Breaking News

Monthly Archives: ಏಪ್ರಿಲ್ 2020

ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’.

ಮಡಿಕೇರಿ: ಸಮಾಜದಲ್ಲಿ ಪತ್ರಕರ್ತರಿಂದ ಹೆಚ್ಚು ಪ್ರಚಾರಗಿಟ್ಟಿಸಿಕೊಳ್ಳುವವರೇ ಹೆಚ್ಚು. ಅದರಲ್ಲೂ ಈ ಲಾಕ್‍ಡೌನ್ ಸಮಯದಲ್ಲಿ ಬಡ ಜನರಿಗೆ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳು ಮಾಧ್ಯಮದವರು ಹಾಗೂ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪ್ರಚಾರ ಪಡೆದುಕೊಳ್ಳುತ್ತಾರೆ. ಪ್ರಚಾರ ಕೊಡುವ ಪತ್ರಕರ್ತರೇ ಯಾರಿಗೂ ತಿಳಿಯದಂತೆ ಸಂಕಷ್ಟದಲ್ಲಿ ಇರುವವರಿಗೆ ಮಾಧ್ಯಮ ಸ್ಪಂದನ ತಂಡ ಕಟ್ಟಿಕೊಂಡು ಜಿಲ್ಲೆಯ ವಿವಿಧೆಡೆ ತಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡುತ್ತಿದ್ದಾರೆ. ಹೌದು, ಕೊಡಗಿನಲ್ಲಿ ಹಲವಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಊಟದ …

Read More »

“ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ”

ಚಾಮರಾಜನಗರ: ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರಬೆಟ್ಟದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಡಿತರ ವಿತರಣೆ ಮಾಡಿದರು. ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದಾಸೋಹ ನಡೆಯದ ಕಾರಣ ಅಲ್ಲಿ ದಾಸ್ತಾನು ಆಗಿರುವ ಸುಮಾರು 89 ಟನ್ ಅಕ್ಕಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆಯಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸುಮಾರು 6,500 …

Read More »

ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ತುಂಬಿಕೊಂಡು ಹೋಗುತ್ತಿರುವಾಗಎರಡು ಲಾರಿಗಳು ಡಿಕ್ಕಿ

ಬೆಳಗಾವಿ- ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ತುಂಬಿಕೊಂಡು ಎರಡು ಲಾರಿಗಳು ಡಿಕ್ಕಿಯಾಗಿ,ನಂತರ ಪಲ್ಟೀಯಾಗಿ ತಮಿಳುನಾಡು ಮೂಲದ 42 ವರ್ಷದ ಕ್ಲೀನರ್ ಮೃತಪಟ್ಟ ಘಟನೆ ಹಿರೇಬಾಗೇವಾಡಿ ಸಮೀಪದ ಬಡೇಕೊಳ್ಳ ಮಠದ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು ಪಲ್ಟಿಯಾದ ಎರಡೂ ಲಾರಿಗಳು ಹೋಗುತ್ತಿರುವಾಗ ಹಿಂದಿನ ಲಾರಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದೆ ,ಹಿಂದಿನ ಲಾರಿಯ ಕ್ಲೀನರ್ ಮೃತಪಟ್ಟಿದ್ದು ಎರಡೂ ಲಾರಿಗಳ ಚಾಲಕರು ಗಾಯಗೊಂಡಿದ್ದಾರೆ. ಎರಡೂ ಲಾರಿಗಳು ಒಂದೇ ಟ್ರಾನ್ಸಪೋರ್ಟ್ …

Read More »

ಪಾದರಾಯನಪುರದಲ್ಲಿ ಪುಂಡರ ಗಲಾಟೆ- ರಕ್ಷಣೆಗೆ ಬಂದವರ ಮೇಲೆ ಅಟ್ಯಾಕ್

ಬೆಂಗಳೂರು: ಪಾದರಾಯನಪುರದಲ್ಲಿ ಪುಂಡರ ಹಾವಳಿ ಮುಂದುವರಿದಿದ್ದು, ಚೆಕ್‍ಪೋಸ್ಟ್ ಒಡೆದು ಹಾಕಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪಾದರಾಯನಪುರದ 58 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಸಿಬ್ಬಂದಿ ಹೋಗಿದ್ದರು. ಇಂದು ರಾತ್ರಿಯಾಗುತ್ತಿದ್ದಂತೆ ಪಾದರಾಯನಪುರದ ಕೆಲ ಪುಂಡರು ರೌಡಿಗಳ ರೀತಿಯಲ್ಲಿ ವರ್ತಿಸಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರೋದನ್ನ ಗಮನಿಸಿದ ಪುಡಿ ರೌಡಿಗಳು ದಾಂಧಲೆಯನ್ನು ನಡೆಸಿದ್ದಾರೆ. ಏಕಾಏಕಿ ವಾಹನಗಳ ಸಮೇತ ಗುಂಪು …

