Breaking News

Yearly Archives: 2021

ಇಂದೇ ಸಿಎಂ ಆಯ್ಕೆ, ನಾಳೆ ಪ್ರಮಾಣವಚನ ಸ್ವೀಕಾರ ಸಾಧ್ಯತೆ

ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ನೂತನ ಸಿಎಂ ಅನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ಆಗಮಿಸಿದ್ದು, ಇವರಿಬ್ಬರೂ ಕೆಲ ಕಾಲ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಹಸ್ಯ ಮಾತುಕತೆ ನಡೆಸಿದರು. ಇದೇ ವೇಳೆ ಬಿಜೆಪಿ‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಮತ್ತು‌ ಕಿಶಾನ್ ರೆಡ್ಡಿ ಬರ್ತಿದ್ದಾರೆ. ಕೇಂದ್ರ …

Read More »

ಬೆಂಗಳೂರಿಗೆ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಆಗಮನ; ಕೇಂದ್ರದ ವೀಕ್ಷಕರನ್ನು ಸ್ವಾಗತಿಸಿದ ಬಿಜೆಪಿ ನಾಯಕರು

ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಯ್ಕೆ ಇಂದೇ ತಿರ್ಮಾನವಾಗಲಿದೆ ಎಂದು ತಿಳೀಸಿದ್ದಾರೆ. ಇಂದು ಸಂಜೆ ಶಾಸಕಾಂಗ ಸಭೆ ನಡೆಯುತ್ತದೆ. ಧರ್ಮೇಂದ್ರ ಪ್ರಧಾನ್ ಮತ್ತು‌ ಕಿಶಾನ್ ರೆಡ್ಡಿ ಬರ್ತಿದ್ದಾರೆ. ಸಭೆಯ ಬಳಿಕ ಸಿಎಂ ಹೆಸರು ಬಹಿರಂಗ ಮಾಡ್ತೀವಿ ಎಂದು ಉಸ್ತುವಾರಿ ನಾಯಕ ಅರುಣ್ ಸಿಂಗ್ ಹೇಳಿದ್ದಾರೆ. ಯಡಿಯೂರಪ್ಪನವರ ಮಾರ್ಗದರ್ಶನ ಮತ್ತು ಸಹಕಾರ ಪಡೆಯುತ್ತೇವೆ. ಪಕ್ಷ ಸಂಘಟನೆಗೆ ಯಡಿಯೂರಪ್ಪನವರ ಮಾರ್ಗದರ್ಶನ ಅಗತ್ಯವಿದೆ. ಸಂಸದೀಯ ಮಂಡಳಿ ನಿರ್ದೇಶನದಂತೆ …

Read More »

ಇವತ್ತಿಂದ ಬಿಜೆಪಿ ಅವನತಿ ಆರಂಭ, ಪಕ್ಷ ಸರ್ವನಾಶ: ರುದ್ರಮುನಿ ಸ್ವಾಮೀಜಿ

ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ವೀರಶೈವ- ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್​​ ಮುಂದುವರಿಸಬೇಕು. ಈಗ ಪಡೆದಿರುವ ರಾಜಿನಾಮೆಯನ್ನು ವಾಪಸ್​ ಪಡೆಯಬೇಕು ಎಂದು ರುದ್ರಮುನಿ ಸ್ವಾಮೀಜಿ ಮಂಗಳವಾರ ಬಿಜೆಪಿಯ ಹೈಕಮಾಂಡ್​ ವಿರುದ್ದ ಗುಡುಗಿದ್ದಾರೆ. ಮುಖ್ಯಮಂತ್ರಿಸ್ಥಾನದಿಂದ ಬಿಎಸ್​ ಯಡಿಯೂರಪ್ಪ ಅವರನ್ನು ಇಳಿಸಿ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಲಾಗಿದೆ. ಈ ಕಾರಣದಿಂದ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು. ಯಡಿಯೂರಪ್ಪ ಅವರು ಕೇವಲ ಲಿಂಗಾಯತರ ನಾಯಕರಾಗಿ ಮಾತ್ರ ಇರಲಿಲ್ಲ, …

