ಬೆಳಗಾವಿ: ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಮೇ 29 ಹಾಗೂ ಮೇ 30 ರಂದು ಎರಡು ದಿನಗಳ ಕಾಲ ವಾರಾಂತ್ಯದ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮೇ 29ರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ಸಂಪೂರ್ಣವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ, ಬೆಳಗಾವಿ ಜಿಲ್ಲೆಯಲ್ಲಿ …
Read More »Yearly Archives: 2021
ಮೇ 26ರ ಪ್ರತಿಭಟನೆ ಶಕ್ತಿಪ್ರದರ್ಶನವಲ್ಲ, ವಿರೋಧಧ ಪ್ರದರ್ಶನ: ರೈತ ಮುಖಂಡರ ಹೇಳಿಕೆ
ಮೇ 25: ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿ ಗಡಿಭಾಗದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ 6 ತಿಂಗಳು ಪೂರ್ಣಗೊಳಿಸಿದ ಸಂಕೇತವಾಗಿ ಮೇ 26ರಂದು ಆಯೋಜಿಸಿರುವ ಪ್ರತಿಭಟನೆ ರೈತರ ಶಕ್ತಿಪ್ರದರ್ಶನವಲ್ಲ. ಇದು ಕೊರೋನ ನಿಯಮಾವಳಿಯ ಹಿನ್ನೆಲೆಯಲ್ಲಿ, ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚದ(ಎಸ್ಕೆಎಂ) ಮುಖಂಡರು ಹೇಳಿರುವುದಾಗಿ ವರದಿಯಾಗಿದೆ. ನಾವು ಗ್ರಾಮದಲ್ಲಿ, ನಗರಗಳಲ್ಲಿ ಮತ್ತು ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಕಪ್ಪು ಟರ್ಬನ್, ಶಾಲು ಅಥವಾ ಬಟ್ಟೆ ಧರಿಸಿ …
Read More »ಎಸ್‌ಎಂಎಸ್‌ನಲ್ಲಿ ಲಸಿಕೆ ಮಾಹಿತಿ!
ಕೋವಿಡ್-19 ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಆದರೆ ಲಸಿಕೆ ಪಡೆಯುವ ಸಮಯ ಲಭ್ಯತೆ ಕಂಡುಕೊಳ್ಳುವ ಬಗ್ಗೆ ಹಲವರಿಗೆ ತಿಳಿವಳಿಕೆ ಇಲ್ಲ. ಇದನ್ನು ನೀಗಿಸಲೆಂದೇ VaccinateMe.in ಆಯಪ್ ಕನ್ನಡ ಸೇರಿದಂತೆ ಭಾರತದ 11 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಈ ಆಯಪ್ ಬಳಸಿ ಲಸಿಕೆ ಪಡೆಯುವ ಸಮಯ ಕಂಡುಕೊಳ್ಳಬಹುದು. ಒಂದು ವೇಳೆ ಸದ್ಯದ ಮಟ್ಟಿಗೆ ಲಸಿಕೆ ಪಡೆಯುವ ಸಮಯ ಲಭ್ಯವಿಲ್ಲದಿದ್ದಲ್ಲಿ, ಸೈನ್‌ಅಪ್ ಮಾಡಿಕೊಂಡಲ್ಲಿ …
Read More »ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?
ನಿಯಮಗಳನ್ನು ಪಾಲಿಸಲು ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಿಗೆ ನೀಡಿದ ೩ ತಿಂಗಳ ಅವಧಿ ಮುಗಿದಿದೆ ! ಭಾರತದಲ್ಲಿ ವ್ಯವಹಾರ ಮಾಡುವಾಗ ಭಾರತದ ನಿಯಮಗಳನ್ನು ಪಾಲಿಸದ ಸಂಸ್ಥೆಗಳನ್ನು ಭಾರತ ಸರಕಾರವು ಈಗ ನಿಷೇಧಿಸಬೇಕು ! ನವ ದೆಹಲಿ – ನಾವು ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಪಾಲಿಸುತ್ತೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ; ಆದರೆ ಕೆಲವು ಸೂತ್ರಗಳ ಬಗ್ಗೆ ಚರ್ಚೆಯಾಗುವುದು ಸಹ ಅವಶ್ಯಕವೇ ಆಗಿದೆ. ಇದಕ್ಕಾಗಿ ನಾವು ನಮ್ಮ …
Read More »ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿ ಮುಂದುವರಿಕೆ: ಬಿಸಿಸಿಐ
ನವದೆಹಲಿ : ಐಪಿಎಲ್ ಪ್ರಿಯರಿಗೆ ಇಲ್ಲಿದೆ ಒಂದು ಸಂತೋಷದ ಸುದ್ದಿ. ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ . 2021 ರ ಸೆಪ್ಟೆಂಬರ್ 18 ಅಥವಾ 19 ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು, ಮೂರು ವಾರಗಳ ಕಾಲ ನಡೆಯಲಿದೆ . ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ . ಈ …