Read More »

ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವನೆ- ಬೆಳಗ್ಗೆ ತಮ್ಮ, ಈಗ ಅಕ್ಕ ಸಾವು

ಹುಬ್ಬಳ್ಳಿ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.   ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆ ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಸಾವನ್ನಪ್ಪಿದ್ದರೆ, ಇದೀಗ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದಾಳೆ. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ …

Read More »

(ಬೆಳಗಾವಿ):ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರುನ್ನುಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ (ಬೆಳಗಾವಿ): ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನ ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು …

Read More »

ಕೊರೊನಾ ಶಂಕಿತ ವೃದ್ಧ ಆಸ್ಪತ್ರೆಯಿಂದ ಎಸ್ಕೇಪ್ ಆಗಲು ಯತ್ನ……

ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಶಂಕಿತ ವೃದ್ಧ ರೋಗಿಯೊಬ್ಬ ಎಸ್ಕೇಪ್ ಆಗಲು ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೇರಳದ ವಯನಾಡಿನ 70 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ಶಂಕೆಯ ಆಧಾರದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈ ವೃದ್ಧ ಆಸ್ಪತ್ರೆಯಿಂದ ಹೊರಬಂದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಒಂದು ಕ್ಷಣಕ್ಕೆ ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ …

Read More »

ರಾಜ್ಯದಲ್ಲಿ ಮದ್ಯದಂಗಡಿ ಕಳ್ಳತನದ ಹಿಂದೆ ಮಾಲೀಕರ ಕೈವಾಡವಿದೆ: ಸಚಿವ ರಮೇಶ್ ಜಾರಕಿಹೊಳಿ ಆರೋಪ

ಬೆಳಗಾವಿ: ರಾಜ್ಯದಲ್ಲಿ ಮದ್ಯದಂಗಡಿ ಕಳ್ಳತನದ ಹಿಂದೆ ಮಾಲೀಕರ ಕೈವಾಡವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಅಂಗಡಿಗಳು ಕಳ್ಳತನವಾಗುತ್ತಿವೆ. ಇಲ್ಲಿ ಹೆಚ್ಚಿನ ಲಾಭಕ್ಕಾಗಿ ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ, ಹೆಚ್ಚಿನ ದರಕ್ಕೆ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ …

Read More »

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸೇವೆಯಿಂದ ವೈರಸ್ ಹರಡುವಿಕೆ ತಡೆ: ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಾಗಪ್ಪ

ಮೂಡಲಗಿ: ಅರಬಾಂವಿ ಕ್ಷೇತ್ರದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರ ಸಹಕಾರದಿಂದ ಕೊರೋನಾ ಸೈನಿಕರ ಸೇವೆಯಿಂದ ಸಾಧ್ಯವಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅವರು ಸಮೀಪದ ಖಾನಟ್ಟಿ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಾದ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಹಾದಿಮನಿ ಅವರು ಕೊರೋನಾ ಸಂತಸ್ತರ 100 ಕುಟುಂಬಗಳಿಗೆ ಆಹಾರ ವಸ್ತುಗಳ …

Read More »

ಲಾಕ್‍ಡೌನ್ ಉಲ್ಲಂಘನೆ – 118 ಮಂದಿ ವಿರುದ್ಧ ರೌಡಿಶೀಟ್ ಓಪನ್

ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಆರಂಭದಿಂದ ಇಲ್ಲಿಯವರೆಗೆ ಲಾಕ್‍ಡೌನ್ ಉಲ್ಲಂಘಿಸಿದ ಜಿಲ್ಲೆಯ 118 ಮಂದಿ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ. ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಶಹಾಬಾದ, ಸೇಡಂ, ಮತ್ತು ಚಿಂಚೋಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯ …

Read More »