Breaking News

Yearly Archives: 2020

ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ರಮೇಶ ಜಾರಕಿಹೊಳಿ

ಗೋಕಾಕ : ಎಲ್ಲೆಡೆ ಹರಡುತ್ತಿರುವ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ಭಾರತದ ಲಾಕ್ ಡೌನ್ ಅವಧಿಯನ್ನು ಮೇ 3ರ ವರೆಗೆ‌ ವಿಸ್ತರಿಸಿರುವುದನ್ನು‌ ನಾನು‌ ಸ್ವಾಗತಿಸುತ್ತೇನೆ.ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳನ್ನು ಮುಕ್ತಕಂಠದಿಂದ ಗೌರವಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ …

Read More »

ನಮ್ಮ ಸರ್ಕಾರ ಅಂಬೇಡ್ಕರ್ ತತ್ವಾದರ್ಶಗಳನ್ನು ಪಾಲಿಸುವ ದೃಢಸಂಕಲ್ಪ ಮಾಡಿದೆ : ಸಿಎಂ

ಬೆಂಗಳೂರು, ಏ.14-ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್.ಅಂಬೇಡ್ಕರ್ ರವರ ತತ್ವ, ಆದರ್ಶಗಳ ಹಾದಿಯಲ್ಲಿ ನಡೆಯಲು ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ತಿಳಿಸಿದರು. ವಿಧಾನಸೌಧದ ಪೂರ್ವದಿಕ್ಕಿನ ಬಳಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾತಾನಾಡಿದರು. ಅಂಬೇಡ್ಕರ್ …

Read More »

ಮೋದಿ ಭಾಷಣಕ್ಕೂ ಮೊದಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂದೇಶ

ನವದೆಹಲಿ, ಏ.14-ಮಾರಕ ಕೊರೊನಾ ವೈರಸ್ ಸೃಷ್ಟಿಸಿರುವ ಸಂಕಷ್ಟದಿಂದ ದೇಶ ಶೀಘ್ರವೇ ಮುಕ್ತವಾಗಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ಅಗತ್ಯವಾದ ಎಲ್ಲ ನೆರವು ನೀಡಲಿದೆ ಎಂದು ಸೋನಿಯಾ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪಕ್ಷದ ಅಧಿನಾಯಕಿ, ಸದೃಢ ನೈತಿಕ ಸ್ಥೈರ್ಯದಿಂದ ದೇಶವು ಈ ಮಹಾಮಾರಿಯ …

Read More »

ಬೊಕ್ಕಸ ತುಂಬಿಸಿಕೊಳ್ಳಲು ದೇವಸ್ಥಾನಗಳ ಹುಂಡಿ ಮೇಲೆ ಸರ್ಕಾರದ ಕಣ್ಣು..!

ಬೆಂಗಳೂರು, ಏ.14- ಕೊರೊನಾ ಹೊಡೆತಕ್ಕೆ ಸರ್ಕಾರದ ಬೊಕ್ಕಸ ತತ್ತರಿಸಿರುವ ಹಿನ್ನೆಲೆಯಲ್ಲಿ ನೌಕರರ ವೇತನಕ್ಕಾಗಿ ಎ ಗ್ರೇಡ್ ದೇವಾಲಯಗಳ ಹುಂಡಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಮೇ ತಿಂಗಳ ವೇತನ ನೀಡಿದರೂ ಜೂನ್‍ನಿಂದ ಎದುರಾಗುವ ಸಂಕಟವನ್ನು ಪರಿಹರಿಸಲು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲ ದೇವಾಲಯಗಳ ಹುಂಡಿ ಮೇಲೆ ಸರ್ಕಾರ ಕಣ್ಣು ಹಾಕಿದೆ ಎನ್ನಲಾಗಿದೆ. ಆರ್ಥಿಕ ಸಂಕಷ್ಟ ಪರಿಹಾರಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಉನ್ನತಾಧಿಕಾರಿಗಳ ಪಡೆಯೊಂದನ್ನು ರಚಿಸಿಕೊಂಡಿದ್ದು, ಈ ಪಡೆ ಆದಾಯ ಮೂಲಗಳ …

Read More »

ಬಡವರ ಗೋಳು ಕೇಳುವವರು ಯಾರು ಬೆಳೆ ಬೆಳೆಸಿದ ರೈತರು ಕಂಗಾಲಾಗುತ್ತಿದ್ದಾರೆ

ಬೆಳಗಾವಿ :-ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜನರ ಗೋಳು ಕೋರೋನಾ ಎಂಬ ಮಹಾಮಾರಿ ಯಿಂದ ಜನರು ಎಲ್ಲಿ ಕೆಲಸಕ್ಕೆ ಹೋಗದಂತೆ ಆಗಿದೆ ಕೋರೋನಾ ಕಾರಣದಿಂದಾಗಿ ಹಳ್ಳಿಯ ಜನರುತಮ್ಮ ಹೊಲದಲ್ಲಿ ಬೆಳೆಸಿದ ಬೆಳೆ ಸಹಿತ ಮಾರುವಂತಿಲ್ಲ ಸುಮಾರು 3ಲಕ್ಷ ಖರ್ಚು ಮಾಡಿ 2ಎಕರೆ ಕಲ್ಲಂಗಡಿ ಹಚ್ಚಿದ್ದಾರೆ ಈಗ ಮಾರಾಟ ಆಗದೆ ಉಳಿದು ಮಣ್ಣು ಮುಚ್ಚುತ್ತಿದ್ದಾರೆ ಸುಮಾರು ಎಂಟು ಲಕ್ಷ ಲಾಭವಾಗುತ್ತಿತ್ತು. ಈಗ ಎಲ್ಲ ಮಣ್ಣು ಪಾಲಾಗಿದೆ ಇದೇ ರೀತಿ …

