ್
ನವದೆಹಲಿ : ಸಾಲ ಹಾಗೂ ಅದರ ವಸೂಲಿಯ ಕುರಿತು ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್. ಸಾಲ ಮರುಪಾವತಿಸದವರ ಪರವಾಗಿ ಜಾಮೀನು ನೀಡಿದವರು ಸಾಲಕ್ಕೆ ಹೊಣೆಗಾರರು ಎಂದ ಸುಪ್ರೀಂಕೋರ್ಟ್. ಸಾಲ ತೆಗೆದುಕೊಂಡವರು ಅದನ್ನು ಮರು ಪಾವತಿಸದಿದ್ದರೆ ಅದಕ್ಕೆ ಜಾಮೀನು ನೀಡಿದವರು ಕೂಡ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ . ಈ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ …
Read More »ಆಮ್ಲಜನಕ ಘಟಕದ ಕಾಮಗಾರಿಗೆ ಶಂಕುಸ್ಥಾಪನೆ , 20 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ
ಬೆಳಗಾವಿ – ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ ಘಟಕಕ್ಕೆ ಇಂದು ಶಾಸಕರುಗಳಾದ ಅಭಯ ಪಾಟೀಲ ಹಾಗೂ ಅನೀಲ ಬೆನಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎಲ್&ಟಿ ಕಂಪನಿಯ ವತಿಯಿಂದ ನಿರ್ಮಾಣಗೊಳ್ಳುವ ಈ ಘಟಕವು ಸುಮಾರು 60 ಲಕ್ಷ ರೂಪಾಯಿಗಳ ಅಂದಾಜು ಮೊತ್ತವಾಗಿದ್ದು, 50 ಚದರ ಅಡಿಯ ಜಾಗದಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು. ಇದರಿಂದ ಸುಮಾರು 50 ರಿಂದ 60 ಹಾಸಿಗೆಗಳಿಗೆ …
Read More »ಕೋವಿಡ್ ಕಾರಣಕ್ಕೆ ಎಲ್ಲಾ ತಪ್ಪಿಗೂ ಕ್ಷಮೆ ಸಿಗದು: ಹೈಕೋರ್ಟ್
ಬೆಂಗಳೂರು: ಎಲ್ಲಾ ಲೋಪಕ್ಕೂ ಕೋವಿಡ್ ಕಾರಣ ನೀಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿರೀಕ್ಷಣಾ ಜಾಮೀನು ಆದೇಶದಲ್ಲಿದ್ದ ನಿರ್ಬಂಧ ಸಡಿಲಿಕೆ ಕೋರಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ. 10 ದಿನಗಳಲ್ಲಿ ಪೊಲೀಸ್ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ. ಮಂಡ್ಯ ನಿವಾಸಿ ದೇವರಾಜ್ ಎಂಬುವರ ವಿರುದ್ಧ ನಾಗಮಂಗಲ ಗ್ರಾಮಾಂತರ ಪೊಲೀಸರು ಸ್ಪೋಟಕ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವನ್ನು 2019ರ ನವೆಂಬರ್ 4ರಂದು ದಾಖಲಿಸಿದ್ದರು. ಟೈಫಾಯಿಡ್‌ನಿಂದ ಬಳಲುತ್ತಿದ್ದ ಕಾರಣ ನೀಡಿದ್ದಕ್ಕಾಗಿ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ನೀಡಿತ್ತು. …
Read More »ದೇಶದಲ್ಲಿ 8,840 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ
ಬೆಂಗಳೂರು: ಕೊರೊನಾ ಭೀಕರತೆ ನಡುವೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಹೆಚ್ಚುತ್ತಿದ್ದು, ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಇದೀಗ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಇಂಜಕ್ಷನ್ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕಕ್ಕೆ ಬ್ಲ್ಯಾಕ್ ಫಂಗಸ್ ಗೆ ಇಂಜಕ್ಷನ್ ಹಂಚಿಕೆ ಮಾಡಲಾಗಿದೆ. ಆಂಫೊಟೆರಿಸಿನ್ ಬಿ 1,270 ವಯಲ್ಸ್ ಗಳನ್ನು ರಾಜ್ಯಕ್ಕೆ ನೀಡಲಾಗಿದೆ ಎಂದು ಹೇಳಿದರು. ದೇಶದಲ್ಲಿ 8,840 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ …
