ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಶತಕ ದಾಟಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ದಿನೇದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 4266 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಎಂದಿನಂತೆ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಕಲಬುರಗಿಯಲ್ಲಿ 261, ಮೈಸೂರಿನಲ್ಲಿ 237, ತುಮಕೂರು 157, ಮಂಡ್ಯ 102, ಹಾಸನ 110 ಮತ್ತು ಬೀದರ್ ನಲ್ಲಿ 167 ಪ್ರಕರಣಗಳು …
Read More »Monthly Archives: ಏಪ್ರಿಲ್ 2021
ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಪರೀಕ್ಷೆ ಬಗ್ಗೆ ಇಲ್ಲಿದೆ ವಿವರ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ 24 ರಿಂದ ಜೂನ್ 16 ರ ವರೆಗೆ ಪರೀಕ್ಷೆಗಳು ನಡೆಯಲಿವೆ. 6,72,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ವೇಳಾಪಟ್ಟಿ ಮೇ 24 ರಂದು ಇತಿಹಾಸ ಮೇ 25 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ಮೇ 26 ಭೂಗೋಳಶಾಸ್ತ್ರ ಮೇ 27 ಮನಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಮೇ 28 ತರ್ಕಶಾಸ್ತ್ರ …
Read More »ಬಾಗಲಕೋಟೆ : ಮಂಗಳವಾರ ರಾತ್ರಿಯೇ ತಟ್ಟಿದ ಮುಷ್ಕರ ಬಿಸಿ
ಬಾಗಲಕೋಟೆ : ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಬಾಗಲಕೋಟೆಯಲ್ಲಿ ಮುಷ್ಕರದ ಬಿಸಿ ಮಂಗಳವಾರ ರಾತ್ರಿಯೇ ತಟ್ಟಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ವ್ಯಾಪ್ತಿಯಿಂದ ನಿತ್ಯ 443 ಬಸ್‌ಗಳು ಪ್ರಯಾಣಿಸುತ್ತವೆ. ನಿತ್ಯವೂ ಈ ಬಸ್‌ಗಳು ಜಿಲ್ಲೆಯಾದ್ಯಂತ ಓಡಾಡುತ್ತಿದ್ದವು. ಆದರೆ, ಮಂಗಳವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಈ ಬಸ್‌ಗಳು ಓಡಾಡಿದ್ದು, ರಾತ್ರಿ ಗ್ರಾಮೀಣ ಭಾಗಕ್ಕೆ ವಾಸ್ತವ್ಯ (ವಸತಿ …
Read More »ಜನತೆಗೆ ತಟ್ಟಿದ ಸಾರಿಗೆ ಮುಷ್ಕರ ಬಿಸಿ, ಖಾಸಗಿ ವಾಹನಗಳಿಂದ ಸುಲಿಗೆ -ಪ್ರಯಾಣಿಕರ ಪರದಾಟ
ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಗೊಂಡಿದ್ದು, ರಾಜ್ಯದ ಜನತೆಗೆ ಮುಷ್ಕರದ ಬಿಸಿ ತಟ್ಟಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಮುಷ್ಕರ ಆರಂಭವಾಗುತ್ತಿದ್ದಂತೆ ಡೀಸೆಲ್ ದರ 80 ರ ರೂಪಾಯಿ ಇದೆ ಎಂದು ಹೇಳುತ್ತಿರುವ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಬದಲಿ …
Read More »ಇಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಆರಂಭ
ಬೆಂಗಳೂರು: ಇಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಆರಂಭಿಸುತ್ತಿದ್ದು, ಬಸ್‍ಗಳು ರಸ್ತೆಗಿಳಿಯಲ್ಲ. ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ ಮುಷ್ಕರ ನಡೆಯುತ್ತಿದ್ದು, ಮನೆಯಿಂದ ಹೊರಡುವ ಮುನ್ನ ಎಚ್ಚರವಾಗಿರಿ. ಬಸ್ ಸಿಗಲ್ಲ, ಬಸ್ ಸಿಗದೇ ಪರದಾಡಬೇಡಿ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಸರ್ಕಾರಿ ಬಸ್‍ಗಳ ಓಡಾಟ ಇಲ್ಲ. ಇಂದು ಸುಮಾರು 24,400 ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿಯಲ್ಲ. ಡಿಸೆಂಬರ್‍ನಲ್ಲಿ 4 ದಿನ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಇದೀಗ ಮತ್ತೆ ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ …
Read More »ಗೋಕಾಕ ಆಸ್ಪತ್ರೆ ಬಳಿ ಗಲಾಟೆ: ನ್ಯಾಯವಾದಿ ಗಿಡ್ಡನವರ ಸೇರಿ ಮೂವರ ಬಂಧನ, ಹಿಂಡಲಗಾ ಜೈಲಿಗೆ ರವಾನೆ