Read More »

ಪ್ರಧಾನಿ ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು ಗೊತ್ತೇ..?

ಬೆಂಗಳೂರು, ಏ.14- ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಯಲ್ಲಿರುವ ರೈತ ವರ್ಗ ಮತ್ತು ದಿನಗೂಲಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ‌. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಎರಡನೇ ಬಾರಿಗೆ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದಕ್ಕೆ ನಮ್ಮ ವಿರೋಧ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮದ್ದು.‌ ಇದರಲ್ಲಿ ಎರಡು …

Read More »

ಚಿಕ್ಕಬಳ್ಳಾಪುರ ನಗರಕ್ಕೂ ವ್ಯಾಪಿಸಿದೆಯಾ ಕೊರೊನಾ?

ಚಿಕ್ಕಬಳ್ಳಾಪುರ: ನಗರಕ್ಕೂ ಕೊರೊನಾ ವ್ಯಾಪಿಸಿದೆಯಾ ಅನ್ನೋ ಅನುಮಾನ ಈಗ ಶುರುವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜನ ನೆಮ್ಮದಿಯಿಂದ ಇದ್ದರು. ಆದರೆ ತಡರಾತ್ರಿ ಚಿಕ್ಕಬಳ್ಳಾಪುರ ನಗರದ ಕೆಲ ನಿವಾಸಿಗಳನ್ನ ಹಾಸ್ಪಿಟಲ್ ಕ್ವಾರಂಟೈನ್ ಗೆ ಕರೆತರಲಾಗಿದೆ. ಅಸಲಿಗೆ ಚಿಕ್ಕಬಳ್ಳಾಪುರ ನಗರದ ಸರಿ ಸುಮಾರು 70 ವರ್ಷದ ಮನೆಯ ಯಜಮಾನ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲಿದ್ದು, ಮನೆಯವರು …

Read More »

ಕೊರೊನಾ ತಡೆಯಲು ಜನತೆಗೆ ಮೋದಿಯ ಸಪ್ತ ಸೂತ್ರ……..

ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮೂರು ವಾರಗಳ ಲಾಕ್‍ಡೌನ್ ಸಮಯವನ್ನು ವಿಸ್ತರಣೆ ಮಾಡಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ವೇಳೆ ಕೊರೊನಾ ವಿರುದ್ಧ ಮೋದಿ ಸಪ್ತ ಸೂತ್ರಗಳನ್ನು ಸೂಚಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ. ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ …

Read More »

ಕಾರವಾರದಲ್ಲಿ ಸೋಂಕಿತರು ಗುಣಮುಖ – ನಾಲ್ವರು ಡಿಸ್ಚಾರ್ಜ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ನಾಲ್ವರು ಗುಣಮುಖರಾಗಿದ್ದು, ಇಂದು ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಭಟ್ಕಳ ಮೂಲದ ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣ ಜಿಲ್ಲಾಡಳಿತ ಅವರಿಗೆ ಭಟ್ಕಳ ತಾಲೂಕು ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ …

Read More »

ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ ಐವರಿಗೆ ಕೊರೋನಾ; ಆತಂಕ ಹೆಚ್ಚಿಸಿದೆ

ಹುಬ್ಬಳ್ಳಿ,(ಏ.14): ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ ಐವರಿಗೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡ ಹಿನ್ನೆಲೆ ಆತಂಕ ಹೆಚ್ಚಾಗಿದೆ.  ಮುಲ್ಲಾ ಓಣಿಯ ನಿವಾಸಿ 37 ವರ್ಷದ ವ್ಯಕ್ತಿಯ(ಪಿ-236) ಪ್ರಯಾಣ ವಿವರ ದಂಗು ಬಡಿಸಿದೆ. ಈ ವ್ಯಕ್ತಿಯಿಂದಲೇ ಈತನ ಕುಟುಂಬಸ್ಥರಿಗೂ ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿಯ ಪ್ರಯಾಣ ಹಿನ್ನೆಲೆ ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಪಿ-236 ವ್ಯಕ್ತಿ ಮಾರ್ಚ್​ 23ರಂದು ಬೆಳಗ್ಗೆ ಡ್ರೈವರ್ ಜೊತೆ ಕಾರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಪ್ರಯಾಣಿಸಿದ್ದಾರೆ. ಮಧ್ಯಾಹ್ನದವರೆಗೆ ಯಲ್ಲಾಪುರದಲ್ಲಿನ …

Read More »