ಬೆಳಗಾವಿ ಲೋಕಸಭೆ ಬೈಎಲೆಕ್ಷನ್‍ಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಯಾರೂ ಮುಂಚೂಣಿಗೆ ತರುತ್ತಿಲ್ಲ. ಸಭೆಯಲ್ಲಿ ನನ್ನ ಹೆಸರು ಚರ್ಚೆ ಆಗಿದೆ ಹೀಗಾಗಿ ಬರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
: ಬೆಳಗಾವಿ ಲೋಕಸಭೆಯಲ್ಲಿ ನಿಮ್ಮ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ರಾಜ್ಯ ರಾಜ ರಾಜಕಾರಣದಿಂದ ನಿಮ್ಮನ್ನು ದೂರ ಮಾಡಲು ಏನಾದ್ರು ಷಡ್ಯಂತ್ರ ನಡೆದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಆ ರೀತಿ ಏನೂ ಇಲ್ಲ. ರಾಜಕೀಯ ಎಂದರೆ ಹಾಗೇ ವ್ಯವಸ್ಥೆ ಹಾಗೆಯೇ ಇರುತ್ತದೆ. ಆದ್ರೆ ನಾವು ಹುಷಾರಾಗಿರಬೇಕು ಎನ್ನುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದರು. ಇನ್ನು ರಾಜಕೀಯ ಮಾಡ್ತಿಯಾ ಅಂತಾ ಹೇಳ್ತಾರಲ್ಲಾ ಅದಕ್ಕೆ ಅಂತಿಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಸಭೆ ಆಗಬೇಕು. ಆ ಸಭೆಯಲ್ಲಿ ಯಾರು ಹೆಸರು ಅಂತಿಮವಾಗುತ್ತೊ ಅವರೇ ಫೈನಲ್ ಆಗುತ್ತಾರೆ. ಲಖನ್ ಜಾರಕಿಹೊಳಿಗೆ ಅವರು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನಿಂದ ಅಶೋಕ್ ಪೂಜಾರಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಅಶೋಕ ಪೂಜಾರಿ ಇನ್ನೂ ನಮ್ಮ ಪಕ್ಷಕ್ಕೆ ಸೇರಿಯೇ ಇಲ್ಲ. ಸೇರಿದ ನಂತರ ಮುಂದೆ ವಿಚಾರ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ-ತತ್ವ ಒಪ್ಪಿ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಅಲ್ಲದೇ ಚುನಾವಣೆ ಇನ್ನು ಘೋಷಣೆ ಆಗಿಲ್ಲ. ಚುನಾವಣೆ ಘೋಷಣೆ ಆದ ಮೇಲೆ ಸ್ಪಷ್ಟವಾದ ಉತ್ತರ ಹೇಳುತ್ತೇನೆ ಎಂದರು.
; 2013ರಲ್ಲಿಯೂ ಹೆಲಿಕಾಪ್ಟರ್ ಹಾರಿಸಿದ್ದಿರಿ ಆಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು ಈಗ ಮತ್ತೆ ಹೆಲಿಕಾಪ್ಟರ್ ಹಾರಿಸುತ್ತಿದ್ದಿರಿ ಮತ್ತೆ ಏನಾದ್ರೂ ಸರ್ಕಾರ ಬರುವ ಮುನ್ಸೂಚನೆ ಏನಾದ್ರು ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ ಈಗ ಯಾವುದೇ ಚುನಾವಣೆ ಪ್ರಚಾರ ಇಲ್ಲ. ಮದುವೆ ಕಾರ್ಯಕ್ರಮ ಹಿನ್ನೆಲೆ ಹೋಗುತ್ತಿದ್ದೇನೆ. ಎಲ್ಲೆಲ್ಲಿ ಅವಕಾಶ ಇದೆಯೋ ಅಲ್ಲಿ ಹಾರಿಸುತ್ತಿದ್ದೇವೆ, ಆದರೆ ಪ್ರಯತ್ನ ಅಂತೂ ಮಾಡುತ್ತಿದ್ದೇವೆ ಎಂದು ಹೇಳಿದರು.
: ಒಟ್ಟಾರೆ ಬೆಳಗಾವಿ ಲೋಕಸಭೆ ಬೈಎಲೆಕ್ಷನ್ ವಿಚಾರದಲ್ಲಿ ಹೈಕಮಾಂಡ್ ಆದೇಶವನ್ನು ಪಾಲಿಸುತ್ತೇನೆ ಎಂದು ಈ ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೆ ಹೇಳುತ್ತೇನೆ ಎಂದು ಎಲ್ಲಾ ಊಹಾಪೋಹಗಳಿಗೂ ಸತೀಶ ಜಾರಕಿಹೊಳಿ ತೆರೆ ಎಳೆದರು.