Breaking News

Daily Archives: ಫೆಬ್ರವರಿ 11, 2020

ಗೋಕಾಕ್​​ನ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಗೋಕಾಕ್​​ನ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿ ಹೊರಗಡೆ ಜನ ಕಿಕ್ಕಿರಿದು ತುಂಬಿರುವುದನ್ನ ಗಮನಿಸದೇ ಕಸ್ತೂರಿ ಮುಳವಾಡ ಎಂಬ ಹಿರಿಯ ಉಪ ನೋಂದಣಾಧಿಕಾರಿ ಮೊಬೈಲ್ ಚಾಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಕೆಲಸಕ್ಕಾಗಿ ಹತ್ತಾರು ಮಂದಿ ಕಚೇರಿಯ ಹೊರಗಡೆ ಕಾಯುತ್ತಿದ್ದರೂ ಅಧಿಕಾರಿಗಳು ಅದರ ಪರಿವೇ ಇಲ್ಲದಂತೆ ವರ್ತಿಸಿದ್ದಾರೆ ಎನ್ನಲಾಗಿದೆ.

Read More »

ಮುದ್ದು ಅಳಿಯನನ್ನು ನೊಡಲು ಬಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ..!!

ಮುದ್ದು ಅಳಿಯನನ್ನು ನೊಡಲು ಬಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ..!! 2020 ರ ಹೊಸ ವರ್ಷ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮ ಸೃಷ್ಟಿ ಮಾಡುತ್ತ ಪ್ರಾರಂಭವಾಗಿದೆ.ಜನೇವರಿ ಮೊದಲನೇ ವಾರದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಸುಪುತ್ರ ಸಂತೋಷ ಜಾರಕಹೊಳಿ ತಮ್ಮ ಮೊದಲನೇ ಮಗುವಿಗೆ ತಂದೆ ಆಗಿದ್ದರಿಂದ ಜಾರಕಿಹೊಳಿ ಸಹೋದರರ ಕುಟುಂದ ಸದಸ್ಯರ ಮನದಲ್ಲಿ ಸಂತೋಷ ಮನೆ ಮಾಡಿತ್ತು.ಈ ಶುಭ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಆಸ್ಪತ್ರೆಗೆ ತೆರಳಿ ಜಾರಕಿಹೊಳಿ ಕುಟುಂಬದ ಕುಡಿಯನ್ನು ನೊಡಿ ಸಂಭ್ರಮಿಸಿದ್ದರು. …

Read More »

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ.

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ..!! ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ ಗೋಕಾಕ ಕ್ಷೇತ್ರದ ಶಾಸಕರು ಹಾಗೂ ನೂತನ ಸಚಿವರು ಆದ ರಮೇಶ ಜಾರಕಿಹೊಳಿ ಅವರು ಡಬಲ್ ಖುಷಿಯಲ್ಲಿ ತೆಲಾಡುತ್ತಿದ್ದಾರೆ.ಅವರು ಅಂದು ಕೊಂಡಂತೆ ಜಲಸಂಪನ್ಮೂಲ ಖಾತೆ ಪಡೆದು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು ಒಂದು ಖುಷಿ ಆದರೆ ಅವರ ಹಿರಿಯ ಸುಪುತ್ರನಿಗೆ ಗಂಡು ಮಗು ಆಗಿದ್ದರಿಂದ ಅವರು ತಾತನಾಗಿರುವ ಖುಷಿ ಮತ್ತೊಂದು …

Read More »