ಕೊಪ್ಪಳ: ಆತ ಪ್ರೇಮಿಯೇ ಇರಲಿ, ಪತಿಯೇ ಆಗಿರಲಿ. ತನ್ನ ಹೊರತಾಗಿ ಬೇರೊಂದು ಹೆಣ್ಣನ್ನು ಕಣ್ಣೆತ್ತಿ ನೋಡಿದ್ರೂ ಸಿಡಿಮಿಡಿಗೊಳ್ಳುವುದು ಭಾರತೀಯ ಹೆಣ್ಣು ಮಕ್ಕಳ ಹುಟ್ಟುಗುಣ. ಆದರೆ ಇಲ್ಲೊಂದು ಕಡೆ ಅಕ್ಕ ಪಕ್ಕ ಕುಳಿತು ಇಬ್ಬರು ಯುವತಿಯರನ್ನು ಒಬ್ಬನೇ ಮುದ್ದಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಸ್ವಾತಂತ್ರ್ಯನಾ? ಸ್ವೇಚ್ಚಾಚಾರವೇ ಎಂಬ ಪ್ರಶ್ನೆ ಮೂಡಿದೆ.
ಕೊಪ್ಪಳದ ಗಂಗಾವತಿಯ ನ್ಯಾಯಾಧೀಶರ ನಿವಾಸ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದಿನ ಜಾಗವನ್ನು ಕಾಲೇಜ್ ವಿದ್ಯಾರ್ಥಿಗಳು ಪ್ರಣಯದ ಅಡ್ಡ ಮಾಡಿಕೊಂಡಿದ್ದಾರೆ. ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪದವಿ ಕಾಲೇಜು ಸೇರಿ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳ ಈ ನಡೆ ಬಗ್ಗೆ ಸಾರ್ವಜನಿಕರು ಮತ್ತು ಅಯ್ಯಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜಿಗೆ ಚಕ್ಕರ್ ಹಾಕಿ ವಿದ್ಯಾರ್ಥಿಗಳು ಲವ್ವಿ ಡವ್ವಿ ಆಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಯ್ಯಪ್ಪ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮುಜುಗರವಾದರೂ ಕಾಣದಂತೆ ಸುಮ್ಮನಿರುತ್ತಾರೆ. ಅಯ್ಯಪ್ಪನ ಸನ್ನಿಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಈ ರೀತಿ ಮಾಡೋದು ಎಷ್ಟು ಸರಿ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ದಾರಿ ತಪ್ಪುತ್ತಿರೋ ವಿದ್ಯಾರ್ಥಿಗಳಿಗೆ ಕಾಡಿವಾಣ ಹಾಕವಂತೆ ಸಾರ್ವಜನಿಕರು ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಅಧ್ಯಕ್ಷ ಜಟ್ಟಿ ವೀರಪ್ಪ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸ್ವತಃ ನ್ಯಾಯಾಧೀಶರೇ ಪೊಲೀಸರ ಗಮನಕ್ಕೆ ತಂದಿದ್ದರೂ ಅವರು ಎಚ್ಚೆತ್ತುಕೊಳ್ಳುತ್ತಿಲ್ಲ.