Breaking News

ಯುರೋಪಿಯನ್ ಒಕ್ಕೂಟದ ಜೊತೆಗೆ ಒಪ್ಪಂದ ಆತ್ಮವಿಶ್ವಾಸಿ ಭಾರತಕ್ಕೆ ಮೈಲುಗಲ್ಲು: ಮೋದಿ ಬಣ್ಣನೆ

Spread the love

ನವದೆಹಲಿ: ಭಾರತ-ಯುರೋಪಿಯನ್ ಯೂನಿಯನ್  ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಜಾರಿಗೆ ಬಂದಿದ್ದು, ಇದು ‘ಆತ್ಮವಿಶ್ವಾಸಿ ಭಾರತಕ್ಕೆ ಮೈಲುಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ  ವರ್ಣಿಸಿದರು. ಭಾರತೀಯ ಉದ್ಯಮಗಳು ಈ ಅವಕಾಶವನ್ನು ಬಳಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ಯುರೋಪಿಯನ್ ಒಕ್ಕೂಟದ 27 ದೇಶಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ದಿನದಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಮಾರುಕಟ್ಟೆ ತೆರೆದಿದ್ದು, ಭಾರತೀಯ ಉತ್ಪನ್ನಗಳ ಗುಣಮಟ್ಟ ಮತ್ತು ‘ಬ್ರ್ಯಾಂಡ್ ಇಂಡಿಯಾ’ವನ್ನು ಬಲಪಡಿಸುವ ಸಮಯ ಇದು ಎಂದರು.

India EU Trade Deal 1

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಂಟಿ ಅಧಿವೇಶನದ ಭಾಷಣವನ್ನು ಉಲ್ಲೇಖಿಸಿದ ಅವರು, ಇದು 140 ಕೋಟಿ ಭಾರತೀಯರ ವಿಶ್ವಾಸ, ಸಂಕಲ್ಪ ಮತ್ತು ವಿಶೇಷವಾಗಿ ಯುವಕರ ಆಕಾಂಕ್ಷೆಗಳ ಪ್ರತಿಬಿಂಬ ಎಂದು ಹೇಳಿದರು.

ಭಾರತ ಈಗ ಸಮಸ್ಯೆಗಳನ್ನು ಬಿಡಿಸುವ ಕಾಲದಲ್ಲಿದೆ, ಅಡಚಣೆಗಳ ಕಾಲದಲ್ಲಿಲ್ಲ ಎಂದರು. ಇದು ಸಮಸ್ಯೆಗಳ ಕಾಲವಲ್ಲ, ಪರಿಹಾರಗಳ ಯುಗ, ವಿಘ್ನಗಳ ಬದಲು ಪರಿಹಾರಗಳು, ಅಡೆತಡೆಗಳ ಬದಲು ನಿರ್ಣಯಗಳ ಮೇಲೆ ಗಮನ ಹರಿಸಬೇಕು ಎಂದು ಸಂಸದರನ್ನು ಒತ್ತಾಯಿಸಿದರು.

ಈ ಸರ್ಕಾರವನ್ನು ‘ರಿಫಾರ್ಮ್, ಪರ್ಫಾರ್ಮ್ ಮತ್ತು ಟ್ರಾನ್ಸ್‌ಫಾರ್ಮ್’ ಎಂದು ಗುರುತಿಸಲಾಗಿದ್ದು, ಈಗ ಭಾರತ ‘ರಿಫಾರ್ಮ್ ಎಕ್ಸ್‌ಪ್ರೆಸ್‌’ನಲ್ಲಿ ಪ್ರಯಾಣಿಸುತ್ತಿದೆ. ಸರ್ಕಾರದ ಕಾರ್ಯವೈಖರಿಯು ಮಾನವ ಕೇಂದ್ರಿತವಾಗಿದ್ದು, ದೀರ್ಘಕಾಲೀನ ಪರಿಹಾರಗಳ ಕಡೆಗೆ ಚಲನೆ ನಡೆಯುತ್ತಿದೆ. 2026ರ ಭಾರತವು ವಿಶ್ವಕ್ಕೆ ಆಶಾಕಿರಣವಾಗಿದ್ದು, ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ ಎಂದು ಹೇಳಿದರು.


Spread the love

About Laxminews 24x7

Check Also

ಅಜಿತ್ ಪವಾರ್ ಮಹಾರಾಷ್ಟ್ರದ ಜನರ ಸೇವೆಗೆ ಮುಂಚೂಣಿಯಲ್ಲಿದ್ದರು: ಮೋದಿ ಸಂತಾಪ

Spread the loveನವದೆಹಲಿ: ಅಜಿತ್ ಪವಾರ್  ಮಹಾರಾಷ್ಟ್ರದ ಜನರ ಸೇವೆಗೆ ಸದಾ ಮುಂಚೂಣಿಯಲ್ಲಿದ್ದರು ಎಂದು ಮಹಾರಾಷ್ಟ್ರ  ಡಿಸಿಎಂ ದುರ್ಮರಣಕ್ಕೆ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