Breaking News

Yearly Archives: 2021

ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!

ಮಹಾರಾಷ್ಟ್ರದ ಮುಖ್ಯಮಂತ್ರಿ ಉಧವ್ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನಾವಿಸ್ ಅವರು ಶುಕ್ರವಾರ ಬೆಳಗ್ಗೆ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಜನರಲ್ಲಿ ಆಚ್ಚರಿ ಮೂಡಿಸಿದರು. ಇಬ್ಬರು ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ್ದರು. ಮುಖಾಮುಖಿಯಾದ ನಂತರ ಅವರಿಬ್ಬರು ಪ್ರವಾಹ ಪರಿಸ್ಥಿತಿ ಮತ್ತು ಪುನರ್ವಸತಿ ವಿಷಯಗಳ ಬಗ್ಗೆ ಚರ್ಚಿಸಿದರು. ‘ಅವರು ಅಲ್ಲಿಗೆ ಹೋಗಿದ್ದು ಗೊತ್ತಿತ್ತು, ನಾನು ಸಹ ಅದೇ ಸ್ಥಳಕ್ಕೆ ಭೇಟಿ ನಿಡುತ್ತಿದ್ದರಿಂದ ಅವರಿಗೆ ಅಲ್ಲೇ …

Read More »

ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡಲು ಮುಂದಾಗಿದ್ದ 6 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರು: ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡಲು ಮುಂದಾಗಿದ್ದ 6 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ(ಕೆಐಎಬಿ) ಕಾರ್ಗೋ ಟರ್ಮಿನಲ್‍ನಲ್ಲಿ ರಕ್ತ ಚಂದನ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ತ ಚಂದನವನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆದಿತ್ತು. ಅನುಮಾನಗೊಂಡು ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು, …

Read More »

ಬೆಳಗ್ಗೆ ಕಿಡ್ನ್ಯಾಪ್​ ಆಗಿದ್ದ ಉದ್ಯಮಿಯನ್ನ 5 ಗಂಟೆಯಲ್ಲೇ ರಕ್ಷಣೆ ಮಾಡಿದ ಪೊಲೀಸ್​

ಧಾರವಾಡ: ಜಿಲ್ಲೆಯ ಹಾಡುಗಲೇ ಮೂವರು ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಅಪಹರಣವಾದ ಮಾಡಿದ್ದ ಘಟನೆ ನಗರದಲ್ಲಿ ನಡೆದಿದ್ದು, ಘಟನೆ ನಡೆದ ಐದು ಗಂಟೆಯಲ್ಲೇ ಪೊಲೀಸರು ಉದ್ಯಮಿಯನ್ನು ರಕ್ಷಣೆ ಮಾಡಿದ್ದಾರೆ. ನಗರದ ಬೃಂದಾವನ ಡೆವಲಪರ್ಸ್​​ ಮಾಲೀಕರಾಗಿರುವ ಉದ್ಯಮಿ ಶ್ರಿನಿವಾಸ್ ನಾಯ್ಡು ಅವರನ್ನು ಧಾರವಾಡದ ವಿದ್ಯಾಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಬೆಳಗ್ಗೆ 11 ಗಂಟೆ ಸಮಯದಲ್ಲಿ ಕಿಡ್ನಾಪ್​ ಮಾಡಿದ್ದರು. ಕೂಡಲೇ ಅಪಹರಣವಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು …

Read More »

ತನ್ನ ವಿರುದ್ಧವೇ ತನಿಖೆ ನಡೆಸಲು ಲೋಕಾಯುಕ್ತರಿಗೆ ಪತ್ರ ಬರೆದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ, : ಸರಳ ಸಜ್ಜನಿಕೆಯಿಂದ ರಾಜ್ಯದ ಜನರ ಗಮನ ಸೆಳೆದಿರುವ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೇಲೆ ಆದಾಯಕ್ಕಿಂತ ಹೆಚ್ಚು ಗಳಿಕೆಯ ಟೀಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ. ಕೋಟಾ ಶ್ರೀನಿವಾಸ ಪೂಜಾರಿಯವರು 6 ಕೋಟಿ ಮೌಲ್ಯದ ಮನೆಯನ್ನು ಕಟ್ಟಿಸುತ್ತಿದ್ದು, ಇದು ಸಾಮಾನ್ಯ ರಾಜಕಾರಣಿಯ ಲಕ್ಷಣ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರ ಅರು ಕೋಟಿಯ ಮನೆ ಅಂತಾ ಸುದ್ದಿ …

Read More »

ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್​..

