Breaking News

Yearly Archives: 2021

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಐದು ಜಿಲ್ಲೆಗಳ 1261 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕ ಗಳಿಸುವಲ್ಲಿ ಯಶಸ್ವಿ

ಬೆಂಗಳೂರು, ಜು. 20: ಕರ್ನಾಟಕದಲ್ಲಿ ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಐದು ಜಿಲ್ಲೆಗಳ 1261 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 445 ವಿದ್ಯಾರ್ಥಿಗಳು 600 ಅಂಕಗಳಿಗೆ ಸರಾಸರಿ 600 ಅಂಕ ಗಳಿಸಿದ್ದಾರೆ. ಮಂಗಳವಾರ ಸಂಜೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆ ಇಲ್ಲದಿದ್ದರೂ ಪ್ರಥಮ ಪಿಯುಸಿ ಹಾಗೂ ಎಸ್‌ಎಸ್‌ಎಲ್ ಸಿ ಯಲ್ಲಿ …

Read More »

‘ಪರೀಕ್ಷೆ ರದ್ದು ಮಾಡಿ’ ಅಂತ ವಿಶ್ವವಿದ್ಯಾಲಯದ ಮುಂದೆಯೇ ಪ್ರತಿಭಟನೆಗೆ ಕುಳಿತ ಸ್ಟುಡೆಂಟ್ಸ್

ದಾವಣಗೆರೆ: ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ದಾವಣಗೆರೆಯ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಇತ್ತೀಚೆಗೆ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಯ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಸದ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗ್ತಿದೆ. ಆದರೆ ಯಾವುದೇ ಕ್ಲಾಸ್​ ನಡೆಸದೇ ಕೇವಲ ಎರಡು ತಿಂಗಳ ಆನ್ಲೈನ್ ಕ್ಲಾಸ್ ಮಾಡಿದ್ದು ಮತ್ತು ಎರಡು ತಿಂಗಳ ಅಂತರದಲ್ಲಿ ಎರಡು ಸೆಮ್ ಗಳ ಪರೀಕ್ಷೆ ನಡೆಸುತ್ತಿರೋದಕ್ಕೆ …

Read More »

ಪೊಲೀಸ್‌ ಮಕ್ಕಳ ಅಧ್ಯನಕ್ಕೆ ಗ್ರಂಥಾಲಯ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಹಳೇ ಸಶಸ್ತ್ರ ಮೀಸಲು ಮೈದಾನದ ಕಟ್ಟಡದಲ್ಲಿ ಪೊಲೀಸ್‌ ಸಿಬ್ಬಂದಿ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ನೂತನ ಗ್ರಂಥಾಲಯ ತೆರೆಯಲಾಗಿದೆ. ಕನ್ನಡ, ಇಂಗ್ಲೀಷ ಭಾಷೆಯಲ್ಲಿರುವ 750 ಪುಸ್ತಕಗಳು ಲಭ್ಯವಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಆರಂಭಿಸಲಾಗಿದೆ. ಐಎಎಸ್‌, ಕೆಪಿಎಸ್‌, ಪಿಡಿಒ ಸೇರಿದಂತೆ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳು ಇಲ್ಲಿವೆ. ಏಕಕಾಲದಲ್ಲಿ 25 ಮಂದಿ ಕೂತು ಅಧ್ಯಯನ ನಡೆಸಲು ಅನುಕೂಲವಾಗುವಂತೆ …

Read More »

ಕೊಲೆ ಆರೋಪಿಯ ಮದುವೆಗೆ ಪೊಲೀಸರು ಹಾಜರ್.. ಕಡ್ಡಾಯ ರಜೆ ಶಿಕ್ಷೆ ಕೊಟ್ಟ ಎಸ್​ಪಿ

ಕೊಪ್ಪಳ: ಜಾಮೀನಿನ ಮೇಲೆ ಹೊರ ಬಂದ ಕೊಲೆ ಆರೋಪಿಯ ಮದುವೆಯಲ್ಲಿ ಭಾಗವಹಿಸಿದ ಪೊಲೀಸ್​ ಅಧಿಕಾರಿಗಳಿಗೆ ಎಸ್​ಪಿ ಕಡ್ಡಾಯ ರಜೆ ಶಿಕ್ಷೆ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.     ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ್ ನಾಯಕನ ಮಗ, ಮಹಾಂತೇಶ್ ನಾಯಕ ಕೂಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದ್ದು ಕಳೆದ ಎರಡು ದಿನಗಳ ಹಿಂದೆ ಕನಕಗಿರಿ ತಾಲೂಕಿನ, ಹುಲಿಹೈದರ್ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಈ ಮದುವೆಯಲ್ಲಿ ಗಂಗಾವತಿ ಡಿವೈಎಸ್​ಪಿ …

