ಶಿವಮೊಗ್ಗ: ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದ ಜೆಡಿಎಸ್ ವಿಧಾನಪರಿಷತ್ ಚುನಾವಣೆಯಿಂದ ಹಿಂದೆ ಸರಿದಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದ ಪಕ್ಷ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಅನಿರೀಕ್ಷಿತ ಬೆಳವಣಿಗೆ ಯಲ್ಲಿ ಜೆಡಿಯು ಭದ್ರಾವತಿಯ ಬಿ.ಕೆ. ಶಶಿಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಿವೆ. ಈ ಬಾರಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ …
Read More »Daily Archives: ನವೆಂಬರ್ 25, 2021
ಅಂಬಿ ಕಾಯಕ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ಭ್ರಷ್ಟ’ ಅಧಿಕಾರಿಗೆ ಎಸಿಬಿ ಶಾಕ್.. ಮುಂದುವರೆದ ಶೋಧ
ಮಂಡ್ಯ: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಎಸಿಬಿ ಟೀಮ್‌ಗಳು ದಾಳಿ ನಡೆಸಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ರು. ಏಕಾಏಕಿ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಬಚ್ಚಿಟ್ಟ ಹಣ, ಒಡವೆಗಳನ್ನ ಪತ್ತೆ ಹಚ್ಚಿದ್ದಾರೆ. ಕೆಲವರನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನ ಮುಂದುವರೆಸಿದ್ದಾರೆ. ಇದರಲ್ಲಿ ಕೆಆರ್‌ಪೇಟೆ HLBC ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀನಿವಾಸ್.ಕೆ ನಿವಾಸದ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ …
Read More »ಕೆಲವೇ ನಿಮಿಷಗಳಲ್ಲಿ ವಿಚಾರಣೆ ಮುಗಿಸಿ ಹೊರಟ ಹಂಸಲೇಖ
ಬೆಂಗಳೂರು: ಪೇಜಾವರ ಶ್ರೀಗಳ ಕುರಿತ ಹೇಳಿಕೆ ಕುರಿತಂತೆ ಇಂದು ವಿಚಾರಣೆಗೆ ಹಾಜರಾಗಿದ್ದ ಹಿರಿಯ ನಿರ್ದೇಶಕ ಹಂಸಲೇಖ ಅವರು ವಿಚಾರಣೆ ಮುಗಿಸಿ ಪೊಲೀಸ್ ಠಾಣೆಯಿಂದ ಹೊರಟ್ಟಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ರಾಣೆ ಬಳಿ ವಕೀಲರೊಂದಿಗೆ ಆಗಮಿಸಿದ್ದ ಹಂಸಲೇಖ ಅವರು ಬಸವನಗುಡಿ ಠಾಣೆ ಠಾಣಾಧಿಕಾರಿ ರಮೇಶ್ ನೇತೃತ್ವದಲ್ಲಿ ವಿಚಾರಣೆ ಎದುರಿಸಿದರು. ಪೊಲೀಸರು ಪ್ರಕರಣದಲ್ಲಿ ಸುಮಾರು 25-30 ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಹಂಸಲೇಖ ಅವರಿಂದ ವಿವರಣೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಚಾರಣೆ …
Read More »ವಿಚಾರಣೆಗೆ ಹಂಸಲೇಖ ಆಗಮನ; ಠಾಣೆ ಬಳಿ ಬೆಂಬಲಿಗರೊಂದಿಗೆ ನಟ ಚೇತನ್ ಧರಣಿ
