ಮಹಾರಾಷ್ಟ್ರದ ರಾಜಕೀಯ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ದುರಂತಕ್ಕೆ ಕಾರಣವಾದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಜನವರಿ 28ರ ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಭೀಕರ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುರಂತದ ಹಿಂದಿನ ಪ್ರಮುಖ ಕಾರಣಗಳು: ದೃಶ್ಯಮಾನತೆ ಮತ್ತು ತಾಂತ್ರಿಕ ದೋಷ..?
ತನಿಖಾ ಮೂಲಗಳ ಪ್ರಕಾರ, ಅಪಘಾತಕ್ಕೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ.
ಕಡಿಮೆ ದೃಶ್ಯಮಾನತೆ: ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ರನ್‌ವೇ ಮೇಲೆ ದಟ್ಟವಾದ ಮಂಜು ಕವಿದಿತ್ತು. ದೃಶ್ಯಮಾನತೆ ತೀರಾ ಕಡಿಮೆ ಇದ್ದರೂ ಸಹ, ವಿಮಾನವನ್ನು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದ್ದು ಈ ದುರಂತಕ್ಕೆ ಒಂದು ಮುಖ್ಯ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪೈಲಟ್‌ಗಳು ಎರಡನೇ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ವಿಮಾನವು ನಿಯಂತ್ರಣ ತಪ್ಪಿ ಬೆಂಕಿ ಹೊತ್ತಿಕೊಂಡಿದೆ.
Laxmi News 24×7