Read More »ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ, ಜಿಆರ್‍ಬಿಸಿ, ಸಿಬಿಸಿ ಕಾಲುವೆಗಳಿಗೆ ನೀರು ಬಿಡುಗಡೆ- ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ಮೇ.27 ರಿಂದ 7 ದಿನಗಳ ವರೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಹಾಮ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಗುರುವಾರದಿಂದ ಹಿಡಕಲ್ ಜಲಾಶಯದಿಂದ ಮೂರೂ ಕಾಲುವೆಗಳಿಗೆ ನೀರು ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ತಲಾ 1.50 ಟಿಎಂಸಿ ಹಾಗೂ ಸಿಬಿಸಿ ಕಾಲುವೆಗೆ …
Read More »ಬೆಳಗಾವಿ ನಗರದಲ್ಲಿ 328 ಜನರಿಗೆ ಸೋಂಕು ಪತ್ತೆ, 24 ಜನರ ಸಾವು
ಬೆಳಗಾವಿಯಲ್ಲಿ ಮಂಗಳವಾರ ಒಂದೇ ದಿನ 1260 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 24 ಜನರು ಸಾವಿಗೀಡಾಗಿದ್ದಾರೆ. ಇದು ಈವರೆಗಿನ ಎಲ್ಲ ದಾಖಲೆಗಳನ್ನೂ ಮುರಿದು ಹಾಕಿದೆ. ಬೆಳಗಾವಿ ನಗರದಲ್ಲಿ 328 ಜನರಿಗೆ ಸೋಂಕು ಪತ್ತೆಯಾಗಿದೆ. ಅಥಣಿ 186, ಚಿಕ್ಕೋಡಿ 119, ಗೋಕಾಕ 136, ಸವದತ್ತಿ 123 ಜನರಲ್ಲಿ ಸೋಂಕು ದೃಢಪಟ್ಟಿದೆ. ಗೋಕಾಕಲ್ಲಿ 8, ರಾಯಬಾಗ 5, ಅಥಣಿ 3, ಖಾನಾಪುರ 3, ಹುಕ್ಕೇರಿ 2, ಬೆಳಗಾವಿ 2, ಬೈಲಹೊಂಗಲ 1 ಸಾವು …
Read More »ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ, ಮೋದಿಗೆ ಎಚ್ ಡಿ ದೇವೇಗೌಡರ ಪತ್ರ
ಬೆಂಗಳೂರು: ರೈತರ ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಬೆಳೆ ಸಿಗ್ತಿಲ್ಲ ಹೀಗಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವುದು ಕಷ್ಟವಾಗಿದೆ. ಕೋಲಾರದಲ್ಲಿ ಅತಿ ಹೆಚ್ಚು ಟೊಮೊಟೋ ಬೆಳೆಯಲಾಗುತ್ತೆ. ಕೊಳ್ಳುವವರಿಲ್ಲದೆ ತಿಪ್ಪೆಗೆ ಎಸೆಯುತ್ತಿದ್ದಾರೆ. ಬೇರೆ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ. ಕಲ್ಲಂಗಡಿ ಬೆಳೆದ ರೈತರಿಗೂ ನಷ್ಟವಾಗಿದೆ. ಇನ್ನಿತರ ಬೆಳೆಗಳಿಗೂ …
Read More »ಬಿಜೆಪಿಯು ಲಸಿಕೆಗಳನ್ನು ರಫ್ತು ಮಾಡಿದೆ. ಲಸಿಕೆಗಳು ನಮ್ಮಲ್ಲೆ ಇದ್ದಿದ್ದರೆ ಅದೆಷ್ಟೋ ಜನರ ಜೀವಗಳನ್ನು ಉಳಿಸಬಹುದಿತ್ತು: ಹೆಬ್ಬಾಳ್ಕರ್
ಭಾರತವನ್ನು ಇತರ ದೇಶಗಳ ಎದುರು ಮಾದರಿಯಾಗಿಸುವ ಬದಲು, ಬಿಜೆಪಿಯು ಲಸಿಕೆಗಳನ್ನು ರಫ್ತು ಮಾಡಿದೆ. ಲಸಿಕೆಗಳು ನಮ್ಮಲ್ಲೆ ಇದ್ದಿದ್ದರೆ ಅದೆಷ್ಟೋ ಜನರ ಜೀವಗಳನ್ನು ಉಳಿಸಬಹುದಿತ್ತು. ಕಾಂಗ್ರೆಸ್ ತನ್ನ 100 ಕೋಟಿ ಯೋಜನೆಯೊಂದಿಗೆ ಲಸಿಕೆ ನೀಡಲು ಸಿದ್ಧವಿದ್ದು, ಬಿಜೆಪಿ ಇದಕ್ಕೆ ಅನುಮತಿ ನೀಡಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಆಗ್ರಹಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು …
Read More »ಗುಂಡಿನ ಕಾಳಗದಲ್ಲಿ ಕಾಡುಗಳ್ಳ ವೀರಪ್ಪನ ಬೆವರಿಳಿಸಿದ ಪಿಎಸ್‌ಐ ಸಿದ್ದರಾಜನಾಯಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಾಮರಾಜನಗರ: ಗುಂಡಿನ ಕಾಳಗದಲ್ಲಿ ಕಾಡುಗಳ್ಳ ವೀರಪ್ಪನ ಬೆವರಿಳಿಸಿದ ಪಿಎಸ್‌ಐ ಸಿದ್ದರಾಜನಾಯಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜನಾಯಕ್ ಮಂಗಳವಾರ ವಿಧಿವಶರಾಗಿದ್ದಾರೆ. ಕಾಡುಗಳ್ಳ ವೀರಪ್ಪನ ಜತೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್ ಅವರು ಬದುಕುಳಿದಿದ್ದರು. 1992ರಲ್ಲಿ ಎಸ್ಪಿ ಹರಿಕೃಷ್ಣ ಹಾಗೂ ಎಸ್‌ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.
Read More »