ಗದಗ: ಕಾಂಗ್ರೆಸ್ ಯುವ ಮುಖಂಡ ಮಹಾಂತೇಶ ಬೆಳಧಡಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದವರ ಮೇಲೆ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ಗದಗ ನಗರದ ಗಂಗಾಪೂರ ನಿವಾಸಿಯಾದ ಮಹಾಂತೇಶ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರವಾದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಜೂನ್ 5 ರಂದು ಗದಗದಲ್ಲಿ ಅವರ ಅಂತ್ಯ ಸಂಸ್ಕಾರ …
Read More »Yearly Archives: 2021
ಮಗಳ ಜೊತೆ ಅಕ್ರಮ ಸಂಬಂಧ ಶಂಕೆ – ಯುವಕನ ಕೊಲೆಗೆ ಯತ್ನ
ಚಿಕ್ಕಬಳ್ಳಾಪುರ: ತನ್ನ ಮಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರ ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ನಡೆದಿದೆ. ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದವ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ಮಾಡಿದವ. ಅಂದಹಾಗೆ ತನ್ನ ಮಗಳ ಜೊತೆ ಫಿರೋಜ್ ಖಾನ್ ಅಕ್ರಮ ಸಂಬಂಧ ಇಟ್ಟುಕೊಂಟಿದ್ದಾನೆ ಅಂತ ಅರಿತು ಗಂಗಾಧರ ದೊಡ್ಡಬಳ್ಳಾಪುರಕ್ಕೆ ಹೋಗಬೇಕು ಬಾ ಅಂತ ಫಿರೋಜ್ ಖಾನ್ ನನ್ನ ಕರೆಸಿಕೊಂಡಿದ್ದಾನೆ. …
Read More »ಮಾರಿಷಸ್‌ನಲ್ಲಿ ಅಕ್ರಮವಾಗಿ ಇಟ್ಟಿರುವ ಹಣ ಎಲ್ಲಿಂದ ಬಂತು? ‘ಕಿಯಾ’ ಕಂಪನಿಗೆ ವರ್ಗಾವಣೆ ಆಗಿದ್ದು ಹೇಗೆ? ವಿಜಯೇಂದ್ರ ದೆಹಲಿಗೆ ಹೋಗಿದ್ದು ಇ.ಡಿ. ವಿಚಾರಣೆಗೆ; ಯತ್ನಾಳ
ವಿಜಯಪುರ: ಬಿ.ವೈ. ವಿಜಯೇಂದ್ರ ದೆಹಲಿಗೆ ಹೋಗಿದ್ದು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ಎದುರಿಸಲೇ ಹೊರತು, ಪಕ್ಷದ ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸಲು ಹೋಗಿದ್ದರು ಎಂಬುದು ಸುಳ್ಳು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಿಷಸ್‌ನಲ್ಲಿ ಅಕ್ರಮವಾಗಿ ಇಟ್ಟಿರುವ ಹಣ ಎಲ್ಲಿಂದ ಬಂತು? ‘ಕಿಯಾ’ ಕಂಪನಿಗೆ ವರ್ಗಾವಣೆ ಆಗಿದ್ದು ಹೇಗೆ? ಎನ್ನುವ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ವಿಜಯೇಂದ್ರ …
Read More »ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ: ಯತ್ನಾಳ
ವಿಜಯಪುರ: ಬಿ.ವೈ. ವಿಜಯೇಂದ್ರ ದೆಹಲಿಗೆ ಹೋಗಿದ್ದು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ಎದುರಿಸಲೇ ಹೊರತು, ಪಕ್ಷದ ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸಲು ಹೋಗಿದ್ದರು ಎಂಬುದು ಸುಳ್ಳು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಿಷಸ್‌ನಲ್ಲಿ ಅಕ್ರಮವಾಗಿ ಇಟ್ಟಿರುವ ಹಣ ಎಲ್ಲಿಂದ ಬಂತು? ‘ಕಿಯಾ’ ಕಂಪನಿಗೆ ವರ್ಗಾವಣೆ ಆಗಿದ್ದು ಹೇಗೆ? ಎನ್ನುವ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ವಿಜಯೇಂದ್ರ …
Read More »ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬೇಡಿಕೆ?
