ಮುಂಬೈ, ನ. 02: ವಿರಾಟ್ ಕೊಹ್ಲಿಈ ಟಿ20 ವಿಶ್ವಕಪ್ ನಂತರ ನಾಯಕತ್ವ ತ್ಯಜಿಸಲಿದ್ದಾರೆ. ವಿಶ್ವಕಪ್ ಮುಂಚೆಯೇ ಅವರು ಇದನ್ನ ಸ್ಪಷ್ಟಪಡಿಸಿದ್ದಾರೆ. ಅವರ ಸ್ಥಾನ ಯಾರು ತುಂಬುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಬಿಸಿಸಿಐ ಕೂಡ ಇನ್ನೂ ನಿರ್ಧಾರ ಮಾಡಿಲ್ಲ. ನಾಯಕತ್ವ ಸ್ಥಾನಕ್ಕೆ ಕೆಲವಾರು ಹೆಸರುಗಳು ಚಾಲನೆಯಲ್ಲಿವೆ. ಅದರಲ್ಲಿ ಪ್ರಮುಖವಾಗಿ ರೋಹಿತ್ ಶರ್ಮಾ ಹೆಸರಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಸ್ಥಾನ ಯಾರು ತುಂಬಬಹುದು ಎಂಬ ಪ್ರಶ್ನೆ ಉದ್ಭವವಾದಾಗಲೇ ರೋಹಿತ್ ಹೆಸರೇ ಮೊದಲು ಕೇಳಿಬಂದದ್ದು. ಈಗ …
Read More »Yearly Archives: 2021
ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ : ಚೆಲುವರಾಯಸ್ವಾಮಿ
ಬೆಂಗಳೂರು, ನ.2- ನಿಜವಾದ ಹೋರಾಟ ನಡೆದಿದ್ದು, ಹಾನಗಲ್‍ನಲ್ಲಿ. ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರಕ್ಕೆ ಇಳಿದು ತಮ್ಮೆಲ್ಲಾ ಬಲವನ್ನು ಪ್ರಯೋಗಿಸಿದರೂ ಮತದಾರ ಪ್ರಭು ಕಾಂಗ್ರೆಸ್ ಕೈ ಹಿಡಿದಿರುವುದು ಮುಂದಿನ 2023 ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಮಂತ್ರಿಮಂಡಲವೇ ಹಾನಗಲ್‍ನಲ್ಲಿ ಪ್ರಚಾರ ನಡೆಸಿತು. ಇದಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆಯಲ್ಲಿ ಬರುವ ಈ ಕ್ಷೇತ್ರವನ್ನು ಗೆಲ್ಲಲು ನಾನಾ …
Read More »ಬಿಜೆಪಿ ಆಡಳಿತ ಯಂತ್ರದ ದುರ್ಬಳಕೆಯಿಂದ ಕಾಂಗ್ರೆಸ್ ಸೋಲು: ಶಿವಾನಂದ ಪಾಟೀಲ
ವಿಜಯಪುರ: ದುಡ್ಡು ಹಂಚಿ ಗೆದ್ದಿರುವ ಚುನಾವಣೆ ಇದು. ದುಡ್ಡು ಪ್ರಭಾವ ಬೀರಿದೆ. ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಂಡು ಬಿಜೆಪಿ ಗೆಲುವು ಸಾಧಿಸಿದೆ ಎಂದು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಸಿಂದಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಅಧಿಕಾರದ ದುರ್ಬಳಕೆ, ಹಣ ಬಲವನ್ನೆಲ್ಲ ಮೀರಿ ಕಾಂಗ್ರೆಸ್ ಪರ ಮತ ಹಾಕಿದ ಕ್ಷೇತ್ರದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಸಿಂದಗಿ …
Read More »ಅಪ್ಪು ಇಲ್ಲದ ‘ಜೇಮ್ಸ್’, ನಿರ್ದೇಶಕ ಚೇತನ್‍ಕುಮಾರ್ ಹೇಳಿದ್ದೇನು..?
