ಕೋಲಾರ: ಕಾರ್ಯಕ್ರಮಕ್ಕೆ ಸರಿಯಾಗಿ ವ್ಯವಸ್ಥೆ ಆಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೋಲಾರ ಎಂಪಿ ಮುನಿಸ್ವಾಮೀ ಪಂಚಾಯತಿ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನುವ ಆಡಿಯೋ ಇದೀಗ ವೈರಲ್ ಆಗಿದೆ..!? ಪಿಡಿಓ ಜೊತೆ ಮಾತನಾಡುತ್ತಲೇ ನಿನ್ನನ್ನು ಬೂಟಿನಿಂದ ಒದೆಯುತ್ತೇನೆ,ಬೊ.. ಮಗನೇ,ಅನ್ನುತ್ತಾ ಅವಾಚ್ಯವಾಗಿ ನಿಂದಿಸಿದ ಆಡಿಯೋ ಇದೀಗ ವೈರಲ್ ಆಗಿದೆ. ಶ್ರೀನಿವಾಸ್ ರೆಡ್ಡಿ ಎನ್ನುವ ಪಿಡಿಓ ಅವರಿಗೆ ಅವಾಚ್ಯವಾಗಿ ಎಂಪಿ ಮುನಿಸ್ವಾಮೀ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು..! ಎಂಪಿ ಬಾಯಲ್ಲಿ ಬಂದ ಮಾತುಗಳನ್ನು ಕೇಳಿ ಇದೀಗ ಸಾರ್ವಜನಿಕರು …
Read More »Daily Archives: ನವೆಂಬರ್ 29, 2021
ಸರ್ಕಾರಿ ಬಸ್ ಹಾಗೂ ಪಾರ್ಚೈನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ,MLA ಅಳಿಯ” ಸೇರಿ ನಾಲ್ಕು ಜನ ಸ್ಥಳದಲ್ಲೇ ಸಾವು.!
ವಿಜಯಪುರ: ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಹಾಗೂ ಪಾರ್ಚೈನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಅಪಘಾತದಲ್ಲಿ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಅಳಿಯ ವಿಜಯಕುಮಾರ್ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ನಿವಾಸಿಗಳು ಸ್ಥಳದಲ್ಲೇ …
Read More »ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರ ದಾಳಿ
ಧಾರವಾಡ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ನಿನ್ನೆ ರಾತ್ರಿ ಇಲ್ಲಿನ ಹೊಯ್ಸಳ ನಗರದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ ನಗರ ಠಾಣೆಯ ಇನಸ್ಪೆಕ್ಟರ್ ರಮೇಶ ಹೂಗಾರ,ಮಹಿಳಾ ಠಾಣೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಮತ್ತು ಪುರುಷನೋರ್ವನನ್ನು ಬಂಧಿಸಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು …
Read More »58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ
ಬೆಂಗಳೂರು: 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಿದ್ದು, ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ. 5 ನಗರಸಭೆ, 19 ಪುರಸಭೆ, 34 ಪ.ಪಂಚಾಯತ್, ಸ್ಥಳೀಯ ಸಂಸ್ಥೆಗಳ 1185 ವಾರ್ಡ್ ಗಳಿಗೆ ಮತದಾನ …
Read More »ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ ಹಾಗಾಗಿ ವಿವೇಚನೆಯುಳ್ಳ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ:ಡಿ.ಕೆ.ಶಿವಕುಮಾರ
ಬೆಳಗಾವಿ – ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಅತೀ ಹೆಚ್ಚು ಒತ್ತು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 1 ಲಕ್ಷ ದಿಂದ 5 ಲಕ್ಷಕ್ಕೆ ಅನುದಾನ ಏರಿಕೆ ಮಾಡಿದ್ದು ಕಾಂಗ್ರೆಸ್. ನರೇಗಾ ಜಾರಿಗೆ ತಂದು ಗ್ರಾಮ ಪಂಚಾಯಿತಿಗಳ ಜೀವ ಉಳಿಸಿದ್ದು ಕಾಂಗ್ರೆಸ್ ಸರಕಾರ. ಶೇ.50ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ ಹಾಗಾಗಿ ವಿವೇಚನೆಯುಳ್ಳ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ …
Read More »ಕೊಣ್ಣೂರು (ಗೋಕಾಕ): ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ; ಅಭಿನಂದನೆ ಸಲ್ಲಿಸಿದ ಶಾಲಾ ಸಿಬ್ಬಂದಿ
