Breaking News

Yearly Archives: 2021

ಸನ್ ‘ರೈಸಿಂಗ್’ ಆಗಲು ಮಾಡ್ಬೇಕಿದೆ ಮ್ಯಾಜಿಕ್; ಲಯಕ್ಕೆ ಮರಳುತ್ತಾ ಡೆಲ್ಲಿ ಕ್ಯಾಪಿಟಲ್ಸ್..?

ಮತ್ತೊಂದು ಮೋಸ್ಟ್​​​ ಎಕ್ಸೈಟೆಡ್​​ ಮ್ಯಾಚ್​​ಗೆ ಸಾಕ್ಷಿಯಾಗಲು ದುಬೈ ಮೈದಾನ ಸಜ್ಜಾಗಿದೆ. ಮೊದಲ ಹಂತದ ದರ್ಬಾರ್ ಮುಂದುವರೆಸಲು ಡೆಲ್ಲಿ ರೆಡಿಯಾಗಿದ್ರೆ, ಪಂತ್​ ಪಡೆಗೆ ಬ್ರೇಕ್​ ಹಾಕಲು ವಿಲಿಯಮ್​ಸನ್​ ನೇತೃತ್ವದ ಸನ್​​ ರೈಸರ್ಸ್ ಗೇಮ್​ಪ್ಲಾನ್ ಮಾಡಿಕೊಂಡಿದೆ. ದಿನದಿಂದ ದಿನಕ್ಕೆ ಐಪಿಎಲ್ ಸೆಕೆಂಡ್​ ಹಾಫ್ ರಂಗೇರುತ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​ ಮ್ಯಾಚ್​ಗೆ ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂ ಸಜ್ಜಾಗಿದೆ. ಇಂದಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ & ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದೆ. ಯಂಗ್ vs …

Read More »

ತಾಲಿಬಾನ್​ ಪ್ರತಿನಿಧಿಸಲು ಪಾಕ್ ಅನುಮತಿ ಕೇಳಿದ ಬೆನ್ನಲ್ಲೇ SAARC ಸಭೆಯೇ ರದ್ದು..!

ನವದೆಹಲಿ: ಸೆಪ್ಟೆಂಬರ್ 25ರಂದು ನಿಗದಿಯಾಗಿದ್ದ ವಾರ್ಷಿಕ ಸಾರ್ಕ್ ವಿದೇಶಾಂಗ ಮಂತ್ರಿಗಳ ಸಭೆ ರದ್ದುಗೊಂಡಿದೆ. ಅಫ್ಘಾನಿಸ್ತಾನ ಪ್ರತಿನಿಧಿಸಲು ತಾಲಿಬಾನ್​ಗೆ ಅನುಮತಿ ನೀಡುವಂತೆ ಪಾಕಿಸ್ತಾನ ಮನವಿ ಸಲ್ಲಿಸಿದ್ದ ಬೆನ್ನಲ್ಲೇ ಸಾರ್ಕ್​ ವಿದೇಶಾಂಗ ಮಂತ್ರಿಗಳ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಸೆಪ್ಟೆಂಬರ್ 25ರಂದು ನ್ಯೂಯಾರ್ಕ್​ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯ 76ನೇ ಅಧಿವೇಶನದಲ್ಲಿ ಭಾಗವಹಿಸಬೇಕಿತ್ತು. ಆದರೆ ಎಲ್ಲಾ ಸದಸ್ಯ ರಾಷ್ಟ್ರಗಳ ಒಪ್ಪಿಗೆಯ ಕೊರತೆಯಿಂದ ಸಭೆ ರದ್ದುಗೊಂಡಿದೆ ಎಂದು ನೇಪಾಳದ …

Read More »

ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿ ತಬ್ರೇಜ್ ಎಂಬಾತನನ್ನು ಬಂಧಿಸಲಾಗಿದೆ

ಬೆಂಗಳೂರು : ಇದೀಗ ತಬ್ರೇಜ್​ನನ್ನು ಬಂಧಿಸಲಾಗಿದೆ. ಎಸ್​ಡಿಪಿಐ, ಪಿಎಫ್​ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ತಬ್ರೇಜ್​, ವಾಟ್ಸಪ್​ ಗ್ರೂಪ್​ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದ. ಅಷ್ಟೇ ಅಲ್ಲದೆ ಗಲಭೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪ ತಬ್ರೇಜ್​ ಮೇಲಿತ್ತು.

Read More »

ಐವರ ಅಸಹಜ ಸಾವು ಕೇಸ್: ಅಬಕಾರಿ ಅಧಿಕಾರಿಗಳ ಸುಲಿಗೆಗೆ ಇಳಿದಿದ್ದನಂತೆ ಶಂಕರ್..!

ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಅಸಹಜ ಸಾವು ಕಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ಆರೋಪಿ ಶಂಕರ್ ವಿರುದ್ಧ  ಮಾಹಿತಿ ಹಕ್ಕು ಕಾಯ್ದೆ (RTI) ಯನ್ನು ದುರುಪಯೋಗ ಪಡಿಸಿಕೊಂಡು ಹಣ ಪೀಕಿರುವ ಆರೋಪ ಕೇಳಿ ಬಂದಿದೆ. ಅಬಕಾರಿ ಇಲಾಖೆಯಲ್ಲಿ ಗಾರ್ಡ್​ ಆಗಿದ್ದ ಶಂಕರ್..! ರಾಜ್ಯದ ವಿವಿಧ ಅಬಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್..! ಶಂಕರ್ …

Read More »

ಪಾಕಿಸ್ತಾನದ ಇಂಟರ್‌ ಸರ್ವೀಸಸ್‌ ಇಂಟೆಲಿಜೆನ್ಸಿ ನೀಡಿದವನಿಗೆ ಸಿಕ್ಕಿದು ಬರಿ 3000.

ಬೆಂಗಳೂರು: ಭಾರತೀಯ ಸೇನಾ ನೆಲೆಗಳ ಕುರಿತು ಫೋಟೋ ಸಹಿತ ಮಾಹಿತಿ ನೀಡಿದ್ದ ರಾಜಸ್ಥಾನ ಮೂಲದ ತನ್ನ ‘ಗೂಢಚಾರಿ’ ಜಿನೇಂದ್ರ ಸಿಂಗ್‌ನಿಗೆ ಪಾಕಿಸ್ತಾನದ ಇಂಟರ್‌ ಸರ್ವೀಸಸ್‌ ಇಂಟೆಲಿಜೆನ್ಸಿ (ಐಎಸ್‌ಐ) ನೀಡಿದ್ದು ಕೇವಲ ಮೂರು ಸಾವಿರ ರು. ಮಾತ್ರ ಎಂಬ ಕುತೂಹಲಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಬಯಲಾಗಿದೆ. ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಪ್ರಕರಣದ ಆರೋಪಿ ಜಿನೇಂದ್ರ ಸಿಂಗ್‌ನ ಖಾತೆಗೆ ಆನ್‌ಲೈನ್‌ ಮೂಲಕ ಮೂರು ಸಾವಿರ ರು. ಸಂದಾಯವಾಗಿದೆ. …

Read More »

ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚು ಮಳೆ

ಬೆಂಗಳೂರು : ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚು ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಮಳೆ ಹೆಚ್ಚಾಗಲು ಕಾರಣವಾಗಿದೆ, ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಧ್ಯ ಮುಂಗಾರು ಈಗ ಜೈಸಲ್ಮೇರ್, ಕೋಟ, ಗುಣ, ಸತ್ನಾ, ಜಮ್ಶೆಡ್‌ಪುರನ ಕಡಿಮೆ ಒತ್ತಡದ ಕೇಂದ್ರ ನಂತರ ಆಗ್ನೇಯ ವಾರ್ಡ್‌ಗಳ ಮೂಲಕ ಈಶಾನ್ಯ ಮಧ್ಯ ಬಂಗಾಳ ಕೊಲ್ಲಿಗೆ ಹಾದು …

Read More »

ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯ – ರಣಭೀಕರ ಪ್ರವಾಹಕ್ಕೂ ನಲುಗದ ಶಿವಲಿಂಗ, ನಂದಿ ವಿಗ್ರಹ

ಚಿಕ್ಕೋಡಿ(ಬೆಳಗಾವಿ): ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯವೊಂದು ನಡೆದಿದೆ. ರಣಭೀಕರ ಪ್ರವಾಹಕ್ಕೂ ಶಿವಲಿಂಗ ಹಾಗೂ ನಂದಿ ವಿಗ್ರಹ ನಲುಗದೆ ಜನರಲ್ಲಿ ಅಚ್ಚರಿ ಮೂಡಿಸಿವೆ. ಹೌದು. ಕೃಷ್ಣಾ ನದಿ ತೀರ ಉಕ್ಕಿ ಹರಿದ ಪರಿಣಾಮ 2019 ಹಾಗೂ 2021ರಲ್ಲಿ ರಣ ಭೀಕರ ಪ್ರವಾಹ ಬಂದಿತ್ತು. ರಕ್ಕಸ ಪ್ರವಾಹಕ್ಕೆ ನದಿ ತೀರದ ಜನರ ಬದುಕು ಅಕ್ಷರಶಃ ನಲುಗಿ ಹೋಗುವುದರ ಜೊತೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಷ್ಟೇ ಅಲ್ಲದೇ ಪ್ರವಾಹಕ್ಕೆ ಸಿಲುಕಿ ಸೇತುವೆಗಳು, ಸಾವಿರಾರು …

