Breaking News

Yearly Archives: 2021

ನುಡಿದಂತೆ ನಡೆದ ‘ರಾಕಿಂಗ್ ಸ್ಟಾರ್ ಯಶ್’ : ‘ಸಿನಿ ಕಾರ್ಮಿಕರ’ ಖಾತೆಗೆ ‘ಪರಿಹಾರದ ಹಣ’ ಜಮೆ ಮಾಡಿದ ರಾಕಿಭಾಯ್.!

ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯಿಂದಾಗಿ ಲಾಕ್ ಡೌನ್ ಜಾರಿಗೊಳಿಸಿದ ನಂತ್ರ, ಕನ್ನಡ ಸಿನಿ ರಂಗದ ಅನೇಕ ಕಲಾವಿಧರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾಗಿದ್ದರು. ಇಂತಹ ಕಲಾವಿಧರಿಗೆ, ತಂತ್ರಜ್ಞರಿಗೆ ರಾಕಿಂಗ್ ಸ್ಟಾರ್ ಯಶ್ ನೆರವು ಘೋಷಿಸಿದ್ದರು. ಈ ನೆರವನ್ನು ತಾವು ಘೋಷಿಸಿದಂತೆ ಚಿತ್ರರಂಗದ ಕಾರ್ಮಿಕರಿಗೆ ತಲುಪಿಸುವ ಮೂಲಕ, ನುಡಿದಂತೆ ರಾಕಿಭಾಯ್ ನಡೆದುಕೊಂಡಿದ್ದಾರೆ.   ಹೌದು.. ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ರಾಕಿಂಗ್ ಸ್ಟಾರ್ ಯಶ್ ತಲಾ 5 ಸಾವಿರ ರೂಪಾಯಿಯನ್ನು ಕೋವಿಡ್ …

Read More »

ರಾಜ್ಯದಲ್ಲಿ ಈ ವರ್ಷ ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ.

ಬೆಂಗಳೂರು – ರಾಜ್ಯದಲ್ಲಿ ಈ ವರ್ಷ ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. ಈ ಕುರಿತು ಹೊಸ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜೂನ್ 15ರಿಂದ ಶಾಲೆಗಳನ್ನು ಆರಂಭಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಲಾಕ್ ಡೌನ್ ಮುಂದುವರಿದಿರುವುದರಿಂದ ಮತ್ತು ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ. ಜುಲೈ 1ರಿಂದ ಅಕ್ಟೋಬರ್ 10ರ ವರೆಗೆ ಮೊದಲ ಅವಧಿ ಮತ್ತು ಅಕ್ಟೋಬರ್ 21ರಿಂದ 2022ರ ಏಪ್ರಿಲ್ 30 …

Read More »

ಬೆಳಗಾವಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಿಬಿಐ ತನಿಖೆ ನಡೆಸುವ ಎಚ್ಚರಿಕೆ: ಅಭಯ ಪಾಟೀಲ

ಬೆಳಗಾವಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಿಬಿಐ ತನಿಖೆ ನಡೆಸುವ ಎಚ್ಚರಿಕೆಯನ್ನು ಶಾಸಕ ಅಭಯ ಪಾಟೀಲ ನೀಡಿದ್ದಾರೆ. ಕೋವಿಡ್ ಚಿಕಿತ್ಸೆಯಲ್ಲಿ ಮನಬಂದಂತೆ ಸೋಂಕಿತರಿಂದ ಹಣವಸೂಲಿ ಮಾಡಲಾಗಿದೆ ಎಂದು ಆರೋಪಿಸಿರುವ ಅವರು ತಕ್ಷಣ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ವಾಪಸ್ ನೀಡಿ. ಇಲ್ಲವಾದಲ್ಲಿ ಆಸ್ಪತ್ರೆಗಳ ವಿರುದ್ಧ ಸಿಬಿಐ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 28 ಆಸ್ಪತ್ರೆಗಳ ಪೈಕಿ 23ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಪಡೆಯಲಾಗಿದೆ. ಹೆಚ್ಚುವರಿ ಹಣವನ್ನು ನಗದು ರೂಪದಲ್ಲಿ …

Read More »

ಮಕ್ಕಳ ಮನೆಗೆ ಹಾಲಿನ ಪುಡಿ ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ:BSY ಗೆ ಬಾಲಚಂದ್ರ ಜಾರಕಿಹೊಳಿಕೃತಜ್ಞತೆ

ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ರಾತ್ರಿ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳ …

Read More »

ಆದಿತ್ಯ ಬಿಸ್ವಾಸ್ ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಬಿಮ್ಸ್ ಆಡಳಿತಾಧಿಕಾರಿ ತಕ್ಷಣದಿಂದಲೇ ಅಧಿಕಾರ: B.S.Y.