ಬೆಂಗಳೂರು: ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿ ತಿಂತಾರಾ? ಕುರಿ ರಕ್ತ ಹುರಿದು ಕೊಟ್ಟರೆ ತಿಂತಾರಾ? ಎಂದು ಪ್ರಶ್ನಿಸಿದ್ದ ಹಂಸಲೇಖಾ ಇಂದು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದ್ರ ಬೆನ್ನಲ್ಲೇ ಬೆಂಬಲಿಗರೊಂದಿಗೆ ಠಾಣೆಗೆ ಆಗಮಿಸಿದ ಚೇತನ್ ಅವರನ್ನು ಇತರ ಪ್ರತಿಭಟನಾಕಾರರ ರೀತಿಯಲ್ಲೇ ತಡೆದಿದ್ದಾರೆ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚೇತನ್ ತಮ್ಮ ಬೆಂಬಲಿಗರೊಂದಿಗೆ ಧರಣಿಗೆ ಕುಳಿತಿದ್ದಾರೆ. ಈಗಾಗಲೇ ಎರಡು ಬಾರಿ ವಿಚಾರಣೆ ತಪ್ಪಿಸಿಕೊಂಡಿದ್ದ ಹಂಸಲೇಖ, ಇಂದು ನಗರದ ಬಸವನಗುಡಿ …
Read More »ಭ್ರಷ್ಟ ಅಧಿಕಾರಿಗಳನ್ನು ಗಲ್ಲಿಗೆ ಏರಿಸಬೇಕು. ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಪ್ರಮೋದ್ ಮುತಾಲಿಕ್ ಆಕ್ರೋಶ
ವಿಜಯಪುರ: ರಾಜಕೀಯದವರು ಗೂಂಡಾಗಳು ಎಂದು ವಿಜಯಪುರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಪ್ರಮೋದ್ ಮುತಾಲಿಕ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ತಾರೆ. ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ. ಹೀಗಾಗಿ ರಾಜಕಾರಣಿಗಳು ನಿಜವಾದ ಗೂಂಡಾಗಳು ಭ್ರಷ್ಟಾಚಾರಿಗಳೆಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ …
Read More »ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಂಸಲೇಖಾ:!?
ಬೆಂಗಳೂರು: ನಾದಬ್ರಹ್ಮ ಹಂಸಲೇಖಾ ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ನಡುವೆ ಹಂಸಲೇಖಾ ಜೊತೆ ನಾನೂ ಪೊಲೀಸ್ ಠಾಣೆಗೆ ಬರುತ್ತೇನೆ ಎಂದು ನಟ ಚೇತನ್ ಪೋಸ್ಟ್ ಮಾಡಿದ್ದು, ಭಜರಂಗದಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡಿರುವ ಭಜರಂಗದಳ ಕಾರ್ಯಕರ್ತರು ಹಂಸಲೇಖಾ ಜೊತೆ ಠಾಣೆಗೆ ನಟ ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಿ …
Read More »ಬಾಗಲಕೋಟೆ ಸಾಧಕನ 15 ವರ್ಷಗಳ ಸಮಾಜಮುಖಿ ಸೇವೆಗೆ ಹಲವು ಪ್ರಶಸ್ತಿ
ಬಾಗಲಕೋಟೆ: ನಗರದ ಡಾ. ಪ್ರಹ್ಲಾದ ಭೋವಿ ಎಂಬುವರು ಕಳೆದ 15 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಾ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡುವ ಜೊತೆಗೆ ರಾಜ್ಯದ ವಿವಿಧ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಡೆಸಿಕೊಂಡು ಬರುವುದರ ಜೊತೆ ಹಲವು ಸಾಧನೆಗೈದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ, ವಯಸ್ಕರಿಗೆ ಅಕ್ಷರ ಜ್ಞಾನದ ಜಾಗೃತಿ ಮೂಡಿಸಿದ್ದಾರೆ. ಹೆಚ್ಐವಿ ಸೋಂಕು ತಡೆಯುವಂತೆ ಗ್ರಾಮೀಣ ಪ್ರದೇಶಗಳಲ್ಲಿ …
