Breaking News

ಕೊರೊನಾಗೆ ಡಯಾಬಿಟೀಸ್ ಟೈಪ್ 2 ಮದ್ದು ? ಕೆನಡಾದಲ್ಲಿ ಕರುನಾಡ ವೈದ್ಯರಿಗೆ ಆರಂಭಿಕ ಯಶಸ್ಸು

Spread the love

ಉಡುಪಿ: ವಿಶ್ವಾದ್ಯಂತ ಮಾರಣ ಹೋಮವನ್ನೇ ನಡೆಸುತ್ತಿರುವ ಮಹಾಮಾರಿ ಕೊರೊನಾ ತೊಲಗಿಸಲು ವಿಶ್ವದ ಬಹುತೇಕ ರಾಷ್ಟ್ರಗಳ ವಿಜ್ಞಾನಿಗಳ ತಂಡ ಹರಸಾಹಸಪಡುತ್ತಿದೆ. ಇದೆಲ್ಲದ ಮಧ್ಯೆ ಉಡುಪಿ ಮೂಲದ ಕೆನಡಾ ಕನ್ನಡಿಗ ವೈದ್ಯರಿಗೆ ಕೊರೊನಾ ಔಷಧಿ ಸಂಶೋಧನೆಯಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ.

 

ಕೆನಡಾದಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಉಡುಪಿಯ ಪೆರಂಪಳ್ಳಿಯ ನೆಕ್ಕಾರ್ ನಿವಾಸಿ ಡಾ.ಪ್ರವೀಣ್ ರಾವ್ ಈ ಸಂಶೋಧನೆ ನಡೆಸಿದ್ದಾರೆ. ಮಹಾಮಾರಿ ಕರೊನಾ ತೊಲಗಿಸಲು ಟೈಪ್ 2 ಡಯಾಬಿಟೀಸ್‍ಗೆ ನೀಡುವ ಔಷಧಿ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಇದರಲ್ಲಿ ಅವರಿಗೆ ಮೊದಲ ಯಶಸ್ಸು ಕೂಡಾ ಸಿಕ್ಕಿದೆ.

ಡಿಪಿಪಿ-4 ಇನ್ಹಿಬೀಟರ್ ಇನ್ ಟೈಪ್ 2 ಡಯಾಬಿಟೀಸ್ ಮೇಲೆ 6 ಪಿ.ಎಚ್.ಡಿ ವಿದ್ಯಾರ್ಥಿಗಳನ್ನೊಳಗೊಂಡ ತಂಡದ ಜೊತೆ ಡಾ.ಪ್ರವೀಣ್ ರಾವ್ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೆನಡಾದ ಪ್ರತಿಷ್ಠಿತ ವಾಟರ್ ಲೂ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಂಶೋಧನೆ ನಡೆಯುತ್ತಿದ್ದು, ಹೊಸ ಔಷಧ ಕಂಡು ಹಿಡಿಯಲು ಹತ್ತರಿಂದ ಹದಿನೈದು ವರ್ಷ ತಗುಲುತ್ತದೆ ಎಂದು ಅಂದಾಜಿಸಲಾಗಿದೆ.

 

ಈ ಔಷಧ ಕಂಡು ಹಿಡಿಯಲು ನೂರು ಕೋಟಿ ಡಾಲರ್ ಗೂ ಅಧಿಕ ಖರ್ಚಾಗುತ್ತದೆ. ಈಗಾಗಲೇ ನಾವು ಕಂಡುಹಿಡಿದಿರುವ ಐದು ಸಾವಿರ ಔಷಧ ಫಾರ್ಮುಲಾ ಇದೆ. ಈ ಫಾರ್ಮುಲಾಗಳ ಸಂರಚನೆಯನ್ನು ಬಳಸಿಕೊಂಡು ವೈರಸ್ ವಿರುದ್ಧ ಹೋರಾಡಬೇಕು. ಟೈಪ್ 2 ಡಯಾಬಿಟೀಸ್ ಮದ್ದಿನಲ್ಲಿ ಕರೊನಾದ ವ್ಯಾಪಕ ಹರಡುವಿಕೆಯನ್ನು ತಡೆಯುವ ಶಕ್ತಿ ಇದೆ. ಇದು ಈಗಾಗಲೇ ವೈದ್ಯಕೀಯ ಪ್ರಯೋಗಗಳಿಂದ ದೃಢಪಟ್ಟಿದೆ. ಇದನ್ನು ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಿ ನೋಡುವುದು ಬಾಕಿ ಇದೆ ಎಂದು ಡಾ.ಪ್ರವೀಣ್ ರಾವ್ ಹೇಳಿದ್ದಾರೆ.


Spread the love

About Laxminews 24x7

Check Also

ಬಾಲಕಿಗೆ ಪ್ರೀತಿಸುವಂತೆ ಕಿರುಕುಳ : ಮೆಸ್ಕಾಂ ಸಿಬ್ಬಂದಿ ಪೊಲೀಸರ ವಶಕ್ಕೆ

Spread the loveಪುತ್ತೂರು(ಡಿಸೆಂಬರ್​. 22): ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸವಣೂರು ಸಮೀಪದ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