Breaking News

Monthly Archives: ನವೆಂಬರ್ 2021

ಬಾಗಲಕೋಟೆ: 415 ಚೀಲ ತೊಗರಿ ಬೇಳೆ ಮಾರಿ ತಲೆಮರೆಸಿಕೊಂಡಿದ್ದ ಇಬ್ಬರು ಅರೆಸ್ಟ್

ಬಾಗಲಕೋಟೆ: ಸುಮಾರು 415 ಚೀಲ ತೊಗರಿ ಬೇಳೆಯನ್ನು ಮಾರಿ ತಲೆಮರಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಾಗಲಕೋಟೆಯ ನವನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಅಂಕುಶ ರಾಠೋಡ ಮತ್ತು ದಿನೇಶ್ ಜಾಧವ್ ಬಂಧಿತ ಆರೋಪಿಗಳು. 17 ಲಕ್ಷ ರೂ. ಮೌಲ್ಯದ 415 ಚೀಲ ತೊಗರಿ ಬೇಳೆಯನ್ನು ಹೊತ್ತೊಯ್ದಿದ್ದರು. ರಾಕೇಶ ಗುಜ್ಜರ ಎಂಬುವವರ ಅಂಗಡಿಯಿಂದ ಹೊತ್ತೊಯ್ದಿದ್ದರು. ನಂತರ ಸಂತೆಯಲ್ಲಿ ಮಾರಾಟ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಾಗಲಕೋಟೆಯ ನವನಗರದ ಎಪಿಎಂಸಿ ಯಾರ್ಡನಲ್ಲಿರುವ ರಾಕೇಶ ಗುಜ್ಜರ ಎನ್ನುವವರ …

Read More »

ಕಾರ್ಮಿಕರ ಖಾತೆಗೆ 3 ಸಾವಿರ ರೂ. ಜಮಾ: ಇಲ್ಲಿದೆ ಮುಖ್ಯ ಮಾಹಿತಿ

ಧಾರವಾಡ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನ ಮೊತ್ತ 3,000 ರೂ. ಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಈಗಾಗಲೇ 3,000 ರೂ.ಗಳ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲು ಇ-ಗವರ್ನ್‍ರ್ಸ್ ಇಲಾಖೆಗೆ ಕಳುಹಿಸಲಾಗಿದೆ. ಕಳುಹಿಸಲಾದ ಡೇಟಾದಲ್ಲಿ ಶೇ.90 ರಷ್ಟು ಪಾವತಿ ಆಗಿರುತ್ತದೆ. ಉಳಿದ ಶೇ.10 ರಷ್ಟು ಡೇಟಾದಲ್ಲಿ ಫಲಾನುಭವಿ ಆಧಾರ್ …

Read More »

ಅಪ್ಪು ನಿಧನದ ಸುದ್ದಿ ಶಿವಣ್ಣನಿಗೆ ಹೇಗಾಯ್ತು ಗೊತ್ತಾ..? ಆ ಕರಾಳ ಕ್ಷಣದ ಬಗ್ಗೆ ಮಾತಾಡಿದ್ದಾರೆ..!

ಬೆಂಗಳೂರು: . ಒಂದು ಕಡೆ ಭಜರಂಗಿ 2 ಭರ್ಜರಿಯಾಗಿ ಓಡ್ತಾ ಇತ್ತು.. ಆ ಸಂತೋಷ ಖುಷಿಯಲ್ಲಿ ಅಭಿಮಾನಿಗಳು ತೇಲ್ತಾ ಇದ್ರು. ಅಭಿಮಾನಿಗಳ ನಡುವೆಯೇ ಶಿವಣ್ಣ ಕೂಡ ಕೂತು ಎಂಜಾಯ್ ಮಾಡ್ತಾ ಇದ್ರು. ಆ ಖುಷಿಯ ನಡುವೆ ಬರ ಸಿಡಿಲು ಬಡಿದಂತೆ ಆದದ್ದು ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ. ಹೌದು, ಸಿನಿಮಾ ನೋಡುತ್ತಿದ್ದ ಎಲ್ಲರಿಗೂ ಒಂದು ಕ್ಷಣ ದಿಗ್ಬ್ರಮೆಯುಂಟು ಮಾಡಿತ್ತು. ಸುಮಾರು 11 ಗಂಟೆಗೆ ಅಪ್ಪು ಆಸ್ಪತ್ರೆ ಸೇರಿದ್ರು. ಅದಾಗಲೇ ಇಲ್ಲ …

Read More »

ಭಯಾನಕವಾಗಿದೆ ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿ ಬ್ಯಾಗ್ರೌಂಡ್..!