Read More »

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆ

ಹುಬ್ಬಳ್ಳಿ: ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರನೂ ಆಗಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ. ಜುಲೈ 30ರಂದು ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಜುಲೈ 30ರ ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಕೈ ಪಾಳಯಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿಯ ಗೋಕುಲ್ ಗಾರ್ಡನ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ. ಕೆಪಿಸಿಸಿ ಅಧ್ಯಕ್ಷ …

Read More »

ಮಂಗಳವಾರ ಸಂಜೆ 7 ಘಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಹೊಸಬರನ್ನು ನೇಮಿಸುವ ಕುರಿತು ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್​ನಲ್ಲಿ ನಡೆಯಲಿರುವ …

Read More »

ಸಂಕಷ್ಟಗಳನ್ನು ಮೆಟ್ಟಿನಿಂತು ಶಿಕ್ಷಕಿಯಾದ ಯುವತಿಗೆ ರಾಜಭವನಕ್ಕೆ ಆಹ್ವಾನಿಸಿದ ರಾಜ್ಯಪಾಲರು..!

ಕುಮಿಲಿ: ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಹೈಸ್ಕೂಲ್​ ಶಿಕ್ಷಕಿಯಾದ ಕೇರಳದ ಛೋಟ್ಟುಪರಾ ನಿವಾಸಿ ಸೆಲ್ವಮರಿಯನ್ನು ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ಅಭಿನಂದಿಸಿದ್ದು, ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಬಾಲ್ಯದ ದಿನಗಳಿಂದಲೂ ಸೆಲ್ವಮರಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಜಾದಿನಗಳಲ್ಲಿ ತಮ್ಮ ತಾಯಿಯ ಜತೆ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಸೆಲ್ವಮರಿ, ಕೆಲಸದ ನಡುವೆಯೂ ಓದಿನಲ್ಲೂ ಶ್ರಮವಹಿಸಿ ಇಂದು ಹೈಸ್ಕೂಲ್​ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಟುಂಬದ ಸಂಕಷ್ಟಗಳನ್ನು ಇನ್ನಷ್ಟು ದೂರ …

Read More »

ಕಾಲು ಜಾರಿ ನೀರಿಗೆ ಬಿದ್ದು ನಾಲ್ವರು ಮಕ್ಕಳು ಸಾವು

ವಿಶಾಖಪಟ್ಟಣ: ಮಳೆಗೆ ತುಂಬಿ ಹರಿಯುತಿದ್ದ ಹೊಳೆಯೊಳಗೆ ಜಾರಿ ಬಿದ್ದು ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ವಿಶಾಖಪಟ್ಟಣ ಜಿಲ್ಲೆಯ ವಿ. ಮಡುಗುಲಾ ಮಂಡಲ್​ ಜಮ್ಮದೇವಿಪೇಟಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಮಕ್ಕಳನ್ನು ಜಾಹ್ನವಿ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್​ (7) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಪಾಲಕರು ಬಟ್ಟೆ ಹೊಗೆಯಲು ಹೋಗಿದ್ದರು. ಮಕ್ಕಳು ಸಹ ಜತೆಯಲ್ಲಿ ತೆರಳಿದ್ದರು. ಈ ವೇಳೆ ನೀರಿನ …

Read More »

1000ಕ್ಕೆ ಏರಿಕೆಯಾಗುತ್ತಾ ಲೋಕಸಭೆ ಕ್ಷೇತ್ರಗಳ ಸಂಖ್ಯೆ..?

ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೊಸ ಬಾಂಬ್ ಸಿಡಿಸಿದ್ದಾರೆ. ಸೆಂಟ್ರಲ್ ವಿಸ್ತಾದ ಹೊಸ ಸಂಸತ್​​ನಲ್ಲಿ ಲೋಕಸಭೆಯಲ್ಲಿ 1000 ಸೀಟುಗಳು ಇರಲಿವೆ ಅಂತ ನನಗೆ ಬಿಜೆಪಿ ಮೂಲಗಳಿಂದಲೇ ಮಾಹಿತಿ ಬಂದಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಲೋಕಸಭೆ ಸೀಟುಗಳ ಸಂಖ್ಯೆಯನ್ನು 1000ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕಳ್ಳುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ. ಜೊತೆಗೆ ಸಂಸತ್​​​ನಲ್ಲಿ ಹೊಸ ಸಂಸತ್​​​​​​ನ ಕಟ್ಟಡ ವಿನ್ಯಾಸದ ಯೋಜನೆಯನ್ನು ಸಂಸತ್​ನಲ್ಲಿ ಮಂಡಿಸಬೇಕು.. ಒಂದು ವೇಳೆ …

Read More »

ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆಯೇ ಒಲಾ ಸ್ಕೂಟರ್‌ ?

ಬೆಂಗಳೂರು ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವ ಈ ಸಮಯದಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ದೃಷ್ಟಿ ಹಾಯಿಸುತಿದ್ದಾರೆ. ಇದೀಗ ದೇಶದ ಪ್ರಮುಖ ಆನ್‌ ಲೈನ್‌ ಕಾರು ಬುಕಿಂಗ್‌ ಸಂಸ್ಥೆ ಓಲಾ ಬೆಂಗಳೂರು ಸಮೀಪದ ಹೊಸೂರಿನಲ್ಲಿ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಉತ್ಪಾದಣಾ ಘಟಕವನ್ನು ಆರಂಬಿಸಿದ್ದು ಇನ್ನೆರಡು ತಿಂಗಳಿನಲ್ಲಿ ಸ್ಕೂಟರ್‌ ಗಳು ರಸ್ತೆಗಿಳಿಯಲಿವೆ. ಈ ಸ್ಕೂಟರ್‌ ಒಂದು ಛಾರ್ಜಿಗೆ 240 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ತಿಳಿದು ಬಂದಿದ್ದು …

Read More »

ರಾಜಕೀಯ ಜಂಜಾಟಕ್ಕೆ ಬ್ರೇಕ್​: ಹಸುಗಳನ್ನು ಮುದ್ದಾಡಿದ ಬಿಎಸ್​ವೈ

ಬೆಂಗಳೂರು: ಬಿಜೆಪಿ ಕಟ್ಟಾಳು ಬಿಎಸ್​ ಯಡಿಯೂರಪ್ಪ ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತಾವು ರಾಜೀನಾಮೆ ನಿರ್ಧರಿಸಿರುವುದನ್ನು ಹೇಳುವಾಗ ಯಡಿಯೂರಪ್ಪ ಗದ್ಗದಿತರಾದರು ಆ ಕ್ಷಣ ಅವರ ಅಭಿಮಾನಿಗಳಷ್ಟೇ ಅಲ್ಲದೇ ರಾಜ್ಯದ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಇದೀಗ ಬಿಎಸ್​ವೈ ಅವರು ತಮ್ಮ ನಿವಾಸದಲ್ಲಿ ಕಾಲಕಳೆಯುತ್ತಿದ್ದು, ಬೆಳ್ಳಂಬೆಳಿಗ್ಗೆ ನಿವಾಸದಲ್ಲಿರುವ ಹಸುಗಳನ್ನು ಮುದ್ದಾಡಿದ್ದಾರೆ. ಸದ್ಯ ರಾಜಕೀಯ ಜಂಜಾಟಗಳನ್ನು ಬದಿಗೊತ್ತಿ, ಎಸ್.ಆರ್.ವಿಶ್ವನಾಥ್ ತಂದು ಕೊಟ್ಟಿದ್ದ ಹಸುಗಳ ಜೊತೆ ಸಮಯ ಕಳೆದಿದ್ದಾರೆ. ಇನ್ನು ಈ ಹಸುಗಳ ಮೇಲೆ ಯಡಿಯೂರಪ್ಪ …

Read More »