ಬೆಂಗಳೂರು: ನಗರದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗುತ್ತಿರುವ ವದಂತಿ ನಡುವೆ ಶೆಲ್ ಪೆಟ್ರೋಲ್ ಬಂಕ್‌ಗಳು ಜನತೆಗೆ ಶಾಕ್ ಕೊಟ್ಟಿವೆ. ನಯಾರ ಪೆಟ್ರೋಲ್ ಬಂಕ್ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಶೆಲ್ ಪೆಟ್ರೋಲ್ ಬಂಕ್ ಕೂಡ ದರ ಹೆಚ್ಚಿಸಿದೆ.
ಬಂಕ್‌ಗಳಲ್ಲಿ ಏಕಾಏಕಿ 1 ಲೀ. ಪೆಟ್ರೋಲ್ ಬೆಲೆ 6 ರೂಪಾಯಿ ಮತ್ತು 1 ಲೀ. ಡೀಸೆಲ್ ಬೆಲೆ 7 ರೂಪಾಯಿ ಹೆಚ್ಚಿಸಿದೆ. ಇದು ಕಳೆದ 15 ದಿನಗಳಲ್ಲಿ 3ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ಜೊತೆಗೆ ಸಾಮಾನ್ಯ ಪೆಟ್ರೋಲ್ ದರವನ್ನು ಶೆಲ್ ಪೆಟ್ರೋಲ್ ಬಂಕ್ ಹೆಚ್ಚಳ ಮಾಡಿದೆ.
106 ರೂ. ಇದ್ದ ಪೆಟ್ರೋಲ್ ದರವನ್ನ 108.50 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ 6 ರೂಪಾಯಿ ಹೆಚ್ಚಿಸಿದ್ದು, ಸಾಮಾನ್ಯ ಪೆಟ್ರೋಲ್ ದರ 112 ರೂ.ಗೆ ಹೆಚ್ಚಳವಾಗಿದ್ದರೆ, ಪ್ರಿಮಿಯಂ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 122.42 ರೂಪಾಯಿ ತಲುಪಿದೆ.
ಇನ್ನೂ ಸಾಮಾನ್ಯ ಡೀಸೆಲ್ ಬೆಲೆ ಕಳೆದ ವಾರ 91 ರೂ. ನಿಂದ 93.50 ರೂ.ಗಳಿಗೆ ಏರಿಕೆಯಾಗಿತ್ತು. ಇದೀಗ ಲೀಟರ್ ಡಿಸೇಲ್ 98 ರೂಪಾಯಿಗೆ ಹೆಚ್ಚಳವಾಗಿದ್ದು, ಪ್ರಿಮಿಯಂ ಡೀಸೆಲ್ ಪ್ರತಿ ಲೀ.ಗೆ 108.50 ರೂ. ತಲುಪಿದೆ.
ಯುದ್ಧದ ಎಫೆಕ್ಟ್‌ನಿಂದ ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಬೇಸತ್ತಿರುವ ಜನ ಪೆಟ್ರೋಲ್ ದರ ಏರಿಕೆ ಕುರಿತು ಆಕ್ರೋಶ ಹೊರಹಾಕಿದ್ದಾರೆ.
Laxmi News 24×7