ಹುಬ್ಬಳ್ಳಿ:ಕಣ್ಣೂರುನಿಂದ ಆಗಮಿಸಿದ್ದ ಇಂಡಿಗೋ ವಿಮಾನ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಟೈರ್ ಸ್ಫೋಟ ಗೊಂಡ ಘಟನೆ, ಸೋಮವಾರ ರಾತ್ರಿ8:30ರ ಸುಮಾರಿಗೆ ನಡೆದಿದೆ, ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ. 15 ಪ್ರಯಾಣಿಕರನ್ನು ಹೊತ್ತುಕೊಂಡು ಬಂದಿದ್ದ ವಿಮಾನವನ್ನು, ಪೈಲಟ್ ಮೊದಲು ರನ್ ವೇ ದಲ್ಲಿ ಇಳಿಸಲು ಪ್ರಯತ್ನಿಸಿದ್ದಾನೆ. ಆಗದಿಂದಾಗ ಎರಡನೇ ಬಾರಿ ಇಳಿಸಲು ಯತ್ನಿಸಿದಾಗ ಟಾಯರ್ ಬ್ಲಾಸ್ಟ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಕಣ್ಣೂರಿನಿಂದ ಆಗಮಿಸಿದ್ದ ವಿಮಾನ ನಂತರ ಬೆಂಗಳೂರಿಗೆ …
Read More »Yearly Archives: 2021
ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ’; ಅಲ್ಲು ಅರ್ಜುನ್ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ
ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಬಗ್ಗೆ ನಿತ್ಯ ಹೊಸ ಹೊಸ ಅಪ್ಡೇಟ್ ಸಿಗುತ್ತಿದೆ. ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಸಿನಿಮಾ ಹೇಗಿರಲಿದೆ ಎನ್ನುವ ಬಗ್ಗೆ ಉಪ್ಪೇನಾ ನಿರ್ದೇಶಕ ಬುಚಿ ಬಾಬು ಈ ರೀತಿಯ ಹೇಳಿಕೆ ನೀಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಈಗಾಗಲೇ …
Read More »ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ
ಹಾವೇರಿ: ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್, ಓಸಿ, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿವೆ. ಕೂಡಲೇ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ‘ಹಾವೇರಿ ಜಿಲ್ಲೆ ನಾಡಿನ ಹೆಸರಾಂತ ಸಂತ ಶರಣರ ಹಾಗೂ ಸಾಹಿತಿಗಳ ನೆಲೆಬೀಡಾಗಿದೆ. ಇಂತಹ ನೆಲದಲ್ಲಿ ಅಕ್ರಮ ಚಟುವಟಿಕೆಗಳು …
Read More »ಮುಂಡರಗಿ: ಅಕ್ರಮ ಮರಳು ಅಡ್ಡೆಗಳ ಮೇಲೆ ಜಿಲ್ಲಾಧಿಕಾರಿ ದಾಳಿ
ಮುಂಡರಗಿ (ಗದಗ): ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ತಲೆಎತ್ತಿರುವ ಅಕ್ರಮ ಮರಳು ಅಡ್ಡೆಗಳ ಮೇಲೆ ಸ್ವತಃ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹಾಗೂ ಎಸ್ಪಿ ಯತೀಶ್ ಎನ್. ಜಂಟಿಯಾಗಿ ಮಂಗಳವಾರ ದಾಳಿ ನಡೆಸಿದ್ದು, ಸುಮಾರು 200 ಟಿಪ್ಪರ್‌ಗಿಂತ ಅಧಿಕ ಮರಳು ರಾಶಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಸಿಂಗಟಾಲಕೇರಿ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ …
Read More »ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಬಿ.ಎಸ್ ವೈ ಹಾಗೂ 6 ಜನರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಇಡಿಗೆ ದೂರು ನೀಡಿದ್ದು, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕುಟುಂಬದ ವಿರುದ್ಧ ಪಿಎಂಎಲ್ ಎ ಅಡಿ ಪ್ರಕರಣ ದಾಖಲಿಸುವಂತೆ …
Read More »ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!
ಕಲಬುರಗಿ: ಸರ್ಕಾರಿ ವೈದ್ಯರೊಬ್ಬರು ಸಾರ್ವಜನಿಕ ಸೇವೆಗೆ ಹಾಜರಾಗದೆ ತಮ್ಮ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಡಾ.ಸಂಗಮೇಶ ಟಕ್ಕಳಕಿ ಎಂಬುವವರೇ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ವೈದ್ಯ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞರಾದ ಡಾ.ಸಂಗಮೇಶ ಟಕ್ಕಳಕಿ ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಆಗಿದ್ದರು. ಈ ಸಂಬಂಧ ಮೇಲಾಧಿಕಾರಿಗಳು ದೂರವಾಣಿ …
Read More »ಬಡವನ ಮನೆಯಲ್ಲಿ,ಫ್ರಿಡ್ಜ್,ಇಲ್ಲ,ಫ್ಯಾನ ಇಲ್ಲ,ಗ್ರ್ಯಾಂಡರ್ ಇಲ್ಲ, 1242 ರೂ ಕರೆಂಟ್ ಬಿಲ್ ಬಂದಿದೆ.
