ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳ ವೈದ್ಯರ ಸಭೆಯು ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಕೊರೊನಾ ಸೋಂಕು ತಡೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಅಗತ್ಯ ಸಹಕಾರ ನೀಡಬೇಕು. ಸಾಮಾನ್ಯ ರೋಗಿಗಳಿಗೆ ತಾವು ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಬೇಕು. ಮುಖ್ಯವಾಗಿ ವೈದ್ಯರಾದ ತಾವುಗಳು ಸುರಕ್ಷತಾ ಕವಚಗಳನ್ನು ತೊಟ್ಟು ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕು. ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಚತೆ …
Read More »Monthly Archives: ಏಪ್ರಿಲ್ 2020
ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ನಿಧನ
ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ (93) ಅವರು ನಿಧನರಾಗಿದ್ದಾರೆ. ಎಂ.ವಿ.ರಾಜಶೇಖರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಎಂ.ವಿ.ರಾಜಶೇಖರನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಅವರು ಪತ್ನಿ ಗಿರಿಜಾ ರಾಜಶೇಖರನ್, ಇಬ್ಬರು ಗಂಡು ಮತ್ತು ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಕೃಷಿಕ ಮತ್ತು …
Read More »ಚೀನಾ, ಅಮೆರಿಕ ಸಂಶೋಧನೆಯಿಂದ ವುಹಾನ್ ಮಾರುಕಟ್ಟೆಗೆ ಬಂತು ಕೊರೊನಾ
– ಬಾವಲಿಗಳ ಬಗ್ಗೆ ವುಹಾನ್‍ನಲ್ಲಿ ಅಧ್ಯಯನ – ಹಂದಿಗಳಿಗೆ ವೈರಸ್ ಚುಚ್ಚಿ ವೆಟ್ ಮಾರುಕಟ್ಟೆಗೆ ಮಾರಾಟ – ಈ ಅಧ್ಯಯನಕ್ಕೆ ಅಮೆರಿಕದಿಂದ ಹಣ ಲಂಡನ್: ಕೊರೊನಾ ವೈರಸ್ ಮೂಲ ಯಾವುದು ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಈಗ ಚೀನಾ ಮತ್ತು ಅಮೆರಿಕ ಸಂಶೋಧನೆಯಿಂದ ಕೊರೊನಾ ‘ಸೋರಿಕೆ’ಯಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಹೌದು. ಇಲ್ಲಿಯವರಿಗೆ ಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಿದ್ದ ವುಹಾನ್ ವೆಟ್ ಮಾರುಕಟ್ಟೆಯಿಂದ …
Read More »“ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ”
“ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ” ನಿಪ್ಪಾಣಿ ಮತಕ್ಷೇತ್ರದ ಆಡಿ ಗ್ರಾಮಕ್ಕೆ ಭೇಟಿ ನೀಡಿ, ಕೊರೋನಾ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ವಿವಿಧ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಕೊರೋನಾ ತಡೆಗಟ್ಟಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು …
Read More »ದಿಸ್ಪುರ್:ಮದ್ಯಪ್ರಿಯರಿಗೆ ಗುಡ್‍ನ್ಯೂಸ್ – ಇಂದಿನಿಂದ ಬಾರ್‌ಗಳು ಓಪನ್
ದಿಸ್ಪುರ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮದ್ಯ ಪ್ರಿಯರು ಅಂಗಡಿ ಓವನ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೀಗ ಲಾಕ್‍ಡೌನ್ ನಡುವೆಯೇ ಅಸ್ಸಾಂ ಮತ್ತು ಮೇಘಾಲಯದ ಮದ್ಯದಂಗಡಿಗಳು ಇಂದಿನಿಂದ ಮತ್ತೆ ತೆರೆಯಲು ನಿರ್ಧರಿಸಿವೆ ಎಂದು ಉಭಯ ರಾಜ್ಯಗಳ ಅಬಕಾರಿ ಇಲಾಖೆಗಳು ತಿಳಿಸಿವೆ. ಅಸ್ಸಾಂನಲ್ಲಿ, ಮದ್ಯದಂಗಡಿಗಳು, ಸಗಟು ಗೋದಾಮುಗಳು ಮತ್ತು ಸಾರಾಯಿ ಮಳಿಗೆಗಳು ಸೇರಿದಂತೆ ಲಿಕ್ಕರ್ ಶಾಪ್ ಇಂದಿನಿಂದ ಪ್ರತಿದಿನ 7 ಗಂಟೆಗಳ ಕಾಲ …
Read More »ಕ್ವಾರಂಟೈನ್ ಸೇವೆ ನೀಡಿದ ಪ್ರಪ್ರಥಮ NIMA ವೈದ್ಯ