ಬೆಂಗಳೂರು: ನೀವು ನಿಮ್ಮ ಬೈಕ್​ನ್ನ ಮನೆ ಹೊರಗಡೆ ನಿಲ್ಲಿಸ್ತಿದ್ದೀರಾ..? ಹಾಗಾದ್ರೆ ಹುಷಾರ್​ ಆಗಿರಿ. ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್​ ಒಂದು ಈಗ ನಗರದಲ್ಲಿ ಸಕ್ರಿಯವಾಗಿದೆ. ವೀರಣ್ಣ ಪಾಳ್ಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್​ನ್ನು ಮನೆಯ ಹೊರಗೆ ನಿಲ್ಲಿಸಿ ತಮ್ಮ ಅಪಾರ್ಟ್​ಮೆಂಟ್​ಗೆ ಹೋಗಿ ಬರೋದ್ರೊಳಗಾಗಿ ನಿಲ್ಲಿಸಿದ ಬೈಕ್​ ನಾಪತ್ತೆಯಾಗಿದೆ. ಒಳಗಡೆ ಹೋಗಿ ಬರೋದ್ರೊಳಗಾಗಿ ಬೈಕ್​ ಕಾಣದ್ದನ್ನ ಕಂಡು ಮಾಲೀಕ ಅರೆ ಕ್ಷಣ ಗಲಿಬಿಲಿಗೊಂಡಿದ್ದಾನೆ. ತದನಂತರ ಸಿಸಿಟಿವಿ …

Read More »

ಅನೈತಿಕ ಸಂಬಂಧ ಪ್ರಶ್ನೆ ‌ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಪತಿ

ಕೊಪ್ಪಳ: ಅನೈತಿಕ ಸಂಬಂಧ ಪ್ರಶ್ನೆ ‌ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಮೊಬೈಲ್ ಚಾರ್ಜರ್​ ಬಳಸಿ ಮಡದಿ ಮಂಜುಳಾ (25) ಕತ್ತು ಬಿಗಿದು ಮಂಜುನಾಥ್ ಕಟ್ಟಿಮನಿ ಎಂಬಾತ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮಂಜುಳಾ ಪತಿ ಮಂಜುನಾಥ್ ಕಟ್ಟಿಮನಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಗಂಡ ಹೆಂಡತಿ ಮದ್ಯೆ ಪದೇ ಪದೇ ಗಲಾಟೆ ಆಗ್ತಿತ್ತು ಎಂದು …

Read More »

ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ

ದಾವಣಗೆರೆ, ಜುಲೈ 30; ಇಬ್ಬರು ಮಹಿಳೆಯಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ದಾವಣಗೆರೆ ನಗರದ ಹೊರಭಾಗದ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಗೌರಮ್ಮ (34) ಹಾಗೂ ರಾಧಿಕಾ (32) ಎಂದು ಗುರುತಿಸಲಾಗಿದೆ. ಆಂಜನೇಯ ಕಾಟನ್ ಮಿಲ್ ಬಡಾವಣೆಯ …

Read More »