ದೆಹಲಿ: ‘ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡುವುದಾದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತಮಗೆ ಕೊಡಬೇಕು’ ಎಂದು ಹಾಲಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಬೇಡಿಕೆ ಇಟ್ಟಿದ್ದಾರೆಯೇ? ಇಂತಹದೊಂದು ಚರ್ಚೆ ದೆಹಲಿ ಮಟ್ಟದ ನಾಯಕರ ವಲಯದಲ್ಲಿ ಹರಿದಾಡುತ್ತಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾದ ವಿಜಯೇಂದ್ರ, ಈ ಬೇಡಿಕೆಯ ಜತೆಗೆ ಯತ್ನಾಳ ಹಾಗೂ ಯೋಗೇಶ್ವರ್ ಅವರನ್ನು ಉಚ್ಛಾಟಿಸಬೇಕು ಎಂಬ ಅಹವಾಲನ್ನೂ ಸಲ್ಲಿಸಿದ್ದಾರೆ. ‘ಭಿನ್ನಮತೀಯರಿಗೆ ತಕ್ಕ ಶಾಸ್ತಿ ಕಲಿಸುವ ಬಗ್ಗೆ …
Read More »ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ: ಮುಂಬೈ ರೈಲು ಆರಂಭದಾದರೂ ಸ್ತ್ರೀಯರಿಗೆ ಪ್ರವೇಶವಿಲ್ಲ
ಮುಂಬೈ: ಬಹುತೇಕ ರಾಜ್ಯಗಳು ಲಾಕ್‌ಡೌನ್ ಹೇರಿವೆ. ಕರೊನಾ ವೈರಸ್ ಸಂಖ್ಯೆ ಕುಸಿತ ಕಂಡುಬರುತ್ತಿರುವ ರಾಜ್ಯಗಳಲ್ಲಿ ನಿಧಾನವಾಗಿ ಲಾಕ್‌ಡೌನ್ ತೆರವುಗೊಳಿಸಿ ಒಂದೊಂದೇ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿಯೂ ಲಾಕ್‌ಡೌನ್ ಅನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ ಲೋಕಲ್ ಟ್ರೇನ್‌ಗಳ ಓಡಾಟಕ್ಕೆ ಅನುಮತಿ ಇರಲಿಲ್ಲ. ಈಗ ಅನ್‌ಲಾಕ್ ಮಾಡುತ್ತಿರುವ ಕಾರಣ, ಇವುಗಳ ಓಡಾಟಕ್ಕೆ ಅನುಮತಿ ಕಲ್ಪಿಸಲಾಗುತ್ತಿದೆ. ಆದರೆ ಅಚ್ಚರಿಯ ವಿಷಯ ಎಂದರೆ ಮಹಿಳೆಯರು ಟ್ರೇನ್‌ಗಳಲ್ಲಿ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಲಾಗಿದೆ. ಮಹಾರಾಷ್ಟ್ರ ಸರ್ಕಾರ …
Read More »ಅನ್ಲಾಕ್ ಬಸ್ ಸಂಚಾರಕ್ಕೆ ಸಿದ್ಧತೆ : ಸಾರಿಗೆ ನೌಕರರಿಗೆ ಕರ್ತವ್ಯದ ಕರೆ
ಬೆಂಗಳೂರು : ಒಂದೊಮ್ಮೆ ಜೂನ್ 14 ರ ನಂತರ ಅನ್ಲಾಕ್ ಆದರೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭಿಸುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಜೂನ್ 7 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ನೀಡಲಾಗಿದೆ. ಕರೊನಾ ಮೊದಲ ಅಲೆ ವೇಳೆ ಅನ್ಲಾಕ್ ಮಾಡಿದಾಗ ಯಾವ ನಿಯಮಾವಳಿ ಇತ್ತೋ ಅದೇ ನಿಯಮಾವಳಿಗಳನ್ನು ಈಗ ಲಾಕ್‌ಡೌನ್ ತೆರವಾದ ಸಂದರ್ಭದಲ್ಲೂ ಫಾಲೋ ಮಾಡಲು ನಿರ್ಧರಿಸಲಾಗಿದೆ. ಬಸ್ ಕಾರ್ಯಾಚರಣೆಗೆ …
Read More »12 ಬಾರಿ ಕೊಚ್ಚಿ ಕೊಂದವನ ಸುಳಿವು ನೀಡಿದ ಚಪ್ಪಲಿ!
