Breaking News

65 ಎಕರೆ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ ಭದ್ರತಾ ಪಡೆ

Spread the love

ಅಗರ್ತಲ: ತ್ರಿಪುರದ  ಸೋನಮುರಾ ಉಪವಿಭಾಗದ ಸಂರಕ್ಷಿತ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ 65 ಎಕರೆಯಲ್ಲಿ ಬೆಳೆಸಲಾಗಿದ್ದ ಸುಮಾರು 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳು  ನಾಶಪಡಿಸಿವೆ.

ಕಮಲಾನಗರ, ಕೃಷ್ಣಡೋಲಾ, ದುಲುಂಗಾ ಮತ್ತು ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ. ಈ ವೇಳೆ 1.80 ಲಕ್ಷ ಪ್ರೌಢ ವ್ಯವಸ್ಥೆ ಗಾಂಜಾ ಸಸಿಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ನಾಶಪಡಿಸಲಾದ ಗಾಂಜಾದ ಮೌಲ್ಯ 27 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಜನವರಿ 29 (ಗುರುವಾರ) ರಂದು ತ್ರಿಪುರದಲ್ಲಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಮಲನಗರ, ಕೃಷ್ಣಡೋಲ, ದುಲುಂಗ ಮತ್ತು ಬಿಜೋಯ್ ನಗರಗಳಲ್ಲಿನ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಮಾದಕ ವಸ್ತುಗಳ ವಿರುದ್ಧ ರಾಜ್ಯದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ.

ದಾಳಿಯಲ್ಲಿ ಸೋನಮುರಾ ಪೊಲೀಸ್ ಠಾಣೆಯ ಘಟಕಗಳಾದ 81 ಬೆಟಾಲಿಯನ್ ಬಿಎಸ್‌ಎಫ್, 5ನೇ, 9ನೇ, 11ನೇ ಮತ್ತು 14ನೇ ಬೆಟಾಲಿಯನ್ ಟಿಎಸ್‌ಆರ್, 14ನೇ ಬೆಟಾಲಿಯನ್ ಮಹಿಳಾ ಟಿಎಸ್‌ಆರ್, 35 ಬೆಟಾಲಿಯನ್ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಭಾಗಿಯಾಗಿದ್ದರು.


Spread the love

About Laxminews 24x7

Check Also

ವಿಬಿ-ಜಿ ರಾಮ್ ಜಿ ಕಾನೂನು ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ: ರಾಷ್ಟ್ರಪತಿ ಮುರ್ಮು ಶ್ಲಾಘನೆ

Spread the loveನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