Breaking News

Yearly Archives: 2021

ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರಿಗೆ ಮಸಿ ಬಳಿದ ಕನ್ನಡ ಕಾರ್ಯಕರ್ತ ಸಂಪತ್ ಕುಮಾರ ದೇಸಾಯಿವಿರುದ್ಧ ಕೊಲೆ ಯತ್ನ (ಸೆ.307) ಪ್ರಕರಣವನ್ನು ದಾಖಲಿಸಿದ ಪೋಲೀಸರ ವಿರುದ್ಧ ಕ್ರಮಕೈಕೊಳ್ಳಬೇಕು

ಬೆಳಗಾವಿ –  ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರಿಗೆ ಮಸಿ ಬಳಿದ ಕನ್ನಡ ಕಾರ್ಯಕರ್ತ ಸಂಪತ್ ಕುಮಾರ ದೇಸಾಯಿವಿರುದ್ಧ ಕೊಲೆ ಯತ್ನ (ಸೆ.307) ಪ್ರಕರಣವನ್ನು ದಾಖಲಿಸಿದ ಪೋಲೀಸರ ವಿರುದ್ಧ ಕ್ರಮಕೈಕೊಳ್ಳಬೇಕು ಹಾಗೂ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದೆ. ರಾಜ್ಯ ಗೃಹಸಚಿವ ಅರಗ ಙ್ಞಾನೇಂದ್ರ ಅವರನ್ನು ಮಂಗಳವಾರ ರಾತ್ರಿ ಭೇಟಿ ಮಾಡಿದ ಕ್ರಿಯಾ ಸಮಿತಿ ನಿಯೋಗ, ಈ ಸಂಬಂಧ ಮನವಿಯನ್ನು ಸಲ್ಲಿಸಿತು. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿರುವ ಪೋಲೀಸರ …

Read More »

ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ: ಸಚಿವ ಉಮೇಶ್​​​ ಕತ್ತಿ

: ಕನಿಷ್ಟ 100 ರೇಷನ್ ಕಾರ್ಡ್ ಇರುವ ತಾಂಡಾ ಹಾಗೂ ಎಸ್​ಸಿ/ಎಸ್​ಟಿ ಕಾಲೋನಿಗಳಿಗೆ, ಅರ್ಜಿ ಸಲ್ಲಿಸಿದ ನಿಯಮಿತ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡುವ ಕುರಿತು, ಪರಿಷತ್ ಕಲಾಪದಲ್ಲಿ ಪ್ರಕಾಶ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ, ರಾಜ್ಯದ …

Read More »

ಇಂದು ಹೊರಬೀಳಲಿದೆ ಪರಿಷತ್​ ಚುನಾವಣೆ ಫಲಿತಾಂಶ… ಯಾರಿಗೆ ‘ಮಂಗಳ’ವಾರ?

ಬೆಂಗಳೂರು: ಡಿಸೆಂಬರ್​​ 10ರಂದು ನಡೆದ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆ 8 ಗಂಟೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಲಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಬೀದರ್, ಕಲಬುರಗಿ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, …

Read More »

ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಕ್ಷಣಗಣನೆ

91 ಅಭ್ಯರ್ಥಿಗಳ ಭವಿಷ್ಯ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಜೆಡಿಎಸ್ ಕೇವಲ ಆರು ಪರಿಷತ್​ ಕ್ಷೇತ್ರಗಳಲ್ಲಿ ಸ್ಪರ್ಧೆ ಕೆಲವು ಕಡೆಗಳಲ್ಲಿ ಮೂರೂ ಪಕ್ಷಗಳಿಂದ ತೀವ್ರ ಪೈಪೋಟಿ 91 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ 96 ಸಾವಿರ ಮತದಾರರು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಕ್ಷಣಗಣನೆ ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ರೀತಿಯ …

Read More »

ಬೆಳಗಾವಿ ಅಧಿವೇಶನಕ್ಕೆ ಬರುವವರಿಗೆ ಡಬಲ್ ಡೋಸ್ ಲಸಿಕೆ, 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ ಕಡ್ಡಾಯ: ಡಿಸಿ ಆರ್.ವೆಂಕಟೇಶ್‍ಕುಮಾರ್