Read More »

ಮಗಳ ಹುಟ್ಟುಹಬ್ಬಕ್ಕೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ ತಂದೆ

ಹುಬ್ಬಳ್ಳಿ: ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಅಚರಿಸಿದ ತಂದೆ, ರಸ್ತೆ ಸುರಕ್ಷತೆಯ ಜಾಗೃತಿಯನ್ನು ಮೂಡಿಸಿ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ನಗರದ ಯುವ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ತಮ್ಮ ಮಗಳು ಅಶ್ವಿಕಾಮಾನ್ಯಾ ಹೆಬಸೂರ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಇದರ ಅಂಗವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಇರುವುದರಿಂದ ರಸ್ತೆ ಅಪಘಾತಗಳಲ್ಲಿ ಸಾಕಷ್ಟು ಸಾವು ಸಂಭವಿಸುತ್ತವೆ. ಹೀಗಾಗಿ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಜಾಗೃತಿ ಮೂಡಿಸಿದ್ದಾರೆ. ನಗರದ ಚೆನ್ನಮ್ಮ …

Read More »

ಮರಾಠಿ ಪುಂಡಾಟಿಕೆಯನ್ನು ಸಮರ್ಥವಾಗಿ ಎದುರಿಸಿ ಎದುರೇಟು ಕೊಟ್ಟ ಲಕ್ಷ್ಮಿ ನಿಪ್ಪಾಣಿಕರ, ಅವರಿಗೆ ಸನ್ಮಾನ..

ಬೆಳಗಾವಿಯಲ್ಲಿ ಕಳೆದ ರವಿವಾರರಾತ್ರಿ ಮಹಾರಾಷ್ಟ್ರ ಏಕೀಕರಣಸಮಿತಿಯ ಕಾರ್ಯಕರ್ತರು ಮರಾಠಿನಾಮಫಲಕಕ್ಕೆ ಆಗ್ರಹಿಸಿ ನಡೆಸಿದಪುಂಡಾಟಿಕೆಯನ್ನು ಸಮರ್ಥವಾಗಿ ಎದುರಿಸಿ ಎದುರೇಟು ಕೊಟ್ಟ ಬೆಳಗಾವಿಮಹಾನಗರ ಪಾಲಿಕೆಯಉಪಾಯುಕ್ತರಾದ ಶ್ರೀಮತಿಲಕ್ಷ್ಮೀನಿಪ್ಪಾಣಿಕರಹಾಗೂ ಕನ್ನಡ ಬಳಕೆಯಲ್ಲಿಬದ್ಧತೆ ಪ್ರದರ್ಶಿಸಿದ ಆಯುಕ್ತರಾದಶ್ರೀ ರುದ್ರೇಶ ಘಾಳಿ ಅವರನ್ನು ಕನ್ನಡ ಪರಸಂಘಟನೆಗಳ ಮುಖಂಡರು ಮಂಗಳವಾರಮುಂಜಾನೆ ಪಾಲಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.   ಬೆಳಗಾವಿ ಜಿಲ್ಲಾಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಅಧ್ಯಕ್ಷ ಅಶೋಕ ಚಂದರಗಿ,ಕರ್ನಾಟಕರಕ್ಷಣಾ ವೇದಿಕೆಯರಾಜ್ಯ ಸಂಚಾಲಕಮಹಾದೇವ ತಳವಾರ,ಜಿಲ್ಲಾಧ್ಯಕ್ಷದೀಪಕ ಗುಡಗನಟ್ಟಿ,ಮೈನೋದ್ದೀನ್ಮಕಾನದಾರ,ಕಿರಣಮಾಳನ್ನವರ,ಸಾಗರ ಬೋರಗಲ್ಲ,ವಿರೇಂದ್ರ ಗೋಬರಿ,ವಿಶಾಲ ತಿಗಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More »

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಮನವಿ ಮಾಡಿ ಕನ್ನಡ ಚಿತ್ರರಂಗದ ನಿರ್ಮಾಪಕರು ಇಂದು ಆರೋಗ್ಯ ಸಚಿವ ಕೆ.ಸುಧಾಕರ್ ಗೆ ಮನವಿ ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ …

Read More »