Read More »

ಕ್ರಿಮಿನಲ್ ಗಳು ಒಳ್ಳೆಯ ಕೆಲಸ ಮಾಡಲು ಸಾಧ್ಯವೇ?: ಕೇಂದ್ರದ ವಿರುದ್ಧ ಕಿಡಿಕಾರಿದ ದಿನೇಶ್

ಬೆಂಗಳೂರು: ಪೆಗಸಸ್ ಸ್ಪೈವೇರ್‌ ಮೂಲಕ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವ ಕೇಂದ್ರದ ದುಷ್ಟ ಬುದ್ದಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೂ ಕಣ್ಗಾವಲು ನಡೆಸಿರುವುದು ಕ್ರಿಮಿನಲ್‌ಗಳು ಮಾಡುವಂತ ಕೆಲಸ. ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಕ್ರಿಮಿನಲ್‌ಗಳೇ ಇರುವಾಗ ಕ್ರಿಮಿನಲ್ ಕೆಲಸವಲ್ಲದೆ ಒಳ್ಳೆ ಕೆಲಸ ಮಾಡಲು ಸಾಧ್ಯವೇ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಅಸಮರ್ಥ ನಾಯಕನಿಗೆ ಸದಾ ಅಸ್ತಿತ್ವದ ಭಯ ಕಾಡುತ್ತದೆ. ಮೋದಿಯವರಿಗೂ …

Read More »

ಸಚಿವ ಮುರಿಗೇಶ್ ನಿರಾಣಿ ಓರ್ವ ‘ಸಿಡಿ ಬಾಬಾ’; ಅವರ ಬಳಿ 500 ಸಿಡಿಗಳಿವೆ; ಹೊಸ ಬಾಂಬ್ ಸಿಡಿಸಿದ ಆಲಂ ಪಾಷಾ

ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳಿವೆ. ಯಾರದ್ದೂ ಬೇಕಾದರೂ ಸಿಡಿ ಇರಬಹುದು. ಒಂದು ವೇಳೆ ಇವರಿಗೆ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಆಗಬಹುದು ಎಂದು ಉದ್ಯಮಿ ಎ.ಆಲಂ ಪಾಷ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಗೇಶ್ ನಿರಾಣಿ ರಾಜ್ಯದ ಮಂತ್ರಿಗೂ ಸಿಡಿ ಇದೆ ಎಂದು ಹೆದರಿಸಿದ್ದಾರೆ. ಅವರು ಕೋರ್ಟ್ ನಿಂದ ಸ್ಟೇ …

Read More »

ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

ನವದೆಹಲಿ: ಆಕೆ ಇನ್ನೂ ಕಾಲೇಜಿನ ಮೆಟ್ಟಿಲೇರಿದ ದಿನಗಳವು. ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿದು, ತಾನಿಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಬೇಕೆಂಬ ಆಸೆ ಆಕೆಗಿತ್ತು. ಆದರೆ, ಮನೆಯಲ್ಲಿ ಆಕೆಗೆ ಇಷ್ಟವಿಲ್ಲದಿದ್ದರೂ 18ನೇ ವಯಸ್ಸಿಗೆ ಮದುವೆ ಮಾಡಿದ್ದರು. ಆದರೆ, ಆಕೆಯ ಮನಸಿನಲ್ಲಿ ಆತನಿಗೆ ಜಾಗವಿರಲಿಲ್ಲ. ಹೀಗಾಗಿ, ತನ್ನ ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನು ಕೊಲೆ (Murder) ಮಾಡಿದ್ದ ಆಕೆ ಆತನ ಶವವನ್ನು (Dead Body) ಸುಟ್ಟು ಹಾಕಿದ್ದಳು. ಅದೆಲ್ಲ ಆಗಿ ಬರೋಬ್ಬರಿ 10 …

Read More »

ಧಾರವಾಡ: ಮದ್ಯವ್ಯಸನಿಯಾಗಿದ್ದ ಮಗನನ್ನು ಹತ್ಯೆಗೈದ ತಂದೆ!

