Breaking News

ಮನೆ ಬೆಂಕಿ ಅಹುತಿಯಾದ ಕುಟುಂಬಕ್ಕೆ ಕನ್ನಡ ರಕ್ಷಣಾ ವೇದಿಕೆ ಮತ್ತು ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್,ಬಟ್ಟೆ ವಿತರಣೆ

Spread the love

ಮೂಡಲಗಿ: ತಾಲೂಕಿನ ಬಡಿಗವಾಡ ಗ್ರಾಮದ ರೈತ ರಂಗಪ್ಪ ಮಾಳಪ್ಪ ಚೂಡಪ್ಪಗೋಳ ಹಾಗೂ ಪತ್ನಿ,ನಾಲ್ಕು ಜನ ಮಕ್ಕಳು ಸೇರಿ ಮನೆಯಲ್ಲಿ ವಾಸಿಸುತ್ತಿದ್ದರು.

ಇತ್ತಿಚ್ಚೇಗೆ ಶನಿವಾರರಂದು ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಗ್ಯಾಸ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿತ್ತು ಮನೆಯಲ್ಲಿ ಚಿನ್ನಾಭರಣ,ಲಕ್ಷಾಂತರ ನಗದು ಹಣ,ಎರಡು ಎಮ್ಮೆ,ಒಂದು ಆಕಳು,ಗೃಹಬಳಕೆಯ ವಸ್ತುಗಳು,ದವಸ ಧಾನ್ಯಗಳು,ಬಟ್ಟೆ ಬರೆಗಳು,ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿರುವದರಿಂದಾ,ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮತ್ತು ಕನ್ನಡ ಸೇನೆ ಕರ್ನಾಟಕ ಜಂಟಿಯಾಗಿ ಅವರಿಗೆ ಆಹಾರ ಧಾನ್ಯದ ಕಿಟ್ಟಗಳನ್ನು ಹಾಗೂ ಬಟ್ಟೆಗಳನ್ನು ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಕೂಡಿ ಸೋಮವಾರಂದು ವಿತರಿಸಿದರು.

ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿ ನೊಂದ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುವುದು ಸಂಘಟನೆಗಳ ಉದ್ದೇಶ ಹಾಗೂ ವಿವಿಧ ಸಂಘಟನೆಯವರು ಇಂಥ ಕುಟುಂಬಗಳಿಗೆ ಸಹಾಯ ಸಹಕಾರ ಮಾಡಬೇಕು,ಸಂಘ ಸಂಸ್ಥೆಗಳು,ಧಾನಿಗಳು ಮುಂದೆ ಬಂದು ನೊಂದ ಕುಟುಂಬಕ್ಕೆ ಸಹಾಯ ಸಹಕಾರ ಸಲ್ಲಿಸಬೇಕು,ಮತ್ತು
ಸಂಬಂಧಿಸಿದ ಅಧಿಕಾರಿಗಳು,ಸ್ಥಳೀಯ ಜನಪ್ರತಿನಿಧಿಗಳು ಶಾಸಕರು,ಸಚಿವರು,ಈ ಕಡೆ ಗಮನ ಹರಿಸಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು,ಎಂದು ಕರವೇ ರಾಜ್ಯಾಧ್ಯಕ್ಷರು ವಿನಂತಿಯಿಂದ ಅಗ್ರಹ ಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆ ಗೋಕಾಕ್ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ,ಕರವೇ ಮುಖಂಡರಾದ ತಮ್ಮಣ್ಣಾ ಅರಭಾವಿ,ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ್ ಚಿಗಡೊಳ್ಳಿ, ಕರವೇ ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕರವೇ ಮೂಡಲಗಿ ತಾಲೂಕ ಕಾರ್ಯದರ್ಶಿಯಾದ ಮಲ್ಲೇಶ್ ಚೌಕಶಿ,ಕರವೇ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ,ರಮೇಶ್ ಮಲ್ಲಾಪುರೆ, ಸಿದ್ದಪ್ಪ ನಲ್ಲಾನಟ್ಟಿ,ಸಿದ್ದರಾಮ್ ನಲ್ಲಾನಟ್ಟಿ,ಪುಂಡಲೀಕ್ ನಂದಗಾವಿ,ಶಂಕರ್ ಜೋಗಿ,ವಿಠ್ಠಲ್ ಜಾಗನೂರ,ಯೇಸು ರಾಣ್ಣಪ್ಪಗೋಳ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಠ್ಠಲ್ ಚೂಡಪ್ಪಗೊಳ,ಬಸಪ್ಪ ಚೂಡಪ್ಪಗೊಳ,ಹಾಗೂ ಅನೇಕ ಸಂಘಟನೆ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಒಂದು‌ ಕೇಸ್, 200 ವಕೀಲರು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ನ್ಯಾಯಾಲಯ

Spread the loveಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