ಗೋಕಾಕ ತಾಲೂಕು ಆಸ್ಪತ್ರೆ ಬಳಿ ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ವಕೀಲರ ನಡುವೆ ನಿನ್ನೆ ನಡೆದ ಘರ್ಷಣೆಗೆ ಸಂಬಂಧಿಸಿ ಜಾರಕಿಹೊಳಿ ಪರವಾಗಿ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡು ನ್ಯಾಯವಾದಿ ಚೆನ್ನಬಸು ಗಿಡ್ನವರ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಐಸಿಯುನಲ್ಲಿ ದಾಖಲಾಗಿದ್ದಾರೆ ಎನ್ನಲಾದ ರಮೇಶ ಜಾರಕಿಹೊಳಿ ಅವರನ್ನು ಕಾಣಲು ನ್ಯಾಯವಾದಿ ಚೆನ್ನಬಸವ ಚಂದನ ಗಿಡ್ಡನವರ ಮತ್ತು …
Read More »ಗೋಕಾಕ ನಗರದಲ್ಲಿ ಕೊರೋನಾ ಲಸಿಕೆ ಕಾರ್ಯಕ್ರಮ
ಗೋಕಾಕ ನಗರದಲ್ಲಿ ಇಂದು ಆರೋಗ್ಯ ಇಲಾಖೆ ಇವರಿಂದ 45 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋರೋನಾ ಲಸಿಕೆಯನ್ನು ನೀಡಲಾಯಿತು. ನಗರದ ಜನರಿಗೆ ಅಂಗನವಾಡಿ ಕೇಂದ್ರ ಮತ್ತು ದೇವಸ್ಥಾನಗಳಲ್ಲಿ ಲಸಿಕೆಯನ್ನು ಪಡೆಯಲು ಅವಕಾಶ ಒದಗಿಸಿದರು. ಕೊರೋನಾವನ್ನು ನಿಯಂತ್ರಿಸಲು ಈ ಲಸಿಕೆಯನ್ನು ಪಡಯುವುದು ಅತ್ಯಾವಶ್ಯಕವಾಗಿದೆ. ಆದುದರಿಂದ ಸರಕಾರದವರು ಹಳ್ಳಿಯ ಜನರ ಊರುಗಳಿಗೆ ತಲುಪಿಸಿದ್ದಾರೆ. ಇದರ ಪ್ರಯೋಜನವನ್ನು 45 ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬೇಕು.ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಅಂಗನವಾಡಿ ಕಾರ್ಯಕರ್ತೆ ಆಶಾ ಕಾರ್ಯ …
Read More »ಬಸವರಾಜ ಖಾನಪ್ಪನ್ನವರ ನಾಗನೂರ ರುದ್ರಾಕ್ಷಿ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ ಅಲ್ಲಂಪ್ರಭು ಮಹಾಸ್ವಾಮಿಗಳ ಭೇಟಿ ನೀಡಿ ಆಶೀರ್ವಾದ ಪಡೆದು ಮಾತನಾಡಿದರು
ಕನ್ನಡಪರ ಹೋರಾಟಗಾರ ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನ್ನವರ ಅವರಿಗೆ ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಿಸಿ ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಕಲ್ಪಿಸಕೊಡಬೇಕೆಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ವಿನಂತಿಸಿದರು. ಸೋಮವಾರದಂದು ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ ಅಭ್ಯರ್ಥಿ ಬಸವರಾಜ ಖಾನಪ್ಪನ್ನವರ ಅವರೊಂದಿಗೆ ನಗರದ ನಾಗನೂರ ರುದ್ರಾಕ್ಷಿ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ ಅಲ್ಲಂಪ್ರಭು ಮಹಾಸ್ವಾಮಿಗಳು ಆರ್ಶಿವಾದ ಪಡೆದು ಮತನಾಡಿದರು …
Read More »ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಈಶ್ವರಪ್ಪ ನಾಲಾಯಕ್ – ಮಾಜಿ ಸಂಸದ ವಿಎಸ್ ಉಗ್ರಪ್ಪ ವಾಗ್ದಾಳಿ
ಬಳ್ಳಾರಿ : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಕ್ರಮ ನಡೆದ್ರೂ ಇಲ್ಲಿ ಹೇಳೋರು, ಕೇಳೋರು ಯಾರು ಇಲ್ಲದಂತೆ ಆಗಿದೆ. ಸಿಎಂ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ನಾಲಾಯಕ್ ಎಂಬುದಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರದಲ್ಲಿ ಈಗ ಸಮನ್ವಯತೆಯೇ ಇಲ್ಲ. ಭ್ರಷ್ಟಾಚಾರ, …
Read More »ನಾಳೆ 5 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ, ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಓಡಾಟ
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ನಾಳೆ ಮುಷ್ಕರವನ್ನ ಮಾಡ್ತಿದ್ದು, ಪ್ರಯಾಣಿಕರಿಗೆ ಅನುಕಾಲಕ್ಕಾಗಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ರೈಲಿನ ವ್ಯವಸ್ಥೆ ಮಾಡಲಾಗಿದೆ. ಬಸ್ ಇಲ್ಲದೇ ಪ್ರಯಾಣಿಕರು ಪರದಾಡಬಾರದು ಅನ್ನೋ ದೃಷ್ಠಿಯಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೆಟ್ರೋ ಓಡಾಟವಿರಲಿದೆ.
Read More »