ವಿಜಯಪುರ: ಮಳೆ ನಿಂತರೂ ಭೀಮಾ ನದಿಯ ಹರಿವು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಜನ ನೀರಿನ ಮಧ್ಯೆ ಜೀವನ ಕಳೆಯುವಂತಾಗಿದೆ. ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ಆಲಮೇಲ ತಾಲೂಕಿನ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಚಡಚಣ ತಾಲೂಕಿನ ಹೊಳೆಸಂಕ, ಧೂಳಖೇಡದಲ್ಲಿ ಪ್ರವಾಹ ಕಡಿಮೆಯಾಗಿಲ್ಲ. ಇಂಡಿ ತಾಲೂಕಿನ ಮೀರಗಿಯಲ್ಲೂ ನೆರೆ ಕಡಿಮೆಯಾಗಿಲ್ಲ. ತಾರಾಪುರ, ಕುಮಸಗಿ, ದೇವಣಗಾಂವ್ ಗ್ರಾಮಗಳು ಇನ್ನೂ ನಡುಗಡ್ಡೆಯಾಗಿಯೇ ಉಳಿದಿವೆ. ಮನೆ ನಿಂತರೂ ಪ್ರವಾಹದ ಅಬ್ಬರ ನಿಂತಿಲ್ಲ. ಮಳೆ ನೀರು ಹಾವಿಯಾಗುತ್ತಿಲ್ಲ. ಮನೆಗಳು, ರಸ್ತೆಗಳು ಮಳೆ ನೀರಿನಿಂದ ಮುಳುಗಿವೆ. ರಸ್ತೆಯಲ್ಲಿ ಓಡಾಡಲು ದೋಣಿ ಬಳಸುವ ಪರಿಸ್ಥಿತಿ ಇದೆ.