Read More »ಹಮ್ ಆಪ್ಕೆ ಹೈ ಕೌನ್’ ಚಿತ್ರದ ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ
ನಾಗ್ಪುರ: ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್(79) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಸೇರದಂತೆ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ ರಾಮ್ ಲಕ್ಷ್ಮಣ್ ಅವರು ಮಹಾರಾಷ್ಟ್ರದ ನಾಗ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು. ರಾಮ್ ಲಕ್ಷ್ಮಣ್ರ ನಿಧನಕ್ಕೆ ಭಾರತದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ಸಂತಾಪ ಸೂಚಿಸಿದ್ದಾರೆ. ‘ಅತ್ಯಂತ್ಯ ಪ್ರತಿಭಾವಂತ ರಾಮ್ ಲಕ್ಷ್ಮಣ್ ಜಿ ನಿಧನ ಸುದ್ದಿ ಕೇಳಿ ನನಗೆ …
Read More »ಪಚ್ಚೆ ನಂಜುಂಡಸ್ವಾಮಿ ಬರಹ – ಬಾಬಾಗೌಡರ ನೆನಪು| ಚಳವಳಿಕಾರನಾದ ಐಎಎಸ್ ಆಕಾಂಕ್ಷಿ
ಧಾರವಾಡ: ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಅಧ್ಯಯನ ನಡೆಸುತ್ತಿದ್ದ ವ್ಯಕ್ತಿಯೊಳಗಿದ್ದ ಒಬ್ಬ ಚಳವಳಿಕಾರ ಹಾಗೂ ನಾಯಕ ಹೊರಜಗತ್ತಿಗೆ ಪರಿಚಯಗೊಂಡಿದ್ದೇ ರೈತ ಹೋರಾಟದ ಮೂಲಕ. ಅಂಥ ಒಬ್ಬ ಮೇರು ವ್ಯಕ್ತಿ ರೈತನಾಯಕನಾಗಿ, ಶಾಸಕನಾಗಿ, ಕೇಂದ್ರ ಸಚಿವರಗಿ ರೈತಕುಲಕ್ಕಾಗಿ ಮಾಡಿದ ಕೆಲಸ ಅನನ್ಯ. ಆದರೆ ಜನರ ಕಲ್ಯಾಣಕ್ಕಾಗಿ ಅವರ ಜ್ಞಾನವನ್ನು ಬಳಸಿಕೊಳ್ಳಬೇಕಾಗಿದ್ದ ರಾಜಕೀಯ ಪಕ್ಷಗಳು, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು ನಿಜಕ್ಕೂ ಬೇಸರ. ಆ ಅಪ್ರತಿಮ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಇಂದು ನಮ್ಮೊಂದಿಗೆ …
Read More »ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್ ಡೌನ್ ಕಠಿಣ ನಿಯಮ: ಖಾಕಿಪಡೆ ಹೈ ಅಲರ್ಟ್, ಹಲವರು ವಶಕ್ಕೆ
ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರ ಅಬ್ಬರವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ನ್ನು ನಿನ್ನೆ ವಿಸ್ತರಿಸಿ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿತು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮನೆಯ ಹತ್ತಿರದ ಅಂಗಡಿಗಳಿಗೆ, ಸ್ಥಳಗಳಿಗೆ ನಾಗರಿಕರಿಗೆ ಅಗತ್ಯ ಕೆಲಸಗಳಿಗೆ ಹೋಗಲು ಮಾತ್ರ ಸರ್ಕಾರ ಅವಕಾಶ ನೀಡಿದ್ದು ಅನಗತ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು, ವಾಹನಗಳಲ್ಲಿ ಓಡಾಡುವವರನ್ನು ವಶಕ್ಕೆ ಪಡೆದು …
Read More »