Breaking News

Daily Archives: ನವೆಂಬರ್ 17, 2021

ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಶರತ್ ಕುಮಾರ್ ಒತ್ತಾಯ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ನಟ ಶರತ್ ಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಪುನೀತ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಬೇಕು ಎಂದು ಹೇಳಿದ್ದಾರೆ. ಅಪ್ಪು ನಿಧನದ ಸುದ್ದಿ ಕೇಳಿ ದೇವರನ್ನು ಕ್ಷಮಿಸಲಾಗಲಿಲ್ಲ. …

Read More »

ಉತ್ತರ ಪ್ರದೇಶ: ಟೈಮ್ಸ್ ನೌ ಚುನಾವಣಾಪೂರ್ವ ಸಮೀಕ್ಷೆ ಏನು ಹೇಳುತ್ತದೆ?

ಲಕ್ನೋ, ನವೆಂಬರ್‌ 16: ಮುಂದಿನ ವರ್ಷ ಆರಂಭದಲ್ಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ರಾಜಕೀಯವಾಗಿ ಹೆಚ್ಚು ಪ್ರಮುಖವಾದ ರಾಜ್ಯವಾಗಿದೆ. ಪ್ರಸ್ತುತ ಬಿಜೆಪಿಯು ಇಲ್ಲಿ ಆಡಳಿತವನ್ನು ಹೊಂದಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ 2022 ರ ಚುನಾವಣಾ ಫಲಿತಾಂಶ ಏನು ಆಗಲಿದೆ …

Read More »

ದೇವಸ್ಥಾನದಲ್ಲಿನ ಪೂಜಾ ವಿಧಾನ ನಿರ್ಣಯ ಕೋರ್ಟ್‌ ಕೆಲಸವಲ್ಲ: ಸುಪ್ರೀಂ

ನವದೆಹಲಿ: ದೇವಸ್ಥಾನದಲ್ಲಿನ ಪೂಜಾ ವಿಧಿ ವಿಧಾನ ಹೇಗಿರಬೇಕು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಾಗದು ಎಂದಿರುವ ಸುಪ್ರೀಂ ಕೋರ್ಟ್‌, ಈ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯೊಂದರ ಸಂಬಂಧ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದೆ. ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪೂಜಾ ವಿಧಿವಿಧಾನಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ‘ದೇವಾಲಯದಲ್ಲಿ ಯಾವ ರೀತಿ ಪೂಜೆ ಮಾಡಬೇಕು? ತೆಂಗಿನಕಾಯಿಯನ್ನು ಹೇಗೆ ಒಡೆಯಬೇಕು? ದೇವರ ಮೂರ್ತಿಗೆ ಹೇಗೆ ಹೂಮಾಲೆ ಹಾಕಬೇಕು ಎಂದೆಲ್ಲ ನ್ಯಾಯಾಲಯ …

Read More »

ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನ ಪಲ್ಟಿ, ಓರ್ವ ಮಹಿಳೆ ಸಾವು : ಮೂವರು ಗಂಭೀರ

ಮಾನ್ವಿ: ತಾಲ್ಲೂಕಿನ ಗಿಣವಾರ ಗ್ರಾಮದಿಂದ ಕಲ್ಲೂರು ಗ್ರಾಮದಲ್ಲಿನ ಹೊಲಕ್ಕೆ ಹತ್ತಿ ಬಿಡಿಸಲು ತೆರಳಿದ ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನ ಮಾನ್ವಿ ರಾಯಚೂರು ರಸ್ತೆಯ ಬೊಮ್ಮನಾಳ್ ಕ್ರಾಸ್ ಬಳಿ ಪಲ್ಟಿ ಹೊಡೆದು 18 ಜನ ಗಾಯಗೊಂಡಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ.   ಗಿಣವಾರ ಗ್ರಾಮದ ನಿವಾಸಿ ಲಕ್ಷ್ಮಿದೇವಿ (45 ) ಮೃತಳು. 3 ಜನರಿಗೆ ಗಂಭೀರವಾದ ಗಾಯಗಳಾಗಿವೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗುತ್ತಿದ್ದು, ಮಾನ್ವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು …

Read More »

ಸಿದ್ಧಸಿರಿ ಇಥೆನಾಲ್ ಕಾರ್ಖಾನೆಗೆ ಪೂಜೆ 22ಕ್ಕೆ

ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ಧಸಿರಿ ಇಥೆನಾಲ್ ಹಾಗೂ ಪವರ್ ವಿಭಾಗದ ಪರಿವರ್ತಿತ ಕಾರ್ಖಾನೆಯ ವಾಸ್ತು ಪೂಜೆ, ಯಂತ್ರೋಪಕರಣಗಳು ಜೋಡಣಾ ಕಾರ್ಯಾರಂಭ ಹಾಗೂ ಸಿದ್ಧಸಿರಿ ಸಹಕಾರ ಸಂಸ್ಥೆಯ 136ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಇದೇ 22ರಂದು ಆಯೋಜಿಸಲಾಗಿದೆ ಎಂದು ವಿಜಯಪುರ ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.   ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಂಚೋಳಿ ಷುಗರ್ಸ್‌ ಎಂದು ಕರೆಯಲಾಗುತ್ತಿದ್ದ ಸಕ್ಕರೆ ಕಾರ್ಖಾನೆ ಹಲವು …

Read More »

ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ ನಿಧನ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮಂಗಳವಾರ (ನ.16) ಬೆಳಗ್ಗೆ ಈ ಭೀಕರ ಆಯಕ್ಸಿಡೆಂಟ್​ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 4 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸುಶಾಂತ್​ ಅಭಿಮಾನಿಗಳಿಗೆ ತೀವ್ರ ಆಘಾತ ಆಗಿದೆ.

Read More »