ಯಲ್ಲಮ್ಮನಗುಡ್ಡದಲ್ಲಿ ಸಂಚಾರ ಕಿರಿಕಿರಿ

Spread the love

ಸವದತ್ತಿ: ಸಮೀಪದ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ಮಂಗಳವಾರ ಎಲ್ಲೆಡೆ ಸಂಚಾರ ಸಿಕ್ಕು ಉಂಟಾಯಿತು. ಭಕ್ತರ ನಿಯಂತ್ರಣಕ್ಕಾಗಿ ಸವದತ್ತಿ ಯಿಂದ ಸಂಗಪ್ಪನಕೊಳ್ಳ ಮಾರ್ಗವಾಗಿ ಪ್ರವೇಶ ಹಾಗೂ ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗವಾಗಿ ನಿರ್ಗಮನಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಯಿತು. ಆದರೆ, ನಿರೀೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಸಂಚಾರ ಸಿಕ್ಕು ಹೆಚ್ಚಿತು.
ಯಲ್ಲಮ್ಮನಗುಡ್ಡದಿಂದ ಸವದತ್ತಿ ಎಪಿಎಂಸಿ ವರೆಗೆ, ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗದ ಎಪಿಎಂಸಿ, ಮುನವಳ್ಳಿ, ಧಾರವಾಡ, ನರಗುಂದ ರಸ್ತೆಗಳಲ್ಲಿ 5 ಕಿಮೀ ಉದ್ದನೆಯ ವಾಹನಗಳ ಸಾಲು ಕಂಡುಬಂದವು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜಾತ್ರೆಯ ಕೊನೆಯ ಮಂಗಳವಾರ ಸಿಬ್ಬಂದಿ ಕೊರತೆ ಎದ್ದು ಕಾಣಿಸಿತು.  ಭಕ್ತರು ಸಂಚಾರ ಸಿಕ್ಕುವಿನಿಂದ ಕಂಗಾಲಾಗಿ ವಾಹನ ಅಲ್ಲಲ್ಲೆ ಬಿಟ್ಟು ಸುಮಾರು 5&6 ಕಿಮೀಗೂ ಅಧಿಕ ಮಾರ್ಗದವರೆಗೆ ಕಾಲ್ನಡಿಗೆ ಮೂಲಕ ತೆರಳುವ ಅನಿವಾರ್ಯತೆ ಎದುರಿಸಿದರು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಸಂಚಾರ ಹಾಗೂ ಸಿಬ್ಬಂದಿ ಸಮರ್ಪಕವಾಗಿರದ ಪರಿಣಾಮ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.

Spread the love

About Laxminews 24x7

Check Also

Belagavi: ಡಾ.ಕೋರೆಗೆ ಪದ್ಮಶ್ರೀ ನಾಡಿಗೆ ಸಂದ ಗೌರವ

Spread the loveಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