ಬೆಳಗಾವಿ- ರಾಜ್ಯ ಸರ್ಕಾರ ಗಪ್ ಚುಪ್ ಕೆರೆಂಟ್ ಬಿಲ್ ಹೆಚ್ಚಿಸಿದೆ,ಬೇಕಾಬಿಟ್ಟಿಯಾಗಿ ಕರೆಂಟ್ ಬಿಲ್ ಬರುತ್ತಿದೆ.ಮನಸ್ಸಿಗೆ ಬಂತೆ ಕರೆಙಟ್ ಬಿಲ್ ಹರಿಯುತ್ತಿರುವದಕ್ಕೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕ್ಷೇತ್ರದ ಬಡವನ ಮನೆಯಲ್ಲಿ,ಫ್ರಿಡ್ಜ್,ಇಲ್ಲ,ಫ್ಯಾನ ಇಲ್ಲ,ಗ್ರ್ಯಾಂಡರ್ ಇಲ್ಲ,ಆತನ ಮನೆಯಲ್ಲಿ ಉರಿಯೋದು ಮೂರು ಲೈಟ್ ಮಾತ್ರ,ಕರೆಂಟ್ ಬರೋದು ಎರಡು ತಾಸು,ಮೂರು ತಾಸು ಆದರೂ ಈ ಬಡವನಿಗೆ 1242 ರೂ ಕರೆಂಟ್ ಬಿಲ್ ಬಂದಿದೆ.ಇದೇ ರೀತಿ ಎಲ್ಲ ಲೈಟ್ ಬಿಲ್ ಗಳು …
Read More »ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಮಾಡಿ ಹಣ ಸುಲಿಗೆ
ಮೆಟ್ರಿಮೊನಿಯಲ್ ವೆಬ್ ಸೈಟ್ ನಲ್ಲಿ ಅಕೌಂಟ್ ತೆರೆದು,ಅದೆಷ್ಟೋ ವಧು,ವರರು ದಾಂಪತ್ಯ ಜೀವನ ಆರಂಭಿಸಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ ಆದ್ರೆ ಸೈಬರ್ ವಂಚಕರು ಇದನ್ನು ದುರುಪಯೋಗ ಪಡೆಸಿಕೊಂಡು,ಫೇಕ್ ಅಕೌಂಟ್ ತೆರೆದು,ವಿಡಿಯೋ ಕಾಲ್ ಮಾಡಿ ಹಣ ಸುಲಿಗೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ,ಐ ಲೈಕ್ ಯೂ ಅಂತಾ ಮೆಸ್ಸೇಜ್ ಮಾಡಿ,ನಂತರ ವಿಡಿಯೋ ಕಾಲ್ ಮಾಡಿ, …
Read More »ಸಂಚಾರಿ ವಿಜಯ್ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್ವುಡ್ ಕಲಾವಿದರಿವರು
ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಂದಹಾಗೆ, ಸ್ಯಾಂಡಲ್ವುಡ್ನಲ್ಲಿ ಈ ಮೊದಲು ಕೂಡ ಸಾಕಷ್ಟು ಕಲಾವಿದರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ. ಸೌಂದರ್ಯಾ: ಅದು 2004ರ ಏಪ್ರಿಲ್ 17. ನಟಿ ಸೌಂದರ್ಯಾ ಬೆಂಗಳೂರಿನಿಂದ ಕರೀಮ್ ನಗರಕ್ಕೆ ತೆರಳಿ, ಬಿಜೆಪಿ ಪರ ಪ್ರಚಾರ ಮಾಡುವವರಿದ್ದರು. ಅಗ್ನಿ ಏರೋಸ್ಪೋರ್ಟ್ಸ್ ಒಡೆತನದ ನಾಲ್ಕು ಆಸನಗಳ ಮಿನಿ ವಿಮಾನ ಸೆಸ್ಸಾನಾ 180ಯನ್ನು ಬೆಳಗ್ಗೆ …
Read More »ಇಂದು ಬೆಳಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 38 ವರ್ಷದ `ಸಂಚಾರಿ ವಿಜಯ್’ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ. ಶನಿವಾರ ರಾತ್ರಿ 11:45ರ ಸುಮಾರಿಗೆ ಬೆಂಗಳೂರಿನ ಜೆಪಿನಗರದ 7ನೇ ಹಂತದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿಗೆ ವಿಜಯ್ ತಲುಪಿದ್ದರು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ವಿಜಯ್ ಅವರ ಅಂಗಾಗವನ್ನು ದಾನ …
Read More »