ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಕಳೆದ 25 ವರ್ಷಗಳಿಂದ ಈ ಆನೆಯ ಪರಿಪಾಲನೆಯನ್ನು ಮಾವುತ ದಾಮೋದರ್ ನಾಯರ್ ನೋಡಿಕೊಳ್ಳುತ್ತಿದ್ದರು. 74 ವರ್ಷದ ದಾಮೋದರ್ ಇಹಲೋಕ ತ್ಯಜಿಸಿದಾಗ ಮೂಕ ಪ್ರಾಣಿಯು ಮಾವುತನಿಗೆ ಭಾವನಾತ್ಮಕ ಅಶ್ರುತರ್ಪಣಗೈದ ವಿಡಿಯೊ ಎಂಥಹ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ. ಬ್ರಹದತ್ತನ್ ಎಂಬ ಆನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವುತನ …
Read More »Yearly Archives: 2021
ಹಿರಿಯ ನಟಿ ಬಿ. ಜಯಾರ ಮೃತದೇಹವನ್ನ ಕಸದರಾಶಿ ಬಳಿ ಇಟ್ಟು ಅವಮಾನ! ವಿಡಿಯೋ ವೈರಲ್
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಗುರುವಾರ (ಜೂ.3) ನಿಧನರಾಗಿದ್ದಾರೆ. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದ ಜಯಾ, ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜನಪ್ರಿಯರಾಗಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಇಂತಹ ಜನಪ್ರಿಯ ನಟಿ ಅಗಲಿಕೆ ಸುದ್ದಿ ಅಭಿಮಾನಿಗಳ ಪಾಲಿಗೆ ದುಃಖಕರ. …
Read More »ರಾಜ್ಯದಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.11 ಇದ್ದು, ಶೇ.5ಕ್ಕೆ ಬಂದರೆ ಅನ್ ಲಾಕ್ : ಸಿಎಂ BSY
ಹುಬ್ಬಳ್ಳಿ: ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದ್ದು, ಸದ್ಯ 11.09 ರಷ್ಟಿದೆ. ಈ ಪಾಸಿಟಿವಿಟಿ ದರ ಶೇ.5ಕ್ಕೆ ಬಂದರೆ ರಾಜ್ಯದಲ್ಲಿ ಅನ್ ಲಾಕ್ ಮಾಡುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಇಲ್ಲಿನ ಸವಾಯಿ ಗಂಧರ್ವ ಹಾಲಿನಲ್ಲಿ ಕೋವಿಡ್ ನಿಯಂತ್ರಣದ ಕುರಿತು ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞರ ಅಭಿಪ್ರಾಯದಂತೆ ಪಾಸಿಟಿವಿಟಿ ದರ ಶೇ.5 ಕ್ಕಿಳಿದರೆ ಅನ್ ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಜನರು ಕೂಡ ಕೈ ಜೋಡಿಸಬೇಕು …
Read More »ಕೊರೋನಾ ಹೀಗೆ ಇದ್ರೆ SSLC ಪರೀಕ್ಷೆಯೂ ರದ್ದು, ಕಡಿಮೆಯಾದ್ರೆ ಮಾತ್ರ ಎಕ್ಸಾಂ: ಸಿಎಂ B.S.Y.
ಬೆಳಗಾವಿ: ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿ ಎಲ್ಲ ಸಾಮಾನ್ಯ ಸ್ಥಿತಿಗೆ ಮರಳಿದಾಗ ಮಾತ್ರ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ಕಡಿಮೆಯಾಗದಿದ್ದರೆ ಎಸ್‌ಎಸ್‌ಎಲ್ಸಿ ಪರೀಕ್ಷೆಯನ್ನು ಕೂಡ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡುವ ಕುರಿತಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿ ಸಹಜ ಸ್ಥಿತಿಗೆ ಮರಳಿ ಪರಿಸ್ಥಿತಿ …
Read More »ಮುಂಗಾರು ಆಗಮನ : ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಬೆಂಗಳೂರು: ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿರುವುದರಿಂದ ರಾಜ್ಯದಲ್ಲಿ ಇಂದಿನಿಂದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೇ ಅಂತ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆ, ದಕ್ಷಿಣ ಒಳನಾಡು ಪ್ರವೇಶಿಸಿರುವ ಮುಂಗಾರು, ಉತ್ತರ ಒಳನಾಡಿಗೆ ಶನಿವಾರ ಪ್ರವೇಶಸಲಿದ್ದು, ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದರು. ಧಾರವಾಡ, ಹಾವೇರಿ, ಬಿಜಾಪುರ …
Read More »ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು?