ಗೋಕಾಕ: ಕೊಣ್ಣೂರು ಶಾಲಾಭಿವೃದ್ಧಿ ಕಾರ್ಯಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಶಾಲಾ ಪ್ರಾಚಾರ್ಯರು ಮನವಿ ಮಾಡಿಕೊಂಡ ಹಿನ್ನೆಲೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರಿಗೆ ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಇಂದು ಶಾಲೆಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ತಾಲ್ಲೂಕಿನ ಕೊಣ್ಣೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 245 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹು ವರ್ಷಗಳಿಂದ ಶಾಲೆಯೂ ಸುಣ್ಣ-ಬಣ್ಣ ಮಾಡಿಲ್ಲ, ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ …
Read More »ಗೆಳೆಯರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಹೊಡೆದಾಟಕ್ಕೆ ತಿರುಗಿ ಓರ್ವನ ಕೊಲೆ
ಬೆಳಗಾವಿ – ಇಲ್ಲಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆಳೆಯರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಹೊಡೆದಾಟಕ್ಕೆ ತಿರುಗಿ ಓರ್ವನ ಕೊಲೆಯಾಗಿದೆ. ಭಾನುವಾರ ರಾತ್ರಿ 10.30ರ ಹೊತ್ತಿಗೆ ಘಟನೆ ನಡೆದಿದೆ. ಗೆಳಯರಿಬ್ಬರು ಸೇರಿ ಸಾರಾಯಿ ಕುಡಿದು ಬರುವಾಗ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಾಡ್ ನಿಂದ ಓರ್ವ ಇನ್ನೋರ್ವನ ತಲೆಗೆ ಹೊಡೆದಿದ್ದು, ಆತ ಅಲ್ಲಿಯೆ ಕುಸಿದು ಬಿದ್ದಿದ್ದಾನೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕುಳಿಯಲಿಲ್ಲ. ಸಾವಿಗೀಡಾದವನ …
Read More »ಪುನೀತ್ ಇಲ್ಲದೇ ಕಳೆಯಿತು ಒಂದು ತಿಂಗಳು
ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಇಲ್ಲವಾಗಿ ಇಂದಿಗೆ (ನ.29) ಒಂದು ತಿಂಗಳು ಕಳೆದಿದೆ. ಅ.29ರಂದು ಅಪ್ಪು ಹೃದಯಾಘಾತಕ್ಕೆ ಒಳಗಾದ ಕರಾಳ ಸುದ್ದಿ ಕೇಳಿಬಂದಿತ್ತು. ಅವರು ಇಹಲೋಕ ತ್ಯಜಿಸಿದರು ಎಂಬ ಕಹಿ ಸುದ್ದಿ ಬಂದು ಕಿವಿಗೆ ಎರಗಿದಾಗ ಅದನ್ನು ಯಾರಿಂದಲೂ ನಂಬಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಮತ್ತು ಕುಟುಂಬದವರು ಈಗ ನೋವಿನ ಜೊತೆಯಲ್ಲೇ ಜೀವನ ಮುಂದುವರಿಸುವುದು ಅನಿವಾರ್ಯ ಆಗಿದೆ. ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು, ಮುಂದಿನ ಕಾರ್ಯಗಳನ್ನು ಮಾಡಲಾಗುತ್ತಿದೆ. ಪುನೀತ್ ನೋಡಿಕೊಳ್ಳುತ್ತಿದ್ದ …
Read More »ಕೊರೊನಾ ಹೊಸ ರೂಪಾಂತರಿ ‘ಓಮಿಕ್ರಾನ್’ ಗುಣಲಕ್ಷಣಗಳನ್ನು ವಿವರಿಸಿದ ವೈದ್ಯೆ
ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಅತಿವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲೆಡೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು, ದಕ್ಷಿಣ ಆಫ್ರಿಕಾ ದೇಶಗಳಿಂದ ಆಗಮಿಸುವವರ ಮೇಲೆ ಪ್ರಯಾಣ ನಿರ್ಬಂಧ ಹೇರಿವೆ. ಆದಾಗ್ಯೂ ಕೂಡ ವಿಶ್ವದ ಇತರ ರಾಷ್ಟ್ರಗಳಲ್ಲೂ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇದರ ಮಧ್ಯೆ ಓಮಿಕ್ರಾನ್ ಆತಂಕದಲ್ಲಿದ್ದವರಿಗೆ ನೆಮ್ಮದಿ ನೀಡುವಂತಹ ಸುದ್ದಿಯೊಂದನ್ನು ದಕ್ಷಿಣ ಆಫ್ರಿಕಾ ವೈದ್ಯಕೀಯ …
Read More »: ಬಸ್ ಚಕ್ರಕ್ಕೆ ಸಿಲುಕಿ ಯುವಕ ಸಾವು, ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ
ಹರಪ್ಪನಹಳ್ಳಿ: ಬೈಕ್ ನಿಯಂತ್ರಣ ತಪ್ಪಿ ಕೆಎಸ್‌ಆರ್ಟಿಸಿ ಬಸ್ ಚಕ್ರ ಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಅಸೀಫ್ (20) ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದು, ಬಸ್ ಓವರ್ ಟೇಕ್ ಮಾಡುವಾಗ ಸ್ಕೂಟಿಯಿಂದ ಕೆಳಗೆ ಬಿದ್ದ ಯುವಕ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ಥಳದಲ್ಲೆ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »