Breaking News

ವಕ್ಫ್‌, ಅಬಕಾರಿ ಸೇರಿ ಸುನೇತ್ರಾ ಪವಾರ್‌ಗೆ 4 ಖಾತೆ ಹಂಚಿಕೆ – ಹಣಕಾಸು ತಮ್ಮಲ್ಲೇ ಇಟ್ಟುಕೊಂಡ ಫಡ್ನವಿಸ್‌

Spread the love

ಮುಂಬೈ: ಅಜಿತ್ ಪವಾರ್  ಅವರ ನಿಧನದ ನಂತರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್  ಅವರಿಗೆ ರಾಜ್ಯ ಅಬಕಾರಿ (ಎಕ್ಸೈಸ್), ಕ್ರೀಡೆ ಮತ್ತು ಯುವ ಕಲ್ಯಾಣ, ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ವಕ್ಫ್ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ.

ಅಜಿತ್ ಪವಾರ್ ಅವರು ಹಿಂದೆ ಹೊಂದಿದ್ದ ಹಣಕಾಸು ಮತ್ತು ಯೋಜನಾ ಇಲಾಖೆಗಳನ್ನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಉಳಿಸಿಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಸಭೆಯಲ್ಲಿ ದೇವೇಂದ್ರ ಫಡ್ನವೀಸ್  ಅವರೇ ಬಜೆಟ್ ಪ್ರಸ್ತುತಪಡಿಸಲಿದ್ದಾರೆ.

ಪತಿ ಬಳಸುತ್ತಿದ್ದ ಕಚೇರಿಯೆ ನಿಗದಿ
‘ದೇವಗಿರಿ’ ಸರ್ಕಾರಿ ನಿವಾಸವೂ ಸುನೇತ್ರಾ ಪವಾರ್‌ಗೆ ಮಲಾಬಾರ್ ಹಿಲ್‌ನಲ್ಲಿರುವ ‘ದೇವಗಿರಿ’ ಸರ್ಕಾರಿ ನಿವಾಸವನ್ನ ಸಹ ಸುನೇತ್ರಾ ಪವಾರ್ ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ವಾರದ ಅಂತ್ಯದ ವೇಳೆಗೆ ಸುನೇತ್ರಾ ಪವಾರ್ ಅವರು ಔಪಚಾರಿಕವಾಗಿ ತಮ್ಮ ಕಚೇರಿಯ ಅಧಿಕಾರ ವಹಿಸಿಕೊಳ್ಳಬಹುದು.

ಸುನೇತ್ರಾ ಪವಾರ್ ಅವರಿಗೆ ರಾಜ್ಯ ಕಾರ್ಯಾಲಯದಲ್ಲಿ (ಸೆಕ್ರೆಟೇರಿಯಟ್) ಅವರ ದಿವಂಗತ ಪತಿ ಅಜಿತ್ ಪವಾರ್ ಅವರು ಬಳಸುತ್ತಿದ್ದ ಅದೇ ಕ್ಯಾಬಿನ್‌ಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯ ತೆಗೆದುಕೊಂಡಿದ್ದು, ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಸರ್ಕಾರಿ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶದ ಪ್ರಕಾರ, ಮುಖ್ಯ ಸೆಕ್ರೆಟೇರಿಯಟ್ ಕಟ್ಟಡದ 5, 6 ಮತ್ತು 7ನೇ ಮಹಡಿಗಳಲ್ಲಿರುವ ಕ್ಯಾಬಿನ್‌ಗಳನ್ನ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರಿಗೆ ನಿಯೋಜಿಸಲಾಗಿದೆ. ಇದರಲ್ಲಿ 6ನೇ ಮಹಡಿಯ ಉತ್ತರ ಭಾಗದ ಕಚೇರಿ ಸ್ಥಳ, 7ನೇ ಮಹಡಿಯ ಪೂರ್ವ ಭಾಗದ ಕ್ಯಾಬಿನ್‌ಗಳು, ಚೇಂಬರ್ ಸಂಖ್ಯೆ 717, 722 ಮತ್ತು 723 ಕ್ಯಾಬಿನ್‌ಗಳು ಹಾಗೂ 5ನೇ ಮಹಡಿಯ ಉತ್ತರ ಭಾಗದ 503 ಕ್ಯಾಬಿನ್ ಸೇರಿವೆ. ಸುನೇತ್ರಾ ಪವಾರ್ ಅವರು ಈ ವಾರದ ಅಂತ್ಯದೊಳಗೆ ತಮ್ಮ ಕಚೇರಿಯ ಔಪಚಾರಿಕ ಹೊಣೆಗಾರಿಕೆಯನ್ನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