ಹುಬ್ಬಳ್ಳಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (NIMA) ಸಂಸ್ಥೆಯ ಹಿರಿಯ ಸದಸ್ಯರಾದ ಡಾ.ಗುರುನಾಥ ಕಂಠಿಯವರು ಏಪ್ರಿಲ್ 4ರಂದು ಹುಬ್ಬಳ್ಳಿಯ ಕ್ವಾರಂಟೈನ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ NIMA ವೈದ್ಯಕೀಯ ಸಂಸ್ಥೆಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಯುರ್ವೇದ ವೈದ್ಯರುಗಳಾದ ಡಾ.ಗುರುನಾಥ ಕಂಠಿ, ಡಾ.ಎನ್.ಎನ್.ಭರದ್ವಾಡ ಮತ್ತು ಡಾ.ಎಂ.ಸಿ.ಪಾಟೀಲ್ ಇವರು ಮಾರ್ಚ್ 9 ರಂದು ಕೊವಿಡ್-19 ಸೇವೆಗಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‍ವೊಂದರ ಕ್ವಾರಂಟೈನ್ …
Read More »ಪೋಲಿಸರಿಗೆ ಲಘು ಉಪಹಾರ ನೀಡಿದ ದಿಗ್ಗಜ್ಜರು ತಂಡ
ಘಟಪ್ರಭಾ- ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಲಘು ಉಪಹಾರ ಸೇವೆಯನ್ನ ದಿಗ್ಗಜ್ಜರು ತಂಡದಿಂದ ಮಾಡಲಾಯಿತು, ಕಚೋರಿಗಳನ್ನ ಪ್ರತಿ ಸಿಬ್ಬಂದಿಗಳಿಗೆ ವಿತರಿಸಿ ಪೋಲಿಸರಿಗೆ ಧನ್ಯವಾದ ಅರ್ಪಿಸಿದ್ದು ಆಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ಮಾರುತಿ ಚೌಕಾಶಿ. ಬಸವರಾಜ ಹುಬ್ಬಳ್ಳಿ. ಶಿವಾನಂದ ಕರ್ಪೂರಮಠ.ಕುಮಾರ ಕರೋಶಿ.ಮಹೇಶ ನಾಯಿಕ.ಚನ್ನಮಲ್ಲಿಕಾರ್ಜನ ಕರ್ಪೂರಮಠ ಮತ್ತು ಮಹಾಂತೇಶ ಉಪಸ್ಥಿತರಿದ್ದರು
Read More »ಬೆಂಗಳೂರು ರೌಂಡ್ ಹಾಕಿ ಲಾಕ್‍ಡೌನ್ ಪರಿಶೀಲಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು : ಕೊರೋನಾ ಲಾಕ್‌ಡೌನ್ ಮೊದಲ ಹಂತದ ಅಂತಿಮ ಚರಣದಲ್ಲಿರುವ ಸಂದರ್ಭದಲ್ಲಿ ಜನರ ತೊಂದರೆಗೆ ಕಿವಿಗೊಡಲು ಖುದ್ದು ಸಿಎಂ ಯಡಿಯೂರಪ್ಪ ರೋಡಿಗಿಳಿದರು. ಭಾನುವಾರ ಅಧಿಕಾರಿಗಳ ಸಮೇತ ಯಡಿಯೂರಪ್ಪ ಬೆಂಗಳುರಿನ ಸಿಟಿ ರೌಂಡ್ಸ್ ಕೈಗೊಂಡು ಜನ ಮತ್ತು ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಿಟಿ ರೌಂಡ್ಸ್ ವೇಳೆ ಮುಖ್ಯಮಂತ್ರಿಗೆ ವ್ಯಾಪಾರಿಗಳಿಂದ ದೂರುಗಳ ಸುರಿಮಳೆಯೇ ಆಯಿತು. ವ್ಯಾಪಾರ ಕಮ್ಮಿ, ಪಾಸ್ ಕೊಡ್ತಿಲ್ಲ. ಪೊಲೀಸರು ಬಿಡ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು. ಈ ಮಧ್ಯೆ …
Read More »ನನ್ನಂಥವರಿಗೆ ಡಾ. ರಾಜ್ ಸ್ಫೂರ್ತಿ’ : ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ನನ್ನಂಥವರು ವರನಟ ಡಾ. ರಾಜ್ ಅವರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಡಾ. ರಾಜ್ ಕುಮಾರ್ ಜಗತ್ತು ಕಂಡ ಮೇರು ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ಅವರು ತಿಳಿಸಿದ್ದಾರೆ. ಕನ್ನಡ ಸಿನಮಾ ಲೋಕದ ಉತ್ತುಂಗದ ಸ್ಟಾರ್ ಅಷ್ಟೇ ಅಲ್ಲ. ತಮ್ಮ ನಾಡು ನುಡಿಯ ಬಗ್ಗೆ ಅದಮ್ಯ ಕಾಳಜಿ ಇಟ್ಟುಕೊಂಡಿದ್ದ ಹೋರಾಟಗಾರ ಎಂದು ಹೇಳಿದ್ದಾರೆ. ತಮ್ಮ ಅಭಿನಯ ಮತ್ತು ಬದುಕು ಎರಡರ ಮೂಲಕವೂ ಸಾಂಸ್ಕೃತಿಕ …
Read More »ಕಾರ್ಮಿಕರ ಊಟದಲ್ಲಿಯೂ ರಾಜಕೀಯ : ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಮಿಕರಿಗೆ ಸಿದ್ದ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಗೊಳಿಸುತ್ತಿದ್ದು ಪಾರದರ್ಶಕತೆ ಇಲ್ಲದೆ ನಡೆಯುತ್ತಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ. ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ …
Read More »
Laxmi News 24×7