ಸವದತ್ತಿ: ನನ್ನ ಕ್ಷೇತ್ರದ ಪ್ರತಿಯೊಂದು ಬಡ ಕುಟುಂಬದ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಇಂದು ಮದುವೆಯ ಸಂಭ್ರಮದಲ್ಲಿರುವ ಸವದತ್ತಿ ಮತಕ್ಷೇತ್ರದ ಸುಮಾರು 28 ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ “ಅಣ್ಣನ ಉಡುಗೊರೆ”ಯನ್ನು ನನ್ನ ಧರ್ಮಪತ್ನಿಯವರಾದ ಶ್ರೀಮತಿ Shruti Vaidya (ಶೃತಿ ವಿಶ್ವಾಸ್ ವೈದ್ಯ) ಅವರು ವಿತರಿಸಿದರು.
ಹೊಸ ಬಾಳಿಗೆ ಪಾದಾರ್ಪಣೆ ಮಾಡುತ್ತಿರುವ ನನ್ನ ಕ್ಷೇತ್ರದ ಸಹೋದರಿಯರಿಗೆ ನೆರವಾಗಲು ಅಡುಗೆ ಮನೆಯ ಭಾಂಡೆ ಸಾಮಗ್ರಿಗಳು, ಟ್ರೇಸುರಿ, ಮಂಚ (ಕಾಟ್) ಹಾಗೂ ಸೀರೆಗಳನ್ನು ಒಳಗೊಂಡ ಗೃಹೋಪಯೋಗಿ ವಸ್ತುಗಳನ್ನು ನೀಡಿ ಶುಭ ಹಾರೈಸಲಾಯಿತು.
ಜನಸಾಮಾನ್ಯರ ಸೇವಕನಾಗಿ, ಕಷ್ಟದಲ್ಲಿರುವ ಕುಟುಂಬಗಳ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ನಾನು ಸದಾ ಬದ್ಧನಾಗಿದ್ದೇನೆ. ನವದಂಪತಿಗಳ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಈ ಮೂಲಕ ಹಾರೈಸುತ್ತೇನೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Laxmi News 24×7