ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಬೆಳಗಾವಿ: ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ ಬಿದ್ದಿದ್ದು, ಅಧ್ಯಕ್ಷ,ಉಪಾಧ್ಯಕ್ಷ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಘಟಾನುಘಟಿ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಅವಿರೋಧ ಆಯ್ಕೆ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿಯಾಗಿದೆ ಮುಂದುವರೆಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ್ …
Read More »Monthly Archives: ನವೆಂಬರ್ 2020
ಹೈಕಮಾಂಡ್ ನಡೆ ತೀವ್ರ ಕುತೂಹಲ ಇನ್ನೆರಡು ದಿನದಲ್ಲಿ ಯಡಿಯೂರಪ್ಪ ಸಂಪುಟದ ಭವಿಷ್ಯ? ಸಿಎಂ ದೆಹಲಿಗೆ ತೆರಳುವ ಸಾಧ್ಯತೆ
ಬೆಂಗಳೂರು: ಬಿಜೆಪಿ ಹೈಕಮಾಂಡ್ ನಡೆ ತೀವ್ರ ಕುತೂಹಲ ಹುಟ್ಟಿಸಿದ್ದು, ಇನ್ನೆರಡು ದಿನದಲ್ಲಿ ಯಡಿಯೂರಪ್ಪ ಸಂಪುಟದ ಭವಿಷ್ಯ ಗೊತ್ತಾಗಲಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೈಕಮಾಂಡ್ ಮನಸ್ಸು ಮಾಡಿದ್ರೆ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಹೈಕಮಾಂಡ್ ಜೊತೆ ಮುಖಾಮುಖಿಯಾಗಿ ಭೇಟಿಯಾಗಿ ಸಿಎಂ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಈಗ ಬೇಡ ಅಂದ್ರೆ ಡಿಸೆಂಬರ್ ಗೆ ಮುಂದೂಡಿಕೆಯಾಗುವ ಸಾಧ್ಯತೆಗಳು ಕೂಡ ಇವೆ. ಅಷ್ಟೇ ಅಲ್ಲ ಸಿಎಂ ದೆಹಲಿ …
Read More »ರವಿಬೆಳೆಗೆರೆ ಅವರ ಅಭಿನಯದ ಮಿಂಚು ಹೆಜ್ಜೆ ಗುರುತುಗಳು ಬಣ್ಣದ ಲೋಕದಲ್ಲೂ ಮೂಡಿವೆ
ಬೆಂಗಳೂರು, ನ.13- ಕಾದಂಬರಿಕಾರ, ಲೇಖಕ, ನಿರೂಪಕ ಹೀಗೆ ನಾನಾ ಮಜಲುಗಳಲ್ಲಿ ಗುರುತಿಸಿಕೊಂಡಿದ್ದ ರವಿಬೆಳೆಗೆರೆಯವರ ಹೆಜ್ಜೆ ಗುರುತುಗಳು ಬಣ್ಣದ ಲೋಕದಲ್ಲೂ ಮೂಡಿವೆ. ಸಿನಿಮಾಲೋಕ ಹಾಗೂ ಸಿನಿಮಂದಿ ಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ರವಿಬೆಳೆಗೆರೆ ಅವರು ರವಿಶ್ರೀವಾತ್ಸ ನಿರ್ದೇಶನದ ಗಂಡ ಹೆಂಡತಿ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಗಮನ ಸೆಳೆದರು. ನಂತರ ಗುರುದೇಶಪಾಂಡೆ ನಿರ್ದೇಶಿಸಿದ್ದ ವಾರಸ್ದಾರ, ಶಿವರಾಜ್‍ಕುಮಾರ್ ಅಭಿನಯದ ಮಾದೇಶ, ಡೆಡ್ಲಿ ಸೋಮ ಚಿತ್ರಗಳಲ್ಲೂ ತಮ್ಮ ಅಭಿನಯದ ಮಿಂಚು ಹರಿಸಿದ್ದರು. ಡೆಡ್ಲಿ ಸೋಮ ಸಿನಿಮಾಕ್ಕೆ ರವಿಬೆಳೆಗೆರೆ …
Read More »IMA ಹೂಡಿಕೆದಾರರಿಗೆ ಹಣ ವಾಪಸ್ ನೀಡಲು ಆನ್‍ಲೈನ್ ಅರ್ಜಿ ಆಹ್ವಾನ
ಬೆಂಗಳೂರು,ನ.13- ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ನ.25ರಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಾರ್ತಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಐಎಂಎ ಹಗರಣದ ಬಗ್ಗೆ ಮಾಹಿತಿ ನೀಡಿದ ಸಕ್ಷಮ ಪ್ರಾಧಿಕಾರ ಹಾಗೂ ವಿಶೇಷ ಅಧಿಕಾರಿ ಹರ್ಷಗುಪ್ತ ಅವರು, ಠೇವಣಿದಾರರು ಡಿಸೆಂಬರ್ 24ರೊಳಗಾಗಿ ಅರ್ಜಿ ಸಲ್ಲಿಸಬೇಕು. ಎರಡು ಹಂತದಲ್ಲಿ ಅರ್ಜಿ ಸಲ್ಲಿಕೆ ಅವಕಾಶವಿದ್ದು, ಮೊದಲ ಹಂತದಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳನ್ನು …
Read More »ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಿಂಗ್ ಮೇಕರ್ ಆದ್ರಾ ಬಾಲಚಂದ್ರ ಜಾರಕಿಹೊಳಿ….?ಅಧ್ಯಕ್ಷ ಉಪಾಧ್ಯಕ್ಷ ಯಾರಿಗೆ ಗೊತ್ತಾ…?
ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಳೆದ ಒಂದು ತಿಂಗಳಿನಿಂದ ನಡೆದಿರುವ ಗುದ್ದಾಟಕ್ಕೆ ಇಂದು ಹನ್ನೊಂದು ಗಂಟೆಗೆ ತೆರೆ ಬೀಳಲಿದೆ ನಿನ್ನೆ ರಾತ್ರಿ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಎರಡು ಗಂಟೆಗಳ ಕಾಲ ಬಿಜೆಪಿ ನಾಯಕರು ಮೀಟೀಂಗ್ ಮಾಡಿ,ಕರಾರು ಒಪ್ಪಂದಗಳ ಮೂಲಕ ಒಮ್ಮತಕ್ಕೆ ಬಂದಿದ್ದು ಇಂದು 10-30 ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಚ ಉಪಾದ್ಯಕ್ಷರ ಹೆಸರುಗಳನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. …
Read More »ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಕ್ರೋಶ
ಬೆಂಗಳೂರು: ಯಾರ ಹೆಸರನ್ನೂ ಉಲ್ಲೇಖಿಸದೇ ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಪಕ್ಷದ ಹೈಕಮಾಂಡ್ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಹೆಸರನ್ನು ಹೇಳದೇ ತಮ್ಮದೇ ಪಕ್ಷದ ಕೆಲವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಪೋಸ್ಟ್ ನಲ್ಲಿ ಏನಿದೆ ನಮ್ಮ ಹೆಮ್ಮೆಯ ಪ್ರಧಾನಿ …
Read More »ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ಬಹಿರಂಗ
ಬೆಂಗಳೂರು: ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ ಒಂದನ್ನು ಬಹಿರಂಗಪಡಿಸಿದ್ದಾರೆ. ಮದುವೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದ ಮಯೂರಿ, ಇದೀಗ ತಾನು ತಾಯಿಯಾಗುತ್ತಿರುವ ವಿಚಾರ ಕೂಡ ತಿಳಿಸಿದ್ದಾರೆ. ಈಗಾಗಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.ಇದೇ ವರ್ಷ ಜೂನ್ 12ರಂದು ತನ್ನ ಬಹುಕಾಲದ ಗೆಳೆಯ ಅರುಣ್ …
Read More »ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆ
ಕಾರವಾರ: ಕುಚುಕು ಗೆಳೆಯರಿಬ್ಬರಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಬಿನ್ನಾಭಿಪ್ರಾಯ ದೀಪಾವಳಿಯಲ್ಲಿ ಸಿಡಿದಿದೆ. ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆಯಾಗಿದೆ. ಇಂದು ರಾತ್ರಿ ಕಾರವಾರದ ಗ್ರೀನ್ ಸ್ಟ್ರೀಟ್ ಬಳಿ ಈ ಘಟನೆ ನಡೆದಿದೆ. ಕಾರವಾರದ ಮಾಜಾಳಿಯ ಹರೀಶ್ ಮತ್ತು ನಿತೇಶ್ ನಾಯ್ಕ ಇಬ್ಬರೂ ಮೊದಲು ಸ್ನೇಹಿತರಾಗಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ನಿತೇಶ್ ನಾಯ್ಕಗೆ ಹರೀಶ್ ಗ್ರೀನ್ ಸ್ಟ್ರೀಟ್ ಬಳಿ ಆಸಿಡ್ ಅಂಶವಿರುವ …
Read More »ಹಬ್ಬಕ್ಕೆ ಸಾಲು ಸಾಲು ರಜೆ – ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನಜಾತ್ರೆ
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನ ಮಂದಿ ಊರುಗಳತ್ತ ಪ್ರಯಾಣಿಸುತ್ತಿದ್ದು, ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಜಾತ್ರೆಯಂತಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜನ ಮಳೆ ಮತ್ತು ಕೊರೊನಾ ಸಹ ಲೆಕ್ಕಿಸದೇ ಊರುಗಳತ್ತ ಹೊರಟು ನಿಂತಿದ್ದಾರೆ. ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣದತ್ತ ಆಗಮಿಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು, ಬಳ್ಳಾರಿ, ಮೈಸೂರು …
Read More »ಬೆಳಗಾವಿ ದೇಸೂರು ಬಳಿ ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿ ಅಕ್ಕ, ತಮ್ಮ ಸ್ಥಳದಲ್ಲೇ ಸಾವ
ಬೆಳಗಾವಿ: ಲಾರಿ ಡಿಕ್ಕಿಯಾಕಿ ಬೈಕಿನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ದೇಸೂರು ಬಳಿ ನಡೆದಿದೆ. ರೇಣುಕಾ ತೇಗೂರ್(25), ಕಲ್ಮೇಶ್ ಕೊಳವಿ(19) ಮೃತ ದುರ್ದೈವಿಗಳು. ದೇಸೂರ್‍ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಚಕ್ರದಡಿ ಸಿಲುಕಿ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಬೆಳಗಾವಿ ಗ್ರಾಮೀಣ …
Read More »