ಪಾರ್ಕ್ ನಲ್ಲಿ ಮಲಗುವ ವಿಷಯದಲ್ಲಿ ಉಂಟಾದ ಮನಸ್ತಾಪದಿಂದ ಚಿಂದಿ ಆಯುವ ವ್ಯಕ್ತಿಯನ್ನು 12 ಬಾರಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ವ್ಯಕ್ತಿಯನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಬಾಬುಸಪಾಳ್ಯ ಬಿಡಿಎ ಪಾರ್ಕ್ ನಲ್ಲಿ ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ (43) ಹತ್ಯೆಯಾಗಿದ್ದು, ಮಾಲೂರು ಮೂಲದ ಸತೀಶ್ (30) ಬಂಧಿತ ಆರೋಪಿ. ಅಶೋಕ್ ಮತ್ತು ಸತೀಶ್ ಇಬ್ಬರೂ ಚಿಂದಿ ಆಯುವವರಾಗಿದ್ದು, ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ ಮೊದಲಿನಿಂದಲೂ ಬಾಬುಸಪಾಳ್ಯದ ಪಾರ್ಕ್ ನಲ್ಲಿ ಮಲಗುತ್ತಿದ್ದ. …
Read More »ಬೆಳಗಾವಿ ಜಿಲ್ಲೆಯ ಯುವಕನಿಂದಾಗಿ ಮೋಸ ಹೋದ ದಾವಣಗೆರೆ ಯುವತಿ ಆತ್ಮ ಹತ್ಯೆ…..ಆತನಿಗೆ ಗಲ್ಲು ಶಿಕ್ಷೆ ಕೊಡಿಸಿ.. ನೊಂದ ಪ್ರಿಯತಮೆಯ ಕೊನೇ ಮನವಿ.!
ದಾವಣಗೆರೆ: ಪ್ರಿಯಕರನ ವಂಚನೆಯಿಂದ ಬೇಸತ್ತ ಪ್ರೇಮಿ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಭಾನುವಾರ ದಾವಣಗೆರೆಯ ಭಾರತ್ ಕಾಲೋನಿಯಲ್ಲಿ ನಡೆದಿದೆ. ಭಾರತ್ ಕಾಲೋನಿಯ ಆಶಾ(22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಶಾ ಕೆ.ಬಿ. ಈರಣ್ಣ ಎಂಬಾತತನ್ನು ಪ್ರೀತಿಸುತ್ತಿದ್ದರು. ಈಚೆಗೆ ಆತನಿಂದ ವಂಚನೆಗೊಳಗಾಗಿದ್ದರು ಎನ್ನಲಾಗುತ್ತಿದೆ. ಕೆ.ಬಿ. ಈರಣ್ಣ ಮೂಲತಃ ಬೆಳಗಾವಿ ಜಿಲ್ಲೆಯವ. ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಮಾಡುತ್ತಿದ್ದು, ಬಂಬೂಬಜಾರ್‌ನಲ್ಲಿ ವಾಸವಾಗಿದ್ದನು. ಬಿಲ್ ಕಲೆಕ್ಟಿಂಗ್‌ಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಶಾ ಮತ್ತು ಆತನ ನಡುವೆ …
Read More »ನಾಸಾ ಚಂದ್ರಯಾನಕ್ಕೆ ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ಬಲ
ಮೆಲ್ಬರ್ನ್: ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಬೆನ್ನೆಲುಬಾಗಿ ನಿಂತಿರುವವರು ಬೇರ್ಯಾರೂ ಅಲ್ಲ, ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್. ಒರಿಯನ್ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್ ಸ್ಟೇಜ್ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ …
Read More »