Breaking News

ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

Spread the love

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಸೇರಿದಂತೆ ತಮ್ಮ ದಿನ ನಿತ್ಯದ ಚಟುವಟಿಕೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜ್‍ ಕುಂದ್ರಾ ಕಾಣಿಸದೇ ಇರುವುದರ ಕುರಿತಾಗಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಈ ವೀಕೆಂಡ್‌ನಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಾದ ವಿಯಾನ್, ಸಮಿಷಾ ಹಾಗೂ ತಾಯಿ ಸುನಂದಾ ಶೆಟ್ಟಿ ಜೊತೆಯಲ್ಲಿ ಆಲಿಬಾಗ್‍ಗೆ ಹೋಗಿದ್ದಾರೆ.

ಶಿಲ್ಪಾ ಶೆಟ್ಟಿ ತೆರಳುವಾಗ ನಗುಮೊಗದಿಂದಲೇ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ರಾಜ್ ಕುಂದ್ರಾ ಗೈರು ಅವರ ಅಭಿಮಾನಿಗಳಿಗೆ ಎದ್ದು ಕಂಡಿದೆ.

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಹಂಚಿಕೆಯ ಪ್ರಕರಣದ ಪ್ರಮುಖ ಆರೋಪಿಯಾಗಿ ರಾಜ್ ಕುಂದ್ರಾ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ಇದುವರೆಗೆ ಅವರು ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

ಶಿಲ್ಪಾ ನೀಲಿ ಬಣ್ಣದ ಶರ್ಟ್, ಡ್ರೆಸ್ ಧರಿಸಿ ಗುಲಾಬಿ ಬಣ್ಣದ ಫ್ರಾಕ್ ಧರಿಸಿದ ಸಮಿಷಾಳನ್ನು ತನ್ನ ಸೊಂಟದ ಮೇಲೆ ಹೊತ್ತಿದ್ದರು. ವಿಯಾನ್ ಬಿಳಿ ಬಗೆಯ ಉಣ್ಣೆಬಟ್ಟೆ ಟಿ-ಶರ್ಟ್, ನೀಲಿ ಶಾರ್ಟ್‍ನಲ್ಲಿ ಕಾಣಿಸಿಕೊಂಡಿದ್ದಾನೆ. ಸುನಂದಾ ಅವರು ನೇರಳೆ ಸಲ್ವಾರ್ ಕಮೀಜ್ ತೊಟ್ಟುಕೊಂಡಿದ್ದರು. ರಾಯಲ್ ಪ್ಯಾಮಿಲಿ ಸರಳ ಉಡುಗೆಯಲ್ಲಿ ಸಖತ್ ಅಟ್ರಾಕ್ಟಿವ್ ಆಗಿ ಕಾಣಿಸಿಕೊಂಡಿದೆ.

 

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹಬ್ಬಗಳ ಆಚರಣೆಯ ಚಿತ್ರಗಳಲ್ಲೂ ರಾಜ್ ಕುಂದ್ರಾ ಸುಳಿವಿರಲಿಲ್ಲ.

ರಾಜ್ ಕುಂದ್ರಾ ಕುಟುಂಬದ ಜೊತೆಗೆ ಉದ್ದೇಶಪೂರ್ವಕವಾಗಿ ಸುದ್ದಿಯಾಗುವುದರಿಂದ ದೂರವಿದ್ದಾರೋ ಅಥವಾ ಬೇರೆ ಕಾರಣ ಇದೆಯೋ ಎಂಬುದು ಅಭಿಮಾನಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ.

ಶಿಲ್ಪಾ ತಮ್ಮ ಕುಟುಂಬದವರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

 


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ಅ.1 ರಿಂದ ಗದಗ ರಸ್ತೆ ಫ್ಲೈಓವರ್ ಕಾಮಗಾರಿ ಶುರು: ತಹಶೀಲ್ದಾರ್, ಪೊಲೀಸ್ ಠಾಣೆ ಸೇರಿ ಯಾವೆಲ್ಲ ಕಟ್ಟಡಗಳು ತೆರವು?

Spread the loveಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ‌ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲ ತಿಂಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