ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಅಸಹಜ ಸಾವು ಕಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ಆರೋಪಿ ಶಂಕರ್ ವಿರುದ್ಧ ಮಾಹಿತಿ ಹಕ್ಕು ಕಾಯ್ದೆ (RTI) ಯನ್ನು ದುರುಪಯೋಗ ಪಡಿಸಿಕೊಂಡು ಹಣ ಪೀಕಿರುವ ಆರೋಪ ಕೇಳಿ ಬಂದಿದೆ.
ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿದ್ದ ಶಂಕರ್..!
ರಾಜ್ಯದ ವಿವಿಧ ಅಬಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್..!
ಶಂಕರ್ ಮನೆಯ ರಹಸ್ಯ ಒಂದೊಂದಾಗೇ ಹೊರ ಬರ್ತಿವೆ ಶಂಕರ್ ಮೊದಲು ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿ ಕೆಲಸ ನಿರ್ವಹಿಸಿದ್ದು, ಅಬಕಾರಿ ಇಲಾಖೆಯ ನೌಕರಿಗೆ ರಾಜೀನಾಮೆ ನೀಡಿ ಬಳಿಕ RTI ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದ ಎನ್ನಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿದ್ದೇ ಪ್ಲಸ್ ಪಾಯಿಂಟ್ ಮಾಡಿಕೊಂಡ ಶಂಕರ್ ಇಲಾಖೆಯಲ್ಲಿ ನಡೆಯುತ್ತಿದ್ದ ಎಲ್ಲ ಬಗೆಯ ಕರ್ಮಕಾಂಡಗಳ ಬಗ್ಗೆ ತಿಳಿದ್ದನಂತೆ. ಕೆಲಸ ಬಿಟ್ಟ ನಂತರ RTI ಅರ್ಜಿ ಹಾಕಿ ಅಬಕಾರಿ ಅಧಿಕಾರಿಗಳ ಸುಲಿಗೆಗೆ ಶಂಕರ್ ನಿಂತಿದ್ದನಂತೆ.
ತಾಲೂಕು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ RTI ಅಸ್ತ್ರ ಬಳಸಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು ಪೊಲೀಸ್ ತನಿಖೆಯಲ್ಲಿ ಶಂಕರ್ ಮತ್ತು ಅಬಕಾರಿ ಇಲಾಖೆಯ ಬಗೆಗಿನ ಮಾಹಿತಿ ರಿವೀಲ್ ಆಗಿದ್ದು ರಾಜ್ಯದ ವಿವಿಧ ಅಬಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್ ಎನ್ನಲಾಗಿದೆ.