ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಜಟಾಪಟಿ ಮುಂದುವರೆದಿದ್ದು, ಇದೀಗ ಶಾಸಕರು ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಶಾಸಕ ಸಾ.ರಾ.ಮಹೇಶ್ ಭೂ ಅಕ್ರಮ ಮಾಡಿದ್ದಾರೆ. ಎಂಬ ರೋಹಿಣಿ ಸಿಂಧೂರಿ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ನಾನು ಯಾವುದೇ ಭೂ ಕಬಳಿಕೆ ಮಾಡಿಲ್ಲ. ಆದರೂ ರೋಹಿಣಿ ಸಿಂಧೂರಿ ನನ್ನ ವಿರುದ್ಧ ಆರೋಪ ಮಾಡಿದ್ದಲ್ಲದೇ ನಾನು ಭೂ ಕಬಳಿಕೆ ಮಾಡಿದ್ದೇನೆ ಎಂದು ಬಿಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ 1 ಕೋಟಿ ರೂಪಾಯಿ ಮಾನ ನಷ್ಟಮೊಕದ್ದಮೆ ದಾಖಲಿಸಿದ್ದೇನೆ ಎಂದರು.
ನಾನು ರಾಜಕಾರಣವನ್ನೇ ಬಿಡಲು ಸಿದ್ದನಿದ್ದೇನೆ ಹೊರತು ಇಂತಹ ಗೋಮುಖ ಅಧಿಕಾರಿಗಳ ಮುಖವಾಡ ಕಳಚುವುದನ್ನು ಬಿಡಲ್ಲ. ಕಷ್ಟಪಟ್ಟು ಬೆಳೆದ ನನ್ನ ವಿರುದ್ಧ ಕೆಲವರು ಆರೋಪ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
Laxmi News 24×7