ಮೈಸೂರು: ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಲಿರುವ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಎಸ್ಪಿಜಿಯಿಂದ ವೇದಿಕೆ ಭದ್ರತೆ ಪರಿಶೀಲನೆ ನಡೆಸಲಾಗಿದೆ.
ಮಹಾರಾಜ ಕಾಲೇಜು ಮೈದಾನದ ಸುತ್ತ ಪೊಲೀಸರ ಬಿಗಿ ಭದ್ರತೆ, ವೇದಿಕೆ ಹಿಂಬಾಗದಲ್ಲಿ ಬೃಹತ್ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ.
ಅದೇ ರೀತಿ ಮೈಸೂರಿಗೆ ಬರಲಿರುವ ಪಿಎಂ, ರ್ಯಾಡಿಸನ್ ಹೋಟೆಲ್ನಲ್ಲಿ ತಂಗಲಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ ಊಟ ಇದೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬರ್ ಸಿದ್ದಪಡಿಸಲಾಗುತ್ತದೆ.
ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಟೀ ಹಾಗೂ ಮಾರಿ ಬಿಸ್ಕಟ್ ಇದೆ. ರಾತ್ರಿಯ ಊಟಕ್ಕೆ ಕಿಚಡಿ/ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಿಸಲಾಗುತ್ತದೆ
Laxmi News 24×7