ಬೆಳಗಾವಿ ಸುವರ್ಣಸೌಧದಲ್ಲಿ  ಅಧಿವೇಶನಕ್ಕೆ ಆಗಮಿಸುವ ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಅದೇ ರೀತಿ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟನ್ನು ತೋರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್‍ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ್‍ಕುಮಾರ್ ಅವರು ಕೋವಿಡ್ ಹಿನ್ನೆಲೆಯಲ್ಲಿ ಇದೀಗ ಎರಡು ಹೊಸ ನಿರ್ದೇಶನಗಳು ಬಂದಿವೆ. ಎರಡು ಡೋಸ್ ಲಸಿಕೆ ಮತ್ತು 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ …

Read More »

ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆಮೊದಲ ಬಲಿ:

ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆ ಇಂಗ್ಲೆಂಡ್‍ನಲ್ಲಿ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್‍ನಲ್ಲಿ ಕೊವಿಡ್ ಲಸಿಕಾ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಆರಂಭದಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಇದೀಗ ರೂಪಾಂತರಿ ವೈರಸ್‍ಗಳ ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್‍ನಿಂದ ಮತ್ತೆ ಲಾಕ್‍ಡೌನ್ ಉಂಟಾಗಬಹುದು ಎಂಬ ಭೀತಿ …

Read More »

ಸಿಟಿ ಸರ್ವೆ ಆಫೀಸ್‍ಲ್ಲಿ ಅಕ್ರಮ, ಲ್ಯಾಂಡ್ ಮಾಫಿಯಾ ?ಅಭಯ್ ಪಾಟೀಲ್

ಸಿಟಿ ಸರ್ವೇ ಆಫೀಸಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ ಪ್ರಕರಣಗಳನ್ನು ಕುರಿತಂತೆ ತನಿಖೆ ಮಾಡಲು ತನಿಖಾಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಿ ಸೂಕ್ರ ಕ್ರಮ ಜರುಗಿಸುವ ನಿಟ್ಟಿನಲ್ಲಿ ಸರಿಯಾದ ಉತ್ತರವನ್ನು ಕಂದಾಯ ಸಚಿವರು ಒದಗಿಸಿಲ್ಲ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗಮನ ಸೆಳೆಯುವ ಪ್ರಶ್ನೆ ಕೇಳಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳನ್ನು ಕುರಿತಂತೆ ಚಚೆ ಮಾಡಲಾಗುತ್ತಿದೆ. ಈ ವೇಳೆ ಬೆಳಗಾವಿ ದಕ್ಷಿಣ ಶಾಸಕ …

Read More »

ಲಾಕ್ ಡೌನ್ ಸಂಧರ್ಭದಲ್ಲಿ ಕೂಡ ಸರ್ಕಾರ ಮೇದಾರ ಸಮಾಜಕ್ಕೆ ಯಾವುದೇ ಆರ್ಥಿಕ ಸಹಾಯ ನೀಡಿಲ್ಲ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಮೇದಾರ ಸಮಾಜ ಒಕ್ಕೂಟ ವತಿಯಿಂದ ಸುವರ್ಣ ಗಾರ್ಡನ್ ನಲ್ಲಿ ಮನವಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಜಿಲ್ಲೆಯ ಸಮಸ್ತ ಮೇದಾರ ಸಮಾಜದ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜದ ಮುಖಂಡರು ಮನವಿ ಮಾಡಿಕೊಂಡರು. ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೇದಾರ ಸಮಾಜದ ಮುಖಂಡರಾದ ಮಲ್ಲೇಶಿ ಕೊರಡೆ ಅವರು ಮೇದಾರ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ಹಾಗೂ ರಾಜಕೀಯವಾಗಿ ಹಿಂದುಳಿದಿದೆ.ಆದ್ದರಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಪ್ರತ್ಯೇಕ …

Read More »

ಜೈಲಿಗಲ್ಲ ನೇಣಿಗೆ ಹಾಕಿದರೂ #MES ವಿರುದ್ಧ ನಮ್ಮ ಹೋರಾಟ ನಿಲ್ಲದು.  ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲ..

ಬೆಳಗಾವಿ – ನಾಡದ್ರೋಹಿ ಎಮ್‌ಇಎಸ್‌ ಮುಖಂಡ ದೀಪಕ್ ದಳವಿ ಮತ್ತಿತರರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಬಂಧಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಯತ್ನ (ಸೆಕ್ಷನ್ 307) ಪ್ರಕರಣ ದಾಖಲಿಸಲಾಗಿದೆ! ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ,  ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ …

Read More »

ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಪೂರ್ವಭಾವಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಇದೇ ತಿಂಗಳ 27 ರಂದು …

Read More »