ಬೆಳಗಾವಿ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುವ ವೇಳೆಯಲ್ಲಿ ಕೆಲ ತಿಂಗಳಿಂದ ಹಿಂಬಾಲಿಸಿ ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆ ಚಪ್ಪಲಿ ಏಟು ನೀಡಿರುವ ಘಟನೆ ನಗರಸ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಗೋಪಾಲ ಗುರಣ್ಣವರ ಮಹಿಳೆಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡ ವ್ಯಕ್ತಿಗೆ ಹಲವು ಸಾರಿ ಎಚ್ಚರಿಕೆ ನೀಡಿದರೂ ಸಹ ತನ್ನ ಹಿಂಬಾಲಿಸುವುದು ನಿಲ್ಲಿಸಿಲ್ಲ. ಸಿಳ್ಳೆ ಹೊಡೆದು ಚುಡಾಯಿಸುತ್ತಿದ್ದನು. ಇಂದು ಮಹಿಳೆ ಹಾಗೂ ಆಕೆಯ …
Read More »Yearly Archives: 2021
ಭಾರತದ ಸೇನಾ ಆಸ್ತಿಪಾಸ್ತಿಗಳ ವಿರುದ್ಧ ಡ್ರೋನ್‌ನಂತಹ ‘ಹೈಬ್ರಿಡ್ ದಾಳಿ’ ನಡೆಸಿದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಲಿದೆ.
ನವದೆಹಲಿ(ಜು.04): ‘ಭಾರತದ ಸೇನಾ ಆಸ್ತಿಪಾಸ್ತಿಗಳ ವಿರುದ್ಧ ಡ್ರೋನ್‌ನಂತಹ ‘ಹೈಬ್ರಿಡ್ ದಾಳಿ’ ನಡೆಸಿದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಲಿದೆ. ಉತ್ತರದ ಸಮಯ ಹಾಗೂ ಸ್ಥಳವನ್ನು ಅನುಕೂಲಕರ ಸಂದರ್ಭದಲ್ಲಿ ಭಾರತ ನಿರ್ಧರಿದಲಿದೆ ಎಂದು ಸೇನಾ ಸಶಸ್ತ್ರಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಗುಡುಗಿದ್ದಾರೆ. ಶುಕ್ರವಾರ ವೆಬಿನಾರ್ ಒಂದರಲ್ಲಿ ಮಾತನಾಡಿದ ಅವರು, ‘ನಮಗೆ ಅವರ (ಪಾಕಿಸ್ತಾನ) ಉದ್ದೇಶವೇನು ಎಂಬುದು ಗೊತ್ತಿಲ್ಲ. ಆದರೆ ಅವರು ನಮ್ಮ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿ ಹಾನಿಯೇನಾದರೂ ಮಾಡಿದರೆ …
Read More »ಅಪ್ಲಿಕೇಶನ್ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಿಖರವಾಗಿದೆ.
ಡಿಜಿಟಲ್ ಡೆಸ್ಕ್: ಪ್ರಪಂಚದಾದ್ಯಂತ ಅನೇಕ ಜನರು ನಿರ್ದೇಶನಕ್ಕಾಗಿ ಗೂಗಲ್ ನಕ್ಷೆಗಳನ್ನು ಅವಲಂಬಿಸಿದ್ದಾರೆ. ಅಪ್ಲಿಕೇಶನ್ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಿಖರವಾಗಿದೆ. ಆದ್ರೆ, ಗ್ರಾಮೀಣ ಪ್ರದೇಶಗಳ ವಿಷಯಕ್ಕೆ ಬಂದಾಗ ಅಥವಾ ಅಷ್ಟು ಜನಪ್ರಿಯ ರಸ್ತೆಗಳ ವಿಷಯಕ್ಕೆ ಬಂದಾಗ, ಅದು ಸವಾರನನ್ನ ಮಧ್ಯೆದಲ್ಲಿಯೇ ಕೈ ಬಿಡುತ್ತೆ. ಇತ್ತೀಚಿನ ಘಟನೆಯೊಂದರಲ್ಲಿ, ರಾಜಸ್ಥಾನದ ಉದಯಪುರಕ್ಕೆ ಹೋಗುತ್ತಿದ್ದ ಪ್ರವಾಸಿಗರ ಗುಂಪು ಗೂಗಲ್ ಮ್ಯಾಪ್ಸ್ʼನಿಂದ ದಾರಿ ತಪ್ಪಿದ್ದು, ಹಳ್ಳಿಯಲ್ಲಿ ಸಿಲುಕಿಕೊಂಡಿತ್ತು. ನಿಮ್ಮ ಮುಂಜಾನೆಯನ್ನು ಒಂದು ಕಪ್ ಚಹಾದಿಂದ ಆರಂಭಿಸುವಿರೇ? …
Read More »ದೇವಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ.
ಉಡುಪಿ, ಜುಲೈ 04; ಕರ್ನಾಟಕ ಸರ್ಕಾರ ಜುಲೈ 5ರಿಂದ ಅನ್ವಯವಾಗುವಂತೆ ಅನ್‌ಲಾಕ್ ಮಾರ್ಗಸೂಚಿ ಪ್ರಕಟಿಸಿದೆ. ದೇವಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಅದರಲ್ಲೂ ಭಕ್ತರಿಗಂತೂ ದೇವಾಲಯದ ಬಾಗಿಲು ತೆರೆದಿರೋದು ಖುಷಿಯನ್ನು ಇಮ್ಮಡಿಗೊಳಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣನನ್ನು ಕಾಣಲು ಇನ್ನೂ ಒಂದು ವಾರ ಕಾಯಲೇಬೇಕಿದೆ. ಉಡುಪಿಯ ಕೃಷ್ಣಮಠ ಇನ್ನೂ ಒಂದು ವಾರಗಳ ಕಾಲ ತೆರೆಯುವುದಿಲ್ಲ ಎಂದು ಪರ್ಯಾಯ ಅದಮಾರು ಈಶಪ್ರೀಯ ತೀರ್ಥ ಸ್ವಾಮಿಜಿ ಹೇಳಿದ್ದಾರೆ. ಒಂದುವಾರ …
Read More »ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು
ಬೆಂಗಳೂರು: ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಡ್ನೂಡಿನ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿಯಾಗಿದ್ದು, ಈತ ನೈಜೀರಿಯಾ ಮೂಲದವ ಎನ್ನಲಾಗಿದೆ. ಡ್ರಗ್ಸ್ ಮಾರಾಟ ಹಾಗೂ ಕಿಡ್ನಿ ಮಾರಾಟ, ಖರೀದಿ ದಂಧೆಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಜನರನ್ನು ವಂಚಿಸುತ್ತಿದ್ದ. ಈತನನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಪೊಲೀಸರು ಹುಡುಕಾಡುತ್ತಿದ್ದರು. ಕಿಡ್ನಿ ಮಾರಾಟ ಹಾಗೂ ಖರೀದಿ ಮಾಡಲಾಗುವುದು ಎಂದು ಜಾಹೀರಾತಿನ …
Read More »ರಾಜ್ಯದಲ್ಲಿ ಈವರೆಗೆ 725 ಡೆಲ್ಟಾ, ಎರಡು ಡೆಲ್ಟಾಪ್ಲಸ್ ಮಾದರಿಗಳು ಪತ್ತೆಯಾಗಿವೆ.
ಬೆಂಗಳೂರು(ಜು.04): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಭೀಕರತೆಗೆ ಡೆಲ್ಟಾ ರೂಪಾಂತರಿ ಕೊರೋನಾ ವೈರಾಣುವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರೂಪಾಂತರಿ ವೈರಾಣುಗಳು ಸೃಷ್ಟಿಸಬಹುದಾದ ಅವಾಂತರದ ಬಗ್ಗೆ ನಿಗಾವಹಿಸಲು ಸತತವಾಗಿ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಈವರೆಗೆ 725 ಡೆಲ್ಟಾ, ಎರಡು ಡೆಲ್ಟಾಪ್ಲಸ್ ಮಾದರಿಗಳು ಪತ್ತೆಯಾಗಿವೆ. ಉಳಿದಂತೆ ಅಲ್ಫಾ 14, ಬೀಟಾ 06, ಕಪ್ಪಾ 145 ಪ್ರಕರಣ ಪತ್ತೆಯಾಗಿವೆ. ಇವೆಲ್ಲವುಗಳ ಪೈಕಿ ರಾಜ್ಯದಲ್ಲಿ ಪಾಸಿಟಿವಿಟಿ …
Read More »ಲಸಿಕೆ ಪಡೆಯಲು ಜನರ ತಳ್ಳಾಟ ನೂಕಾಟ
ಕಾರವಾರ: ರಾಜ್ಯಾದ್ಯಂತ ಕೊರೊನಾ ಲಸಿಕೆಯ ಅಭಾವ ಮಿತಿಮೀರಿದ್ದು ಗಡಿ ಜಿಲ್ಲೆ ಉತ್ತರ ಕನ್ನಡವನ್ನೂ ಬಿಟ್ಟಿಲ್ಲ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇದುವರೆಗೆ 3,81000 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 77000 ಜನ ಎರಡನೇ ಹಂತದ ಲಸಿಕೆ ಸಹ ನೀಡಲಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಪ್ರಮಾಣದಲ್ಲಿ ಲಸಿಕೆ ಬರುತ್ತಿಲ್ಲ. ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಲಸಿಕೆ ಅಭಾವ ಸಹ ಆಗಿದ್ದು, ಜಿಲ್ಲಾಡಳಿತದಿಂದ ನಿಗದಿ ಮಾಡಿದವರನ್ನು …