Read More »ಅಪೌಷ್ಟಿಕತೆ, ರಕ್ತಹೀನತೆ.. ರಾಜ್ಯದ 14 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ
ಬೆಂಗಳೂರು: ಅಪೌಷ್ಟಿಕತೆ, ರಕ್ತಹೀನತೆ ಮತ್ತು ಪ್ರೊಟೀನ್ ಕೊರತೆಯಿಂದ ಬಳಲುತ್ತಿರುವ ಆರರಿಂದ 15 ವರ್ಷದೊಳಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ. ಉತ್ತರ ಕರ್ನಾಟಕ ಭಾಗದ 7 ಜಿಲ್ಲೆಗಳ ವಿದ್ಯಾರ್ಥಿಗಳು ಕೊರತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಕಾರ್ಯಕ್ರಮದ ಅಡಿ ಪ್ರಯೋಜನ ಪಡೆಯಲಿದ್ದಾರೆ. ಡಿಸೆಂಬರ್ 1ರಿಂದ ಕಾರ್ಯಕ್ರಮ ಆರಂಭ: ಬೀದರ್, ರಾಯಚೂರು, ಕಲಬುರಗಿ, …
Read More »ನಟಿ ಕಂಗನಾಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇತ್ತೀಚೆಗೆ ಪದ್ಮಶ್ರೀ ಗೌರವಕ್ಕೆ ಪುರಸ್ಕೃತರಾದ ಒಂದು ಒಳ್ಳೆಯ ಸುದ್ದಿ ಬಿಟ್ಟರೆ, ಅವರು ಹೆಚ್ಚು ಕಾಲ ವಿವಾದಗಳಿಂದಲೇ ಪ್ರಚಾರದಲ್ಲಿ ಇರುತ್ತಾರೆ. ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ವಾಪಸು ಪಡೆದು, ಪಂಜಾಬ್ ಮತ್ತು ಹರಿಯಾಣ ರೈತರು ಸಂಭ್ರಮದಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇಂದಿರಾ ಗಾಂಧಿ ಮತ್ತು ಸಿಖ್ಖರನ್ನು ಪರೋಕ್ಷವಾಗಿ ಉಲ್ಲೇಖಿಸಿ, 1984 ರಲ್ಲಿ ಐರನ್ ಲೇಡಿ ಅವರು ಹೊಸಕಿ ಹಾಕಿದ್ದರು ಎಂಬ …
Read More »ಎಣ್ಣೆ ಪಾರ್ಟಿಯಲ್ಲಿ ಸಂಭವಿಸಿತು ಘೋರ ದುರಂತ..! ಮದಿರೆ ನಶೆಯಲ್ಲಿ ಸ್ನೇಹಿತನ ಪ್ರಾಣವನ್ನೇ ತೆಗೆದ ಪಾಪಿ
ಫ್ರೆಂಡ್ಸ್ ಎಲ್ಲಾ ಒಂದೆಡೆ ಸೇರಿದಾಗ ಎಣ್ಣೆ ಪಾರ್ಟಿ ಮಾಡೋದು ಕಾಮನ್..! ಆದರೆ ಇಲ್ಲೊಬ್ಬ ಸ್ನೇಹಿತನ ಜೊತೆ ಮದ್ಯಪಾನ ಮಾಡಲು ಹೋಗಿ ಬಾರದ ಲೋಕಕ್ಕೆ ತೆರಳಿದ್ದಾನೆ. ಮಹಾರಾಷ್ಟ್ರದ ಕುರ್ಲಾ ಎಂಬಲ್ಲಿ ಈ ಘಟನೆ ನಡೆದಿದ್ದು 27 ವರ್ಷದ ವ್ಯಕ್ತಿ ಮದ್ಯಪಾನ ಮಾಡುತ್ತಿದ್ದ ವೇಳೆ ಸ್ನೇಹಿತನ ಕೆನ್ನೆಗೆ ಬಾರಿಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ರಾಹುಲ್ ಕಾಂಬ್ಳೆ ಹಾಗೂ ಅವಿನಾಶ್ ಬಾಲೇಕರ್ ಒಟ್ಟಾಗಿ ಕುಳಿತು ಮದ್ಯಪಾನ ಮಾಡುತ್ತಿದ್ದ ವೇಳೆಯಲ್ಲಿ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. …
Read More »