ಗೋಕಾಕ: ಕೊಣ್ಣೂರು ಶಾಲಾಭಿವೃದ್ಧಿ ಕಾರ್ಯಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಶಾಲಾ ಪ್ರಾಚಾರ್ಯರು ಮನವಿ ಮಾಡಿಕೊಂಡ ಹಿನ್ನೆಲೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರಿಗೆ ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಇಂದು ಶಾಲೆಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ತಾಲ್ಲೂಕಿನ ಕೊಣ್ಣೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 245 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹು ವರ್ಷಗಳಿಂದ ಶಾಲೆಯೂ ಸುಣ್ಣ-ಬಣ್ಣ ಮಾಡಿಲ್ಲ, ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಮಹತ್ವದ ಕಾರ್ಯವಾಗುತ್ತಿವೆ. ಈಗಾಗಲೇ ಸಾಕಷ್ಟು ಶಾಲೆಗಳ ಅಭಿವೃದ್ಧಿ ಸಂಘ-ಸಂಸ್ಥೆಗಳಿಗೆ ಸಹಕಾರ ಮಾಡಿರುವುದು ಹೆಮ್ಮೆಯ ವಿಷಯ.
ಈ ಗೋಕಾಕ ಮತಕ್ಷೇತ್ರದ ಕೊಣ್ಣೂರು ಸರ್ಕಾರಿ ಶಾಲೆಯೂ ಸ್ವಚ್ಛತೆ ಕೊರತೆ ನಲುಗುತ್ತಿದೆ . ನಿಮ್ಮ ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಶಾಲೆಯನ್ನು ಸ್ವಚ್ಛತೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂಧಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಶಾಲೆಗೆ ನೂತನ ಸ್ಪರ್ಶ ನೀಡಲಾಗುವುದು ಎಂದು ಭರವಸೆ ನೀಡಿದರು. ಅದು ಈಗ್ ಸಾಕಾರಗೊಂಡಿದೆ.
ಕೊಣ್ಣೂರು ಸರ್ಕಾರಿ ಪ್ರಾಥಮಿಕ ಶಾಲೆ ಸುಣ್ಣ-ಬಣ್ಣ
ಸತೀಶ ಜಾರಕಿಹೊಳಿ ಪೌಂಡೇಶನ್ ಸದಸ್ಯರು ಇಂದು ಶಾಲೆಯ ಕಿಟಕಿ, ಆವರಣದ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು, ಹೊಸ ರೂಪ ನೀಡಿದ್ದಾರೆ. ಶಾಲೆಯನ್ನು ಸ್ವಚ್ಛಗೊಳ್ಳಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು. ಈ ಕಾರ್ಯಕ್ಕೆ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಸದಸ್ಯರಾದ ಜುಬೇರ ಮಿರ್ಜಾಬಾಯಿ, ಪ್ರವೀಣ ಕಳ್ಳಿಮನಿ, ದುರ್ಯೋಧನ ಕಡಕೋಳ, ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್.ನನ್ನದೆಪ್ಪನವರ, ಶಿಕ್ಷಕ ಎಂ.ಎಂ ಪೀರಜಾದೆ, ವಿನೋದ್ ಮೋರದ, ಸತೀಶ ಕೋಳಕ್ಕಿ, ಸುನೀಲ ಬಿರಡಿ, ಸಮರಿಯಾ ಭಜಂತ್ರಿ, ರಪೀಕ ಕುಂಬಾರಿ, ಪ್ರಜ್ವಲ್ ನಾಯಿಕ ಸೇರಿದಂತೆ ಇತರರು ಇದ್ದರು.