Read More »ಸಾರ್ವಜನಿಕರು ಎಚ್ಚರದಿಂದ ಇರುವಂತೆ ಬೆಳಗಾವಿ ಡಿಸಿಪಿ ವಿಕ್ರಂ ಆಮಟೆ
ಬೆಳಗಾವಿ: ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿರುವ ಪೊಲೀಸ್ ಉಪ ಆಯುಕ್ತ ವಿಕ್ರಂ ಆಮಟೆ, ಒಂದುಗಂಟೆಯೊಳಗೆ ದೂರು ನೀಡುವಂತೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ಆಮಟೆ, 2020 ಹಾಗೂ 2021ರಲ್ಲಿ ಒಟ್ಟು 65 ಲಕ್ಷ ರೂ ಹಣ ಸೈಬರ್ ವಂಚನೆಯಾಗಿದ್ದು, 29 ಲಕ್ಷ 13 ಸಾವಿರ ರೂಪಾಯಿಯನ್ನು ಕಾರ್ಯಾಚರಣೆ ನಡೆಸಿ ವಂಚನೆಗೊಳಗಾದವರ ಖಾತೆಗೆ ಮರು ಜಮಾವಣೆ ಮಾಡಲಾಗಿದೆ ಎಂದರು. ನಗರ ವ್ಯಾಪ್ತಿಯಲ್ಲಿ ನೊಂದವರು ಬೆಳಗಾವಿ …
Read More »ಶಶಿಧರ ಕುರೇರ್ ಸೇರಿದಂತೆ 8 ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು – ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್ ಸೇರಿದಂತೆ 8 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕುರೇರ್ ಅವರನ್ನು ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪ್ರಧಾನ ವ್ಯವಸ್ಥಾಪಕರನ್ನಾಗಿ ವರ್ಗಾಯಿಸಲಾಗಿದ್ದು, ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಯಾಗಿ ಪ್ರವೀಣ ಬಾಗೇವಾಡಿ ಅವರನ್ನು ನೇಮಿಸಲಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಜಂಟಿ ನಿರ್ದೇಶಕರಾಗಿದ್ದ ಮಹೇಶ ಕುಮಾರ ಮಾಲಗತ್ತಿ ಅವರನ್ನು ದೇವರಹಿಪ್ಪರಗಿ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ – New doc 03-Jul-2021 6.53 pm
Read More »UNLOCK 3.0 : ಪಬ್ ಇಲ್ಲ, ಬಾರ್‌ನಲ್ಲಿ ಕೌಂಟರ್ ಜತೆ ಕೂತ್ಕೊಂಡು ಕುಡಿಯಲು ಅನುಮತಿ.. ಸಿಎಂ ಬಿಎಸ್‌ವೈ
ಬೆಂಗಳೂರು : ಅನ್‌ಲಾಕ್ 3.0 ಕುರಿತು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಸೋಮವಾರದಿಂದಲೇ 3.0 ಅನ್‌ಲಾಕ್ ಪ್ರಕ್ರಿಯೆ ಸಂಪೂರ್ಣ ಜಾರಿಯಾಗಲಿದೆ ಅಂತ ಮುಖ್ಯಮಂತ್ರಿ ಬಿಎಸ್‌ವೈ ಹೇಳಿದಾರೆ. ಮಾಲ್ಗಳನ್ನು ಓಪನ್ ಮಾಡಲು, ಬಾರ್ ತೆರೆಯಲು ಅನುಮತಿ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ಅನ್ನು ರದ್ದುಪಡಿಸಲಾಗಿದ್ದು, ನೈಟ್ ಕರ್ಫ್ಯೂ ಮುಂದುವರೆಯಲಿದೆ ಎಂದು ಸಿಎಂ ಹೇಳಿದ್ದಾರೆ.
Read More »