ಗೋಕಾಕ: ಸಾರಿಗೆ ಸಂಸ್ಥೆ ಬಸ್ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ಆರಂಭಗೊಂಡಿಲ್ಲ.
ಇದರಿಂದ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ರಸ್ತೆ ಬದಿಯಲ್ಲಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಗೋಕಾಕ ತಾಲೂಕಿನ ಸಾವಳಗಿ. ಶಿವಾಪೂರ.ಕೊಣ್ಣೂರ. ಮರಡಿಮಠ.ಪಾಲ್ಸ
ಸೇರಿದಂತೆ ಎಲ್ಲ ಹಳ್ಳಿಯ ಶಾಲಾ ವಿದ್ಯಾರ್ಥಿಗಳು ಹಾಗೂ ಪದವಿ ಕಾಲೇಜ ವಿದ್ಯಾರ್ಥಿಗಳು ತಾಲೂಕಾ ಕೇಂದ್ರಕ್ಕೆ ಬರಬೇಕು.
ಇಲ್ಲಿನ ಎಲ್ಲ ವಿದ್ಯಾರ್ಥಿಗಳು 20 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲವೆಂದು ವಿದ್ಯಾರ್ಥಿಗಳಪೋಷಕರು ದೂರಿದ್ದಾರೆ..
Laxmi News 24×7