ಹೆಚ್ಚಾಯ್ತು ರೌಡಿಶೀಟರ್​​ಗಳ ಹಾವಳಿ; ಹಾಡಹಗಲೇ ನಡೆಯುವ ಕೊಲೆಗಳಿಗೆ ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿದ್ದು ಬೆಂಗಳೂರು ಬೆಚ್ಚಿಬಿದ್ದಿದೆ. ಒಂದೆಡೆ ಪೊಲೀಸರು ದಿಢೀರ್ ರೌಡಿಶೀಟರ್​​ಗಳ ಮನೆ ಮೇಲೆ ದಾಳಿ ನಡೆಸಿ, ರೌಡಿಗಳ ಪರೇಡ್ ನಡೆಸಿದ್ರೂ ಕ್ರೈಮ್​ಗಳು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಅದ್ರಲ್ಲೂ ಲಾಕ್​ಡೌನ್ ಸಡಿಲಿಕೆಯಾಗಿ ಅನ್​ಲಾಕ್​ ಜಾರಿಯಾದ ಮೇಲೆ ಹಾಡಹಗಲೇ ಕೊಲೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಕ್ರೈಂಗಳು.. 1. ಜು. 19- ಯೂನಿಬ್ಯಾಂಕ್ ಒಳಗೆ ರೌಡಿಶೀಟರ್ ಬಬ್ಲಿ ಬರ್ಬರ ಹತ್ಯೆ. 2..ಜು. 2- ರಂದು ಹಾಡಹಗಲೇ ಬನಶಂಕರಿ …

Read More »

ತೋಟದಲ್ಲಿ ಈಜು ಕಲಿಯಲು ಹೋಗಿ ಇಬ್ಬರು ಮೃತಪಪಟ್ಟರು

ಕಬ್ಬೂರ – ಪಟ್ಟಣದ ಹೊರವಲಯದ ಗಣೇಶ ನಗರದ ನಾವಗೇರ ತೋಟದಲ್ಲಿ ಈಜು ಕಲಿಯಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ೨ ಗಂಟೆಯ ಸಮಯದಲ್ಲಿ ನಡೆದಿದೆ. ಮೃತಪಟ್ಟವರು ಮಹಾಂತೇಶ ಶ್ರೀಕಾಂತ ನಾವಿ(೨೫) ಮತ್ತು ಶ್ರೀಶೈಲ ಬಸವರಾಜ ನಾವಲಗೇರ(೧೦). ತಮ್ಮ ಬಾವಿಯಲ್ಲಿ ಈಜು ಕಲಿಯಲು ಡಬ್ಬಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಈಜುವಾಗ ಡಬ್ಬಿ ಬಿಚ್ಚಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.ಘಟನಾ ಸ್ಥಳಕ್ಕೆ ಚಿಕ್ಕೋಡಿ ಪ್ರಮುಖ ಅಗ್ನಿಶಾಮಕ ದಳದ ಟಿ.ಬಿ.ಪರೀಟ ಹಾಗೂ ಸಿಬ್ಬಂದಿಗಳು ಬಾವಿಯಲ್ಲಿ …

Read More »

ಬಿಜೆಪಿ ಹೈಕಮಾಂಡ್ ಎದುರು ಪಂಚಮಸಾಲಿ ಸಮುದಾಯ ಇಟ್ಟ ಹೊಸ ಬೇಡಿಕೆ ಇದು!

ಬೆಂಗಳೂರು, ಜು. 30: ಈ ಸಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಖಚಿತ ಎಂಬ ಮಾಹಿತಿ ಬಂದಿತ್ತು. ಅದರಂತೆಯೆ ಆರ್‌ಎಸ್‌ಎಸ್‌ ಪ್ರಮುಖರು ಹಾಗೂ ಬಿಜೆಪಿ ಹೈಕಮಾಂಡ್ ಕೂಡ ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಲು ತೀರ್ಮಾನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಹುದ್ದೆ ಆ ಸಮುದಾಯಕ್ಕೆ ಸಿಗಲಿಲ್ಲ ಎಂಬ ನಂಬಿಕೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಖಚಿತ ಮಾಹಿತಿಯಿದೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಿಕೊಂಡಿರುವ ಲಿಂಗಾಯತ ಪಂಚಮಸಾಲಿ …

Read More »