Breaking News

ಚಿತ್ರರಂಗಗಳ ಮೇಲೆ ಪರಿಣಾಮ ಬೀರುತ್ತಿರುವ ಲಾಕ್ ಡೌನ್ ಘೋಷಣೆ

Spread the love

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಗೋಷಿಸಿರುವ ಹಿನ್ನಲೆಯಲ್ಲಿ ಅನೇಕ ವಿಭಾಗಗಳಿಗೆ ತೊಂದರೆ ಆಗಿದ್ದು, ಸಿನೆಮಾ ಚಿತ್ರೀಕರಣದ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ .

ಇದರಿಂದ ಸಹಜವಾಗಿಯೇ ಧಾರವಾಹಿ ಮತ್ತು ಸಿನೆಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ . ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೆಲವೆ ಕೆಲವು ಚಟುವಟಿಕೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ . ಇದರಲ್ಲಿ ಸಿನೆಮಾ ಶೂಟಿಂಗ್ ಸೇರಿಲ್ಲ . ಇದರಿಂದ ಸಹಜವಾಗಿಯೇ ಸಿನೆಮಾ ಮತ್ತು ಧಾರವಾಹಿ ಚಿತ್ರೀಕರಣ ಸ್ಥಗಿತಗೊಳ್ಳಲಿದೆ .

ಇದರಿಂದ ಬಿಗ್ ಬಾಸ್ ನಂತಹ ಮೆಗಾ ಕಾರ್ಯಕ್ರಮಗಳು ಇಕ್ಕಟ್ಟಿಗೆ ಸಿಲುಕಿವೆ . ಸರ್ಕಾರದ ನೂತನ ತೀರ್ಮಾನ ಕುರಿತಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವ ವಾಹಿನಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

ಇನ್ನು, 14 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ ಬೆನ್ನ ಹಿಂದೆಯೇ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ . ಮುಖ್ಯವಾಗಿ ರಾಜ್ಯದ ಇತರ ಪ್ರದೇಶಗಳಿಂದ ಬೆಂಗಳೂರಿಗೆ ಬಂದು ಇಲ್ಲಿ ಕೆಲಸದಲ್ಲಿ ನಿರತರಾಗಿದ್ದ ಸಾವಿರಾರು ಮಂದಿ ಊರಿಗೆ ಮರಳುತ್ತಿದ್ದಾರೆ .


Spread the love

About Laxminews 24x7

Check Also

ಮೈಸೂರು ದಸರಾ 2025: ಜಂಬೂಸವಾರಿ ಮೆರವಣಿಗೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭ

Spread the love ಮೈಸೂರು: ಈ ಬಾರಿ ಸಂಭ್ರಮ ಹಾಗೂ ಅದ್ಧೂರಿ ದಸರಾ ಆಚರಿಸಲು ಜಂಬೂಸವಾರಿ ಮೆರವಣಿಗೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