ಬೆಳಗಾವಿ : ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಬಿಮ್ಸ್ ಆಡಳಿತಾಧಿಕಾರಿಯನ್ನಾಗಿ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಜಿಲ್ಲೆಯ ಕೊರೋನಾ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.             ಆದಿತ್ಯ ಬಿಸ್ವಾಸ್ ತಕ್ಷಣ ಅಧಿಕಾರ ವಹಿಸಿಕೊಳ್ಳಲಿದ್ದು, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಸಿಎಂ …

Read More »

ಪಡಿತರ ಚೀಟಿ ಹೊಂದಿಲ್ಲದವರಿಗೆ ಗುಡ್‌ ನ್ಯೂಸ್: ಉಚಿತ ರೇಷನ್ ಗಾಗಿ ಆನ್‌ ಲೈನ್ ಮೂಲಕವೂ ಕಾರ್ಡ್ ನೋಂದಣಿಗೆ ಅವಕಾಶ

ಪಡಿತರ ಚೀಟಿ ಇದ್ದವರಿಗೆ ಸರ್ಕಾರದ ವಿಶೇಷ ಯೋಜನೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಸಿಗಲಿದೆ. ಕೊರೊನಾ ಕಾರಣದಿಂದಾಗಿ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅನೇಕ ರಾಜ್ಯಗಳು ತಮ್ಮ ನಾಗರಿಕರಿಗೆ ಉಚಿತ ಪಡಿತರವನ್ನು ನೀಡುತ್ತಿವೆ. ಈಗ್ಲೂ ನಿಮ್ಮ ಬಳಿ ಪಡಿತರ ಚೀಟಿ ಇಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್‌ನಿಂದ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ನೀವು ಮೊದಲು ರಾಜ್ಯದ …

Read More »

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪರೀಕ್ಷೆ ಇಲ್ಲದೆ ಯಾವ ರೀತಿ ಗ್ರೇಡ್ ಕೊಡಬೇಕು ಎಂದು ಬಹಳ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಯೋಗಕ್ಷೇಮ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದ್ದರೆ. ಎಸ್ಸೆಸ್ಸೆಎಲ್ಸಿ, ಪಿಯುಸಿ ಪರೀಕ್ಷೆ ಈ ವರ್ಷ ಬಹುಚರ್ಚಿತ ವಿಚಾರ . ಕಳೆದ ವರ್ಷ ಪರಿಸ್ಥಿತಿ …

Read More »

ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ರೋಗಿಗಳಿಗೆ ಉತ್ತೇಜನ ನೀಡಲು ಮುಂದಾದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಕೊರೋನಾ ಸೋಂಕಿನ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕೊರೋನಾ ಸೋಂಕಿತರು ಉಳಿದುಕೊಂಡಿರುವ ದಾವಣಗೆರೆಯ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಶಾಸಕ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದಾರೆ. ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಲು, ಅವರಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಮಾಡಿ ಸೋಂಕಿತರಿಗೆ …

Read More »

ಬೆಳಗಾವಿ: ಮುಖ್ಯಮಂತ್ರಿಗೆ ಮುತ್ತಿಗೆ ಹಾಕಲು ಬಂದಿದ್ದ ರೈತರು ವಶಕ್ಕೆ

ಬೆಳಗಾವಿ: ಬೆಳಗಾವಿಗೆ ಆಗಮಿಸಿದ ಮುಖ್ಯಮಂತ್ರಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಕಬ್ಬಿನ ಬಾಕಿ ಬಿಲ್ ಗಾಗಿ ಆಗ್ರಹಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸುವರ್ಣ ವಿಧಾನಸೌಧದಲ್ಲಿ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ರೈತರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗ್ಗೆ ಸುವರ್ಣ ವಿಧಾನಸೌಧ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕಬ್ಬಿನ ಬಿಲ್ ಬಾಕಿ ಪಾವತಿಸಲು ಸಿಎಂ ಕ್ರಮ ಕೈಗೊಳ್ಳಬೇಕು. ತರಕಾರಿ ಬೆಳೆದ …

Read More »

ಉಡುಪಿ: ಧಾರಕಾರ ಮಳೆಗೆ ಮುಳುಗಿತು ಕಾರು- ಬೈಕ್ ಗಳು

ಉಡುಪಿ: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅವಾಂತಗಳು ಸಂಭವಿಸಿದೆ, ನಗರದ ಬಿಗ್ ಬಜಾರ್ ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಹತ್ತಾರು ಬೈಕ್ ಗಳು ಮತ್ತು ಕಾರುಗಳು ನೀರಿನಲ್ಲಿ ಮುಳುಗಿದೆ. ತಡ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಬಿಗ್‌ ಬಜಾರ್ ಕಟ್ಟಡದ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡದ ನೆಲ ಮಳಿಗೆಗೆ ಮಳೆ ನೀರು ತುಂಬಿಕೊಂಡು ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ ಆರು ಕಾರುಗಳು ಹಾಗೂ ಹತ್ತಕ್ಕೂ …

Read More »