Breaking News

ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದು ರಾಹುಲ್‌ ಜಾರಕಿಹೊಳಿ

Spread the love

ಗೋಕಾಕ: ಮದುವೆ, ಸಭೆ -ಸಮಾರಂಭ ಅನುಕೂಲಕ್ಕಾಗಿ ಸಮುದಾಯಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಸಮಾಜ ಸೇವೆಗಾಗಿ ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು.

ಇಲ್ಲಿನ ಹಿಲ್‌ ಗಾಡರ್ನ್‌ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಅರಭಾವಿ ಕ್ಷೇತ್ರದ ದೇವಸ್ಥಾನ, ಮಸ್ಜಿದ್ ,ಚರ್ಚ್, ಟ್ರಸ್ಟಿಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿ ಅವರು ಮಾತನಾಡಿದರು.

 

ತಂದೆಯವರಾದ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿ ಜತೆಗೆ ಸಮುದಾಯಗಳಿಗೆ ಸಾಕಷ್ಟು ಸಹಕಾರ ನೀಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.

 

ಅರಭಾವಿ ಕ್ಷೇತ್ರದ ತಿಮ್ಮಾಪುರ, ಕೊಪ್ಪದಡ್ಡಿ, ಹೊನಕುಪ್ಪಿ, ತಳಕಟನಾಳ, ಕಮಳದಿನ್ನಿ, ಮುನ್ಯಾಳ, ಗಣೇಶವಾಡಿ, ಬಡಿಗವಾಡ, ಅಡಿಬಟ್ಟಿ ಗ್ರಾಮಗಳಿಗೆ ಕುರ್ಚಿ ಸೌಂಡ್ ಸಿಸ್ಟಮ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ಕಲ್ಲಪ್ಪಗೌಡ ಲಕ್ಕಾರ, ಸಿದ್ದಾರೂಢ ಮಬನೂರ, ಪರ್ವತಗೌಡ ಪಾಟೀಲ, ಪ್ರಕಾಶ್ ಹೆಗಡೆ, ಲಕ್ಷ್ಮಣ ಮುಸಗುಪ್ಪಿ, ಮಲಕಾಜಿ ಕಬ್ಬೂರ , ಸಂಗಪ್ಪಾ ಸೂರನ್ನವರ , ಶಿವಲಿಂಗ ಪೂಜೇರಿ, ಮಾಳಪ್ಪಾ ಜಾಗನೂರ , ಅಡಿವೆಪ್ಪ ಕಂಕಾಳಿ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

Spread the love ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