ಬೆಂಗಳೂರು, ನ.11- ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿ ಈ ಹೆಸರು ಕೇಳಿದರೆ ರಾಜಕಾರಣಿಗಳು, ಗಣ್ಯಾತಿಗಣ್ಯ ವ್ಯಕ್ತಿಗಳು ಬೆಚ್ಚಿ ಬೀಳ್ತಾರೆ. ಇಂತಹ ಶ್ರೀಕಿಯ ಪೂರ್ವಾಪರ ಕೆದಕಿದರೆ ಅದೊಂದು ರೋಚಕ ಕಥೆಯೇ ಸರಿ. ಏನದು ಆತನ ಪೂರ್ವಾಪರ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ: ಜಯನಗರದ ನಿವಾಸಿ ಗೋಪಾಲ್ ರಮೇಶ್ ಎಂಬುವವರ ಪುತ್ರನಾಗಿರುವ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಎಂದು ಗುರುತಿಸಿಕೊಂಡಿದ್ದಾನೆ. ಯಾರಿಗೂ ಸುಳಿವು ಸಿಗದಂತೆ ಹ್ಯಾಕ್ ಮಾಡುವುದೇ ಈತನ ಸ್ಪೆಷಾಲಿಟಿ. …

Read More »

ಚಿತ್ರಪ್ರೇಮಿಗಳು ಕೊಂಡಾಡ್ತಿರೋ ‘ಜೈ ಭೀಮ್’ ಸುತ್ತ ವಿವಾದದ ಸುಳಿ..!

ಸಿನಿಮಾಗಳೇ ಹಾಗೆ.. ಸಿನಿಮಾದೊಳಗಿನ ಕಂಟೆಂಟ್ ಯಾರಿಗಾದರೂ ಇಷ್ಟವಾಗಿ ಬಿಟ್ಟರೆ ಅದನ್ನ ಮತ್ತಷ್ಟು ಜನಕ್ಕೆ ಹೇಳಿ, ನೀವೂ ನೋಡಿ ಅಂತಾರೆ. ಸೂರ್ಯ ನಟನೆಯ ಜೈ ಭೀಮ್ ಸಿನಿಮಾವೂ ಆಗಿದ್ದು, ಅದೇ. ಸಿನಿಮಾ ನೋಡಿದ ಪ್ರತಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್ ಗೆ ಹಾಕಿಕೊಳ್ಳೋದಕ್ಕೆ ಶುರು ಮಾಡಿದ್ರು. ಸ್ಟೇಟಸ್, ಆ ಸಿನಿಮಾದ ಬಗ್ಗೆ ಬಂದಿರುವ ಪಾಸಿಟಿವ್ ಒಪಿನಿಯನ್ ನೋಡಿ ಮತ್ತೊಂದಷ್ಟು ಜನ ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ರು. ಜೈ ಭೀಮ್ ಸಿನಿಮಾ ಅಮಾಯಕ …

Read More »

Madhagaja title song: ‘ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್​ ಮಾಡುತ್ತೇನೆ’ ಎಂದು ಶ್ರೀಮುರಳಿ ಹೇಳಿದ್ದಾರೆ.

ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡಿರುವ ‘ಮದಗಜ’ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಆಗಿದೆ. ಈ ಸಲುವಾಗಿ ಗುರುವಾರ (ನ.11) ಸುದ್ದಿಗೋಷ್ಠಿ ನಡೆಸಲಾಯಿತು. ಶ್ರೀಮರಳಿ, ಆಶಿಕಾ ರಂಗನಾಥ್​ ಸೇರಿದಂತೆ ಇಡೀ ಚಿತ್ರತಂಡದವರು ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ‘ಮದಗಜ ಚಿತ್ರದ ಮೊದಲ​ ಪ್ರೆಸ್​ ಮೀಟ್​ ಇದು. ಅಪ್ಪು ಮಾಮನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಹಾಡು ರಿಲೀಸ್​ ಮಾಡಿದ್ದೇವೆ. ಅವರ ನೆನಪಿನಲ್ಲಿ ಪೂಜೆ ಸಲ್ಲಿಸಿದ್ದೇವೆ. ಅಪ್ಪು ಮಾಮನನ್ನು …

Read More »

ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ವೈದ್ಯರು; ಮೂಕವಿಸ್ಮಿತರಾದ ಗದಗ ಜನತೆ

ಗದಗ: ದಂಡಪ್ಪ ಮಾನ್ವಿ ಮಹಿಳಾ ಆ್ಯಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಹೊರತೆಗೆದಿದ್ದಾರೆ. ಗರ್ಭಿಣಿ ಅನ್ನಪೂರ್ಣ ಎಂಬುವವರು ಲೋ ಬಿಪಿ, ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಊರಿನಿಂದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ ಆಪರೇಷನ್ ಮಾಡಿದ್ದಾರೆ. ಆಪರೇಷನ್ ನಡೆಸಿದ ವೈದ್ಯರ ತಂಡ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ನವೆಂಬರ್ 4ರಂದು ನಡೆದ ಅಪರೂಪದ ಘಟನೆ ತಡವಾಗಿ ಬೆಳಕಿಗೆ …

Read More »

ತಂದೆ ವಿರುದ್ಧವೇ ಸಾಕ್ಷಿ ಹೇಳಿದ 8 ವರ್ಷದ ಬಾಲಕಿ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ

ಚಾಮರಾಜನಗರ: ಗಿರವಿ ಇಟ್ಟಿದ್ದಂತ ಚಿನ್ನದ ಸರವನ್ನು ಬಿಡಿಸಿಕೊಡೋ ಸಂಬಂಧ, ಪತಿ-ಪತ್ನಿಯರ ನಡುವೆ ಜಗಳವಾಗಿದೆ. ಇದೇ ವಿಚಾರ ತಾರಕಕ್ಕೇರಿದ್ದರಿಂದ ಪತ್ನಿಯನ್ನೇ ಪತಿರಾಯ ಹತ್ಯೆಗೈದಿದ್ದಾನೆ. ಈ ವಿಷಯವನ್ನು ಕೋರ್ಟ್ ನಲ್ಲಿ ಸಾಕ್ಷ್ಯವಾಗಿ ಅಪ್ಪನ ವಿರುದ್ಧವೇ ಮಗಳು ಸಾಕ್ಷ್ಯ ಹೇಳಿದ್ದರಿಂದಾಗಿ, ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

Read More »

ವಿದ್ಯಾಕಾಶಿ ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಮದಾನ, ಉಮೇಶ್ ಶಿವಕುಮಾರ್ ಮಡಿವಾಳ ಬಂಧಿತ ಆರೋಪಿಗಳು. ಬಂಧಿತರಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರದ ಸಪ್ತಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಶಿವಗಿರಿ, ಸಾಯಿ ಹಾಸ್ಟೇಲ್, ಜಯನಗರಗಳಲ್ಲಿ ಗಾಂಜಾ ಮಾರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಓದಲೆಂದು ಬಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ …

Read More »

ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಧರಣಿ, ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದ ಜಮೀನು ಮಾಲೀಕ;

ಬೆಳಗಾವಿ  ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಹಾಗೂ ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದಲ್ಲಿ ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದು, ಪೊಲೀಸರು ಧರಣಿ ನಿರತ ರೈತರನ್ನು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ನಿರತರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ರೈತ ಮಹಿಳೆಯನ್ನು ಎಳೆದಾಡಿ, ಅವರ ಸೀರೆ ಹರಿದಿದ್ದಾರೆ …

Read More »