Breaking News

ನಾವು ಎಷ್ಟು ಕಠಿಣವಾಗಿ ಲಾಕ್‌ಡೌನ್ ಪಾಲಿಸುತ್ತೇವೋ ಅದರ ಮೇಲೆ ವಿಸ್ತರಣೆ ಅವಲಂಬಿತ

Spread the love

ಬೆಳಗಾವಿ:  ನಾವು ಎಷ್ಟು ಕಠಿಣವಾಗಿ ಲಾಕ್‌ಡೌನ್ ಪಾಲಿಸುತ್ತೇವೋ ಅದರ ಮೇಲೆ ವಿಸ್ತರಣೆ ಅವಲಂಬಿತವಾಗಲಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಮತ್ತೆ ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ ವಿಚಾರವಾಗಿ  ನಗರದಲ್ಲಿ ಇಂದು  ಪ್ರತಿಕ್ರಿಯಿಸಿದ ಅವರು,   ಲಾಕ್‌ಡೌನ್ ಇನ್ನೂ ಹೆಚ್ಚು ಗಂಭೀರವಾಗಿ ತಗೆದುಕೊಂಡರೇ ಸಮಸ್ಯೆ ಪರಿಹಾರವಾಗಲಿದೆ.  ಇಲ್ಲದಿದ್ದರೆ ದೊಡ್ಡಮಟ್ಟಕ್ಕೆ ಅನಾಹುತ ಆಗುವ ಸಂಭವವಿರುತ್ತೆ. ದಯವಿಟ್ಟು ಲಾಕ್‌ಡೌನ್‌ನ್ನು ಗಂಭೀರವಾಗಿ ಪಾಲಿಸುವಂತೆ ಜನರಿಗೆ  ಮನವಿ ಮಾಡಿಕೊಂಡರು.

ಮನೆ ಬಿಟ್ಟು ಹೊರಬರಬೇಡಿ, ನಿಮಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸುತ್ತೇವೆ. ಗೂಡ್ಸ್ ರೈಲುಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ರೈಲು ಬೋಗಿಗಳಲ್ಲಿ ಐಸೋಲೇಷನ್ ವಾರ್ಡ್ ನಿರ್ಮಾಣದ ವಿಚಾರವಾಗಿ ಪ್ರತಿಕ್ರಿಯಿಸಿ,  ಏನಾದರೂ ಅನಾಹುತ ಆದರೆ ಹೆಚ್ಚಿನ ವ್ಯವಸ್ಥೆ ಬೇಕಾಗುತ್ತದೆ. ಹಳೆಯ ಬೋಗಿಗಳನ್ನು ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು.  ಎಲ್ಲಾ ರೇಲ್ವೆ ವಲಯಗಳಲ್ಲಿ ಈ ಕೆಲಸ ಮಾಡಲಾಗುತ್ತೆ. ಕೊರೊನಾ ವೈರಸ್ ಕಂಟ್ರೋಲ್‌ ಸಿಗದೆ ಹೆಚ್ಚಿನ ಮಟ್ಟದಲ್ಲಿ ವ್ಯಾಪಿಸಿದರೆ ರೈಲು ಬೋಗಿಗಳನ್ನ ವಾರ್ಡ್ ಗಳಾಗಿ ಕನ್ವರ್ಟ್ ಮಾಡಲಾಗುತ್ತೆ‌ ಎಂತಲೂ ಅವರು ಹೇಳಿದ್ರು.

ರಾಜ್ಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನೂ 15 ದಿನ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಅಂತಾರಾಜ್ಯ ಕಾರ್ಮಿಕರು ಯಾರೂ ಸಹ ಗಲಾಟೆ ಮಾಡುವ ಅವಶ್ಯಕತೆ ಇಲ್ಲ. ಗೃಹ ಇಲಾಖೆ ಹಾಗೂ ಗೃಹ ಮಂತ್ರಿ ನೇರವಾದ ಡೈರೆಕ್ಷನ್ ಕೊಟ್ಟಿದ್ದಾರೆ. ಯಾವುದೇ ರಾಜ್ಯದ ಕಾರ್ಮಿಕರಿದ್ದರೂ ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ. ಆಯಾ ರಾಜ್ಯ ಸರ್ಕಾರ ಕಾರ್ಮಿಕರಿಗೆ ಬೇಕಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಎಲ್ಲಿಯೂ ಅಗತ್ಯವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಬಂದಿಲ್ಲ. ಕೊರೊನಾ ವಿರುದ್ದ ಹೋರಾಡುತ್ತಿರುವ  ಆಸ್ಪತ್ರೆ ಡಾಕ್ಟರ್, ನರ್ಸ್‌ಗಳು, ಪೊಲೀಸ್ ಇಲಾಖೆ, ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