ಬೆಳಗಾವಿ: ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು?ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಯಸ್ಸಿನ ಅಂತರ ಎರಡು ವರ್ಷವಷ್ಟೇ. ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ. ಅಂದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರವು ಸಿಬಿಎಸ್ಇ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಪಡಿಸಿದೆ. ಕೇಂದ್ರದಿಂದ ಒಂದು ನಿರ್ಧಾರ ರಾಜ್ಯದಿಂದ ಒಂದು ನಿರ್ಧಾರ ಸರಿಯಲ್ಲ. …
Read More »ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಹಣ ಜನರಿಗೆ ತಲುಪಿದಾಗ ನಮಗೆ ಸಮಾಧಾನವಾಗುತ್ತದೆ: ಸತೀಶ ಜಾರಕಿಹೊಳಿ
ಬೆಳಗಾವಿ: ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಹಣ ಜನರಿಗೆ ತಲುಪಿದಾಗ ನಮಗೆ ಸಮಾಧಾನವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸುಮ್ಮನೆ ಪ್ಯಾಕೇಜ್ ಘೋಷಣೆ ಮಾಡುವುದರಿಂದ ಪ್ರಯೋಜನವಿಲ್ಲ. ಅರ್ಹರಿಗೆ ಆ ಹಣ ತಲುಪಬೇಕು. ಕಳೆದ ಬಾರಿ ಘೋಷಣೆ ಮಾಡಿದ ಹಣ ಇನ್ನುವರೆಗೂ ಕೂಡ ಜನರಿಗೆ ತಲುಪಿಲ್ಲ. ಹೀಗಾಗಿ, ನಮಗೆ ಆತಂಕವಿದೆ. …
Read More »ಗೋವಾ : ಜುಲೈ 31ರೊಳಗೆ ರಾಜ್ಯದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ : ಸಾವಂತ್
ಪಣಜಿ : ಗೋವಾದಲ್ಲಿ ಜುಲೈ 31 ರೊಳಗೆ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಕೋವಿಡ್ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸುವತ್ತ ಸರ್ಕಾರ ಲಕ್ಷ್ಯ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇನ್ನು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ಸೋಂಕಿನ ಹೊಸ ಪ್ರಕರಣ್ಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು …
Read More »ಮಾರಕ ಕೊರೋನಾಗೆ ‘ಡ್ರೀಮ್ ಗರ್ಲ್’ ಖ್ಯಾತಿಯ ಸಹನಟಿ ರೈಂಕು ಸಿಂಗ್ ನಿಕುಂಬ್ ಬಲಿ
ನವದೆಹಲಿ: ಆಯುಷ್ಮಾನ್ ಖುರಾನಾ ಅವರ ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಅಭಿನಯಿಸಿದ್ದ ಸಹನಟಿ ರೈಂಕು ಸಿಂಗ್ ನಿಕುಂಬ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈಂಕು ಸಿಂಗ್ ನಿಕುಂಬ್ ಚೇತರಿಸಿಕೊಳ್ಳುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೇ 25 ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರೈಂಕು ಸಿಂಗ್ ನಿಕುಂಬ್ ಅವರು ಹೋಮ್ ಐಸೋಲೇಷನ್ ನಲ್ಲಿದ್ದರು. ಕೆಲವು ದಿನ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದರೂ ಜ್ವರ ಕಡಿಮೆಯಾದ ಕಾರಣ …
Read More »ಡಿಕೆಶಿ ಹೆಲಿಕಾಪ್ಟರ್ ನೆಲಮಂಗಲದಲ್ಲಿ ಲ್ಯಾಂಡಿಂಗ್..!
ನೆಲಮಂಗಲ: ಮಳೆ ಕಾರಣದಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುವಾರ್ ಇದ್ದ ಹೆಲಿಕಾಪ್ಟರ್ ಅನ್ನು ನೆಲಮಂಗಲದಲ್ಲಿ ಲ್ಯಾಂಡ್ ಮಾಡಲಾಗಿದೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.ಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ ಬೆಂಗಳೂರಿನಿಂದ ದಾವಣೆಗೆರೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಹೀಗೆ ಕಾರ್ಯಕ್ರಮ ಮುಗಿಸಿ ದಾವಣಗೆರೆಯಿಂದ ಬೆಂಗಳೂರಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ಮಳೆ ಆರಂಭವಾಗಿದೆ. ಮಳೆ ಕಾರಣಕ್ಕೆ ಲ್ಯಾಂಡಿಂಗ್ ಗೆ ಹೆಚ್ ಎಎಲ್ ನಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ನೆಲಮಂಗಲದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ …
Read More »