ಧಾರವಾಡ: ಮದ್ಯ ವ್ಯಸನಿಯಾಗಿ ಸದಾ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ನಗರದ ತೇಲಗಾರ ಓಣಿಯಲ್ಲಿ ನಡೆದಿದೆ. ಬಸವರಾಜ ಹಿರೇಕುಂಬಿ (36 ವ) ಎಂಬಾತನೇ ಹತ್ಯೆಗೀಡಾದ ವ್ಯಕ್ತಿ. ಈತ ಮದ್ಯವೆಸನಿಯಾಗಿದ್ದ. ಪ್ರತಿದಿನ ಮದ್ಯ ಕುಡಿಯುವುದಕ್ಕಾಗಿ ತನ್ನ ತಂದೆಗೆ ಹಣಕ್ಕಾಗಿ ಎಂದು ಪೀಡಿಸುತ್ತಿದ್ದ. ಸೋಮವಾರ ರಾತ್ರಿ ಕೂಡ ತನ್ನ ತಂದೆ ಫಕ್ಕೀರಪ್ಪನೊಂದಿಗೆ ಹಣ ಕೊಡುವಂತೆ ಜಗಳ ಮಾಡಿದ್ದ. ಈ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಫಕ್ಕೀರಪ್ಪ ಕಬ್ಬಿನ ಹಾರೆಕೋಲಿನಿಂದ ತನ್ನ ಮಗನನ್ನೇ …

Read More »

ಬೆಳಗಾವಿ ಜಿಲ್ಲಾ ಪೋಲೀಸರು ಬಕ್ರೀದ್ ಹಬ್ಬದ ಮುನ್ನಾದಿನ 209 ಆಕಳು ಕರುಗಳನ್ನು ರಕ್ಷಿಸಿದ್ದಾರೆ‌

ಬೆಳಗಾವಿ- ಬಕ್ರೀದ್ ಹಬ್ಬಕ್ಕಾಗಿ ಮಾರಾಟ ಮಾಡಲು ತರಲಾಗಿದ್ದ 209 ಆಕಳು ಕರುಗಳನ್ನು ರಾಯಬಾಗ ಪೋಲೀಸರು ವಶಪಡಿಸಿಕೊಂಡಿದ್ದಾರೆ. ರಾಯಬಾಗ ಪಟ್ಟಣದ ಸಾಯಿನಗರದಲ್ಲಿರುವ ಇಮ್ತಿಯಾಜ್ ಬೇಪಾರಿ ಜಾತಿ ಬೆಪಾರಿ ಎಂಬಾತ ನಡೆಸುತ್ತಿದ್ದ ಖಾಸಾಯಿ ಖಾನೆಗೆ ಸುಮಾರು 209 ದನಗಳು (ಆಕಳುಕರುಗಳು ಹಾಗೂ ಎಮ್ಮೆಕರುಗಳು) ಗಳನ್ನು ಬಕ್ರೀದ್ ಹಬ್ಬದ ನಿಮಿತ್ಯ ಕಸಾಯಿ ಖಾನೆಗೆ ತೆಗೆದುಕೊಂಡು ಬಂದಿದ್ದನ್ನು ರಾಯಭಾಗ ಪೊಲೀಸರು ತಮ್ಮ ವಶಕ್ಕೆ ತಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಆಕಳುಕರು,ಹಾಗು ಎಮ್ಮೆಗಳನ್ನು ನಸುಕಿನ ಜಾವ ಬೆಳಗಾವಿ, ಸದಲಗಾ ಹಾಗೂ …

Read More »

ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ: ಮಠಾಧೀಶರು ವರಿಷ್ಠರಿಗೆ ಎಚ್ಚರಿಕೆ

ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿ ಬದಲಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಮಠಾಧೀಶರು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಚರ್ಚೆ ಬೆನ್ನಲ್ಲೇ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಯಡಿಯೂರಪ್ಪನವರನ್ನು ಭೇಟಿಯಾದ ಸ್ವಾಮೀಜಿಗಳ ನಿಯೋಗ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ …

Read More »