ಬೆಂಗಳೂರು, ನ.1- ನಾವು ದೇವರನ್ನು ಕಳೆದುಕೊಂಡಿದ್ದೇವೆ. ಸದ್ಯ ಜೇಮ್ಸ್ ಚಿತ್ರದ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.ಅಪ್ಪು ಸರ್ ಹೋಗುವಾಗಲೂ ಯಾರಿಗೂ ತೊಂದರೆ ಮಾಡದೆ ಸಿನಿಮಾದ ಎಲ್ಲ ಜವಾಬ್ದಾರಿಯನ್ನು ಮುಗಿಸಿ ಕೊಟ್ಟಿದ್ದಾರೆ. ಅವರು ಇರುವಾಗಲೂ ಹೋದಾಗಲೂ ಒಬ್ಬರಿಗೂ ತೊಂದರೆ ಮಾಡಲಿಲ್ಲ. ನಿರ್ಮಾಪಕರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್‍ಕುಮಾರ್ ತಿಳಿದ್ದಾರೆ. ಚಿತ್ರದ ಡಬ್ಬಿಂಗ್ ಮಾತ್ರ ಬಾಕಿ ಇದೆ. ಇದಕ್ಕೆ ಯಾರ ಬಳಿ ಡಬ್ಬಿಂಗ್ ಮಾಡಿಸಬೇಕೆಂದು ಇನ್ನು …
Read More »ಎರಡೂ ಕಡೆ ಠೇವಣಿ ಕಳೆದುಕೊಂಡ ಜೆಡಿಎಸ್
ಬೆಂಗಳೂರು, ನ.2- ಸಿಂಧಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಜೆಡಿಎಸ್‍ಗೆ ಫಲಿತಾಂಶ ಭಾರೀ ನಿರಾಸೆಯನ್ನುಂಟುಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪರಾಜಿತರಾಗಿದ್ದು, ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ನಿರೀಕ್ಷಿತ ಮತಗಳು ಜೆಡಿಎಸ್‍ಗೆ ಲಭಿಸಿಲ್ಲ. ಹೀಗಾಗಿ ಜೆಡಿಎಸ್ ನಾಯಕರಿಗೆ ಭಾರೀ ನಿರಾಸೆಯಾಗಿದೆ. ಹಾನಗಲ್ ಕ್ಷೇತ್ರದಲ್ಲಿ ನಿಯಾಜ್ ಶೇಖ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ರ್ಪಸಿದ್ದರು. ಸಿಂಧಗಿ ಕ್ಷೇತ್ರದಲ್ಲಿ ಅಂಗಡಿ ನಾಜಿಯಾ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದರು. …
Read More »ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಭರ್ಜರಿ ಗೆಲುವು
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಉಪಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಂದಗಿ ಉಪಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 74,463 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮುನಗೂಳಿ 49,897 ಮತಗಳನ್ನು …
Read More »ಪುನೀತ್ ಅಭಿಮಾನಿಗಳೇ ಗಮನಿಸಿ: ಇಂದಿನಿಂದಲೇ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ
ಬೆಂಗಳೂರು: ಶುಕ್ರವಾರದಂದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಂತ ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ನಿಧನರಾಗಿದ್ದರು. ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇಂತಹ ಪುನೀತ್ ಸಮಾಧಿ ದರ್ಶನಕ್ಕೆ, ಇಂದಿನಿಂದಲೇ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು ಪುನೀತ್ ಅವರು ನಿಧನರಾಗಿ ಐದನೇ ದಿನ. ಈ ಹಿನ್ನಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ, ರಾಜ್ ಕುಟುಂಬಸ್ಥರೆಲ್ಲಾ ಸೇರಿ ತೆರಳಿ, 5ನೇ ದಿನದ ಹಾಲು-ತುಪ್ಪ ಕಾರ್ಯವನ್ನು ನೆರವೇರಿಸಿದರು. ಅಪ್ಪುವಿಗೆ ಇಷ್ಟವಾದಂತ …
Read More »ಹಾನಗಲ್ ವಿಧಾನಸಭಾ ಉಪಚುನಾವಣೆಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಭರ್ಜರಿ ಗೆಲುವು
ಹಾವೇರಿ: ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ತೀವ್ರ ಜಿದ್ದಾಜಿದ್ಧಿನಿಂದ ಕೂಡಿದ್ದ ಹಾನಗಲ್ ಉಪಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ತವರೂರಿನಲ್ಲಿಯೇ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಸೋಲನುಭವಿಸಿದ್ದಾರೆ. ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ನ ಶ್ರೀನಿವಾಸ್ ಮನೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 14ನೇ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ಶ್ರೀನಿವಾಸ್ …
Read More »ರಾಜ್ಯದ 2ನೇ ಮಲ ಸಂಸ್ಕರಣಾ ಘಟಕಕ್ಕೆ ಶಾಸಕ ದುರ್ಯೋಧನ ಐಹೊಳೆ ಚಾಲನೆ
ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ 2ನೇ ಮಲ ಸಂಸ್ಕರಣಾ ಘಟಕಕ್ಕೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು. ಸುಮಾರು 4 ಎಕರೆ ಪ್ರದೇಶದಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ಮಲ ಸಂಸ್ಕರಣ ಘಟಕ ನಿರ್ಮಾಣವಾಗುತ್ತಿದೆ. ಈ ಸಂಸ್ಕರಣ ಘಟಕದಲ್ಲಿ ಸಂಗ್ರಹವಾಗುವ ಮಲದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ರೈತರಿಗೆ ಪೂರೈಕೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ’ ಎಂದು ಶಾಸಕ ಐಹೊಳೆ ತಿಳಿಸಿದರು. ಹೆಸ್ಕಾಂ ನಿರ್ದೇಶಕ ಮಹೇಶ್ ಭಾತೆ …
Read More »ಅಪ್ಪುಗೆ ಇಂದು ಹಾಲು ತುಪ್ಪ ವಿಧಿವಿಧಾನ ಕಾರ್ಯ
ಪುನೀತ್ ಸಮಾಧಿಯ ಬಳಿ ಹಾಲು ತುಪ್ಪ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತ್ತೊಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಮಾಧಿಗೆ ನಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಮಂಜುನಾಥ್ ಇಂದು ಹಾಲು ತುಪ್ಪ ಕಾರ್ಯಕ್ರಮ ಮುಗಿಯವರೆಗೂ ಅಭಿಮಾನಿಗಳಿಗೆ, ಇನ್ನೂ ಎರಡು ದಿನ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ. ಆದರೂ ರಾಜ್ಕುಮಾರ್ ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಹಾಗಾಗಿ ರಾಜ್ಕುಮಾರ್ ಸಮಾಧಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಗಳವಾರ …
Read More »